Bigg Boss OTT Weekend War: ಮನರಂಜನೆಯ ಗುಚ್ಛ ಎಂದೇ ಹೇಳಿರುವ ಟಿವಿ ರಿಯಾಲಿಟಿ ಶೋನ ಪ್ರಮುಖ ಶೋ ನೇ ಬಿಗ್ ಬಾಸ್. ಒಂದು ಹಂತದಲ್ಲಿ ಸಭ್ಯತೆಯನ್ನು ಮೀರದೆ ನಡೆಯುವ ಈ ರಿಯಾಲಿಟಿ ಶೋ ಇತ್ತೀಚೆಗೆ ಯಾಕೋ ಸಭ್ಯತೆಯ ಎಲ್ಲೆಯನ್ನು ಮೀರಿದೆ ಎಂದು ಕಾಣುತ್ತದೆ. ಹಿಂದಿಯ ಬಿಗ್‌ಬಾಸ್ ಒಟಿಟಿ ಈಗಾಗಲೇ ಪ್ರಾರಂಭವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಆದರೆ ಇಲ್ಲೊಂದು ಟಾಸ್ಕ್‌ನಲ್ಲಿ ಜೋಡಿಯೊಂದು ಖುಲ್ಲಂ ಖುಲ್ಲಂ ಲಿಪ್ ಟು ಲಿಪ್ ಕಿಸ್ ನೀಡಿ ದೇಶದ ಜನರೇ ಟೀಕೆ ಮಾಡುವ ಹಾಗೆ ಮಾಡಿತ್ತು.
ಆದರೆ ವೀಕೆಂಡ್‌ಕಾ ವಾರ್‌ನಲ್ಲಿ ಸಲ್ಮಾನ್ ಖಾನ್ ಅವರು ಈ ಘಟನೆ ಕುರಿತು ಕ್ಲಾಸ್ ತಗೊಂಡಿದ್ದು, ಸಿಟ್ಟುಗೊಂಡಿದ್ದರು. ಈ ಕಿಸ್ ಮಾಡಿದ ಎರಡು ಕಂಟೆಂಸ್ಟೆಂಟ್‌ಗಳೇ ಆಕಾಂಕ್ಷಾ ಪುರಿ ಮತ್ತು ಜೆಡಿ ಹದಿದ್.
ಬಿಗ್‌ಬಾಸ್ ಒಟಿಟಿ 2 ರಲ್ಲಿ ಆಕಾಂಕ್ಷಾ ಪುರಿ ತಮ್ಮ ಪ್ರಯಾಣದಲ್ಲಿ ಬಹಳ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಒಂದು ಕಡೆ ತಮ್ಮ ಕುಟುಂಬಸ್ಥರನ್ನು ಫೇಕ್ ಎಂದು ಹೇಳಿದರೆ ಮತ್ತೊಂದೆಡೆ 30ಸೆಕೆಂಡುಗಳ ಕಾಲ ಕ್ಯಾಮೆರಾ ಮುಂದೆ ಜೆಡಿ ಹದಿದ್ ಅವರನ್ನು ಚುಂಬಿಸಿದ್ದಾರೆ. ಇದರಿಂದ ಆಕಾಂಕ್ಷಾ ಬಹಳ ಟ್ರೋಲ್‌ಗೆ ಒಳಗಾಗಿದ್ರು. ಹಾಗೆನೇ ಸಲ್ಮಾನ್ ಖಾನ್ ಕೂಡಾ ಒಟಿಟಿಯಲ್ಲಿ ಮಿತಿಯಲ್ಲಿ ವರ್ತಿಸಬೇಕು ಎಂದು ಮಾತು ಪ್ರಾರಂಭಿಸಿ, ಆಕಾಂಕ್ಷಾ ಪುರಿ ಮತ್ತು ಜೈದ್ ಹದಿದ್ ಅವರ ಕ್ರಮಗಳ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮನೆಯ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಅಭಿಷೇಕ್ ಮತ್ತು ಆಕಾಂಕ್ಷಾ ಪುರಿ ಅವರನ್ನು ನಾಮಿನೇಟ್ ಮಾಡಲಾಗಿತ್ತು. ಕೊನೆಯದಾಗಿ ಆಕಾಂಕ್ಷ ಪುರಿ ಮನೆಯಿಂದ ಹೊರಹೋಗಬೇಕಾಯಿತು. ಅದೇ ಸಮಯದಲ್ಲಿ ಸಲ್ಮಾನ್ ಖಾನ್ ಕೋಪ ಜೆಡಿ ಹದಿದ್ ಮೇಲೆ ಹೆಚ್ಚಾಗಿತ್ತು. ಕ್ಯಾಮೆರಾ ಮುಂದೆನೇ ಇಂತಹ ಕೃತ್ಯ ಮಾಡಿದ್ದಕ್ಕೆ ಸಲ್ಮಾನ್ ಖಾನ್ ನೇರವಾಗಿ ಜೆಡಿ ಹದಿದ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಮುಂದಿನ ವಾರದಲ್ಲಿ ಜೆಡಿಯು ಎಲಿಮಿನೇಷನನ್ನು ಎದುರಿಸಬೇಕಾಗುತ್ತದೆ.
ಬಿಗ್ ಬಾಸ್ OTT 2 ಮನೆಯಿಂದ ಇಲ್ಲಿಯವರೆಗೆ ಆಕಾಂಕ್ಷಾ ಪುರಿ, ಪುನೀತ್ ಸೂಪರ್‌ಸ್ಟಾರ್, ಪಾಲಕ್ ಪುರಸ್ವಾನಿ ಮತ್ತು ಆಲಿಯಾ ಸಿದ್ದಿಕಿಯನ್ನು ಹೊರಹಾಕಲಾಗಿದೆ. ಈಗ ಮನೆಯಲ್ಲಿ ಉಳಿದಿರುವುದು ಕೇವಲ 9 ಸ್ಪರ್ಧಿಗಳು. ಇದರಲ್ಲಿ ಬಾಬಿಕಾ ಧುರ್ವೆ, ಜಿಯಾ ಶಂಕರ್, ಅವಿನಾಶ್ ಸಚ್‌ದೇವ್, ಫಲಕ್ ನಾಜ್, ಜೆಡಿ ಹದಿದ್, ಮನೀಶಾ ರಾಣಿ, ಸೈರಸ್ ಬ್ರೋಚಾ, ಅಭಿಷೇಕ್ ಮಲ್ಹಾನ್ ಮತ್ತು ಪೂಜಾ ಭಟ್ ಸೇರಿದ್ದಾರೆ.
ಇದನ್ನು ಓದಿ: HD Kumaraswamy: ಸಮ್ಮಿಶ್ರ ಸರ್ಕಾರದಲ್ಲಿ ಡಮ್ಮಿ ಆಗಿದ್ರಾ ಕುಮಾರಣ್ಣ?! ಮಾಜಿ ಸಿಎಂ ಕುಮಾರಸ್ವಾಮಿಯಿಂದ ಬಿಗ್ ಹೇಳಿಕೆ !
