Rajinikanth: ರಜಿನಿಕಾಂತ್ (Rajinikanth) ಖ್ಯಾತ ಸೂಪರ್ ಸ್ಟಾರ್ ನಟ. ತಮ್ಮ ವಿಭಿನ್ನ ಸ್ಟೈಲ್ ಮತ್ತು ಮ್ಯಾನರಿಸಂ ಗಳಿಂದ ಖ್ಯಾತರಾಗಿರುವ ಇವರು ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.
ಚಿತ್ರರಂಗದಲ್ಲಿನ ಸೇವೆಗಾಗಿ ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ರಜಿನಿ 2019 ರಲ್ಲಿ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸುವರ್ಣ ಮಹೋತ್ಸವದಲ್ಲಿ ಐಕಾನ್ ಆಫ್ ಗೋಲ್ಡನ್ ಜುಬ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ.
ಆದರೆ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅದೆಷ್ಟೇ ಸಿನಿಮಾ ಮಾಡಿದರೂ ಅದೆಷ್ಟೇ ಹಣ ಸಂಪಾದನೆ ಮಾಡಿದರೂ ವೃತ್ತಿ ಬದುಕು ಕಲರ್‌ಫುಲ್ ಆಗಿರುವಷ್ಟು ವೈಯಕ್ತಿಕ ಬದುಕು ಇಲ್ಲ. ಇಬ್ಬರು ಹೆಣ್ಣು ಮಕ್ಕಳ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ತಮ್ಮ ತಮ್ಮ ಲೈಫ್ ಸೆಟಲ್ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ಬೇಸರ ವ್ಯಕ್ತಿ ಪಡಿಸದಿದ್ದರೂ ಅವರ ಮುಖದಲ್ಲಿ ಕಾಣಿಸುತ್ತದೆ.
ಅಲ್ಲದೆ ಇತ್ತೀಚಿಗೆ ಐಶ್ವರ್ಯ ಯುವ ನಿರ್ದೇಶನ ಜೊತೆ ಕಾಣಿಸಿಕೊಳ್ಳುತ್ತಿರುವುದು ವಿವಾದ ಸೃಷ್ಟಿ ಮಾಡುತ್ತಿದೆ ಎನ್ನಬಹುದು.
ಧನುಷ್ ಜೊತೆ ವಿಚ್ಛೇದನ ಪಡೆದ ಬಳಿಕ ಐಶ್ವರ್ಯ ಯುವ ನಿರ್ದೇಶನ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಇವರಿಬ್ಬರು ಮದುವೆ ಆಗಲಿದ್ದಾರೆ ಹಾಗೆ ಹೀಗೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ತಲೈವಾ ಆಗಲಿ ಐಶ್ವರ್ಯ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ.ಆದರೆ ರಜನಿಕಾಂತ್‌ಗೆ ಮಗಳ ಮದುವೆ ಇಷ್ಟವಿಲ್ಲ ಧನುಷ್ ಸೂಕ್ತವಾದ ವ್ಯಕ್ತಿ ಎರಡನೇ ಮದುವೆ ಬೇಡ ಎಂದು ಹೇಳಿದಕ್ಕೆ ಐಶ್ವರ್ಯ ಮುನಿಸಿಕೊಂಡಿದ್ದಾರೆ ಅಂತ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಹಿರಿಯ ಪತ್ರಕರ್ತರು ಹೊಸ ಬಾಂಬ್ ಸಿಡಿಸಿದ್ದರು. ಈ ಬೇಸರದಿಂದ ತಲೈವಾ ಒಂಟಿಯಾಗಿ ಪ್ರಯಾಣ ಕೂಡ ಮಾಡಿದ್ದರಂತೆ.
ಕೆಲವು ದಿನಗಳ ಹಿಂದೆ ಜೈಲರ್ ಸಿನಿಮಾ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ರಜನಿಕಾಂತ್ ಮಾಲ್ಡೀವ್ಸ್ ಟ್ರಿಪ್ ಮಾಡಿದ್ದರು. ಯಾಕೆ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿತ್ತು ಆದರೆ ಉತ್ತರ ಸಿಗಲಿಲ್ಲ. ಬೇಸರದಲ್ಲಿ ಅನ್ನೋ ವಿಚಾರ ಈಗ ತಿಳಿದು ಬರುತ್ತಿದೆ.
ಮನಸ್ತಾಪ ವಿಚಾರ ಸುದ್ದಿಯಾಗುತ್ತಿದ್ದಂತೆ ಐಶ್ವರ್ಯ ಮದುವೆ ವಿಚಾರವಾಗಿ ಏನೂ ಹೇಳಿಲ್ಲ ಬದಲಿಗೆ ತಂದೆ ಜೊತೆ ಫೋಟೋ ಹಾಕಿದ್ದಾರೆ. ಜೈಲರ್ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ತಂದೆಯನ್ನು ತಬ್ಬಿಕೊಂಡಿರುವ ಫೋಟೋ ಅಪ್ಲೋಡ್ ಮಾಡುವ ಮೂಲಕ ನಮ್ಮಿಬ್ಬರ ನಡುವೆ ಯಾವ ಬೇಸರವಿಲ್ಲ ಜಗಳವಿಲ್ಲ ಎಂದು ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.
ಮಾಹಿತಿ ಪ್ರಕಾರ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಯುವ ನಟನೊಂದಿಗೆ ಜೊತೆಯಾಗಿ ಚೆನ್ನೈನ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ವರದಿಗಳಿವೆ. ತಮಿಳುನಾಡು ಸಿನಿಮಾ ಮೂಲಗಳ ವರದಿಯ ಪ್ರಕಾರ, ಐಶ್ವರ್ಯಾ ರಜನಿಕಾಂತ್ 2ನೇ ಮದುವೆಯಾಗಲು ನಿರ್ಧಾರ ಮಾಡಿದ್ದು, ಅದೇ ಯುವ ನಟನೊಂದಿಗೆ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.
ಆದರೆ ಮಾಧ್ಯಮದೊಂದಿಗೆ ಮಾತನಾಡಿದ ಐಶ್ವರ್ಯಾ ” 2ನೇ ಮದುವೆಯ ಎಲ್ಲಾ ವದಂತಿಗಳು ಸುಳ್ಳು. ಅವುಗಳಲ್ಲಿ ಯಾವುದೇ ಸತ್ಯವಿಲ್ಲ. ಅವರು ಎರಡನೇ ಮದುವೆಯನ್ನು ಮಾಡಿಕೊಂಡಿಲ್ಲ. ಅಥವಾ ಈ ಕುರಿತಾದ ಯಾವುದೇ ಯೋಜನೆಗಳಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿ: Congress: ಪ್ರೈಮ್ ಮಿನಿಸ್ಟರ್ Vs ಕ್ರೈಮ್ ಮಿನಿಸ್ಟರ್ – ಪ್ರಧಾನಿ ಮೋದಿ ಟೀಕಿಸಿ ವ್ಯಂಗ್ಯವಾಡಿದ ಕಾಂಗ್ರೆಸ್ !
