Home » Team India Cricketer: ಟೀಂ ಇಂಡಿಯಾದ ಈಗಿನ ಈ ಕ್ರಿಕೆಟರ್ ತನ್ನ ಟೀಚರ್’ನನ್ನೇ ಲವ್ ಮಾಡಿದ್ದ, ಯಾರಾತ ?

Team India Cricketer: ಟೀಂ ಇಂಡಿಯಾದ ಈಗಿನ ಈ ಕ್ರಿಕೆಟರ್ ತನ್ನ ಟೀಚರ್’ನನ್ನೇ ಲವ್ ಮಾಡಿದ್ದ, ಯಾರಾತ ?

0 comments
Team India Cricketer

Team India Cricketer: ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಮತ್ತು ಅವರ ಪತ್ನಿ ಧನಶ್ರೀ ವರ್ಮಾ ತಮ್ಮ ಪ್ರೇಮಕಥೆಯ ಬಗ್ಗೆ ಇಂಟರೆಸ್ಟಿಂಗ್ ಸಂಗತಿ ಇದೀಗ ಲಭ್ಯವಾಗಿದೆ. ಈ ಬಗ್ಗೆ ಸುದ್ದಿ ಕೇಳಿದ ಆತನ ಅಭಿಮಾನಿಗಳಿಗೆ ಸಣ್ಣ ಶಾಕ್ ಆಗಿದೆ. ಹೌದು, ಈ ದಂಪತಿಗಳು ಮೊದಲ ಬಾರಿಗೆ ಭೇಟಿಯಾದಾಗಿನಿಂದ ಪರಸ್ಪರ ಮದುವೆಯಾಗಲು ನಿರ್ಧರಿಸುವವರೆಗಿನ ಕಥೆಯನ್ನು ವಿವರಿಸಿದ್ದಾರೆ. ಕ್ರಿಕೆಟ್ (Team India Cricketer) ಅಂಗಳದ ಕಿಲಾಡಿ ಚಹಾಲ್ ಚಾಲಾಕಿಗೆ ಹುಡುಗರು ಭಲೇ ಅನ್ನುತ್ತಿದ್ದಾರೆ. ಯಾಕೆಂದ್ರೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮದುವೆಯಾದದ್ದು ತನ್ನ ಸ್ವಂತ ಟೀಚರ್ ಅನ್ನು ಎಂಬ ವಿಷ್ಯ ನಿಮಗೆ ತಿಳಿದಿದೆಯೇ ?

Team India Crickete

ಅದು ಲಾಕ್‌ಡೌನ್ ಸಮಯ. ಧನಶ್ರೀ ಅವರ ಕೆಲವು ನೃತ್ಯ ಪ್ರದರ್ಶನಗಳನ್ನು ಟಿಕ್‌ಟಾಕ್‌ನಲ್ಲಿ ಹಾಕಿದ್ದರು. ಅದನ್ನು ವೀಕ್ಷಿಸಿದ ನಂತರ ಅವರಿಗೆ ಸಂದೇಶ ಕಳುಹಿಸಿದ್ದಾರೆ. ನನಗೆ ಡ್ಯಾನ್ಸ್ ಸ್ಟೆಪ್ ಗಳನ್ನು ಕಲಿಯಬೇಕಿದೆ. ನನಗೆ ಆನ್‌ಲೈನ್ ಸೆಷನ್‌ಗಳನ್ನು ನೀಡಬಹುದೇ ಎಂದು ಅವರು ವಿಚಾರಿಸಿದ್ದಾರೆ. ನೃತ್ಯದ ವಿಷಯ ಬಿಟ್ಟು ಆರಂಭದಲ್ಲಿ ಹೆಚ್ಚು ಮಾತೇ ಆಡಿಲ್ಲ ಮತ್ತು ನೃತ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದರಂತೆ.

ಮೊನ್ನೆ ರಣವೀರ್ ಶೋನಲ್ಲಿ ಚಹಾಲ್ ಅವರ ಮತ್ತು ಧನಶ್ರೀಯ ಮದುವೆಯ ಕುರಿತಾದ ಒಂದು ಇಂಟರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಾನು ತನ್ನ ಶಿಕ್ಷಕಿಯನ್ನೇ ಮದುವೆಯಾದ ವಿಷಯವನ್ನು ಚಾಹಲ್ ಬಹಿರಂಗಪಡಿಸಿದ್ದಾರೆ.

ಹೌದು, ಧನಶ್ರೀಗೆ ಕ್ರಿಕೆಟರ್ ಚಾಹಲ್ ಮೆಸೇಜ್ ಮಾಡಿ ನನಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಡುವಂತೆ ಕೋರಿಕೊಂಡಾಗ ಧನಶ್ರೀ ಓಕೆ ಅಂದಿದ್ದರು. ಆಕೆಯ ಬಳಿ ಆತ ಡ್ಯಾನ್ಸ್ ಕಲಿಯುವಾಗ ಆಕೆಗೆ ಆತ ಭಾರತ ಕ್ರಿಕೆಟ್ ತಂಡದ ಓರ್ವ ಆಟಗಾರ ಎಂಬುದೇ ತಿಳಿದಿರಲಿಲ್ಲ. ಕಾರಣ, ಕೆಲವು ವರ್ಷಗಳ ಹಿಂದೆಯೇ ಆಕೆ ಕ್ರಿಕೆಟ್ ಅನ್ನು ವೀಕ್ಷಿಸುವುದನ್ನು ಬಿಟ್ಟುಬಿಟ್ಟಿದ್ದಳು.

ಈ ಕ್ರಿಕೆಟಿಗನು ಅತ್ಯಂತ ಬದ್ಧತೆಯ ವಿದ್ಯಾರ್ಥಿಯಾಗಿದ್ದು, ಅವನಿಗೆ ನಿಯೋಜಿಸಲಾದ ಯಾವುದೇ ಯೋಜನೆಯನ್ನು ಸಾಧಿಸಲು ಶ್ರಮಿಸುತ್ತಿದ್ದ ಎಂದು ಧನಶ್ರೀ ಹೇಳಿದ್ದಾಳೆ ಅವನ ಈ ಬದ್ಧತೆ ಮತ್ತು ಇತರರೊಂದಿಗೆ ಆತನ ಸಭ್ಯತೆ ತನ್ನ ಗಮನ ಸೆಳೆದಿತ್ತು ಎಂದು ಆಕೆ ಹೇಳಿಕೊಂಡಿದ್ದಾಳೆ.

ಶೋನಲ್ಲಿ ಮಾತನಾಡಿದ ಚಹಾಲ್ ಧನಶ್ರೀ ಬಗ್ಗೆ ತುಂಬಾ ಪಾಸಿಟಿವ್ ಆದ ಅಂಶಗಳನ್ನು ಹೇಳಿದ್ದಾರೆ. “ನನಗೆ ಅವಳ ವೈಬ್ಸ್ ಇಷ್ಟವಾಯಿತು. ನಾನು ಹೇಗೆ ಸ್ವಯಂ ನಿರ್ಮಿತ ಪುರುಷನೋ ಹಾಗೆಯೇ ಅವಳು ಕೂಡಾ ಸ್ವಯಂ ನಿರ್ಮಿತ ಮಹಿಳೆ. ಒಂದು ದಿನ ನಾನು ಅವಳಿಗೆ, ‘ ನಾನು ನಿನ್ನೊಂದಿಗೆ ಡೇಟಿಂಗ್ ಮಾಡಲು ಬಯಸುವುದಿಲ್ಲ. ನಾನು ನಿನ್ನನ್ನು ಮದುವೆಯಾಗಲು ಬಯಸುತ್ತೇನೆ. ನಾನು ಅದನ್ನು ನೇರವಾಗಿ ಹೇಳಿದೆ. ‘ ಆಕೆ ಕೂಡಾ ಒಪ್ಪಿಕೊಂಡಳು ಎಂದು ಯಜುವೇಂದ್ರ ಚಹಲ್ ಬಹಿರಂಗಪಡಿಸಿದ್ದಾರೆ.

 

ಇದನ್ನು ಓದಿ: Forest department: ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ರೈತರಿಗೆ ಭರ್ಜರಿ ಗುಡ್ ನ್ಯೂಸ್ !! ಹೀಗೆ ಮಾಡಿದ್ರೆ ಆ ಜಾಗ ಇನ್ನು ನಿಮ್ಮದೆ

You may also like

Leave a Comment