Home » Kapil Dev: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕಿಡ್ನಾಪ್ !! ಗಂಭೀರ್ ಹಂಚಿಕೊಂಡ್ರು ಶಾಕಿಂಗ್ ವಿಡಿಯೋ!!

Kapil Dev: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕಿಡ್ನಾಪ್ !! ಗಂಭೀರ್ ಹಂಚಿಕೊಂಡ್ರು ಶಾಕಿಂಗ್ ವಿಡಿಯೋ!!

1 comment
Kapil Dev

Kapil Dev: ಟೀಮ್‌ ಇಂಡಿಯಾದ (team india) ಮಾಜಿ ಕಪ್ತಾನ, 1983 ರ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ (Kapil Dev) ಅವರನ್ನು ಅಪಹರಣ ಮಾಡಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಕಪಿಲ್ ದೇವ್ ಅವರ ಕೈ ಹಾಗೂ ಬಾಯಿಯನ್ನು ಕಟ್ಟಿ ಅವರನ್ನು ಇಬ್ಬರು ಅಪರಿಚಿತರು ಕರೆದುಕೊಂಡು ಹೋಗುತ್ತಿದ್ದು, ಈ ವೇಳೆ ಕಪಿಲ್ ದೇವ್ ಸಹಾಯಕ್ಕಾಗಿ ಹಿಂತಿರುಗಿ ನೋಡುವ ದೃಶ್ಯವೂ ಕಾಣಬಹುದು.

ಈ ವಿಡಿಯೋ ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ (Goutham gambir) ಆತಂಕ ಹೊರಹಾಕಿದ್ದಾರೆ. ಇದು ಕಪಿಲ್ ಪಾಜಿ ಅಲ್ಲಾ ಎಂದು ಭಾವಿಸುವೆ, ಇಷ್ಟೇ ಅಲ್ಲ ಕಪಿಲ್ ಚೆನ್ನಾಗಿದ್ದಾರೆ ಎಂದುಕೊಂಡಿದ್ದೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ನಾನಾ ಕಾಮೆಂಟ್ ಮೂಲಕ ಕಳವಳ‌ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ, ಭಾರತಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್ ಅವರ ಅಪಹರಣವಾಗಿದೆಯಾ? ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ ಈ ಕಿಡ್ನಾಪ್ (Kapil Dev kidnap video) ವಿಡಿಯೋ ಚಿತ್ರೀಕರಣ ಒಂದು ತುಣುಕಾಗಿದೆ. ಈ ಅಪಹರಣ ದೃಶ್ಯವನ್ನು ಚಿತ್ರ ತಂಡ ಅಥವಾ ಜಾಹೀರಾತು ತಂಡ ಉದ್ದೇಶಪೂರ್ವಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿರುವ ಸಾಧ್ಯತೆ ಇದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಹಾಗೂ ಭಿನ್ನ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತದೆ. ಇದರ ಭಾಗವಾಗಿ ಈ ರೀತಿ ನಡೆಸಿರುವ ಸಾಧ್ಯತೆ ಇದೆ.

https://x.com/GautamGambhir/status/1706237234457002425?s=20

 

ಇದನ್ನು ಓದಿ: Liquor Sale Ban: ಗಮನಿಸಿ ಮದ್ಯ ಪ್ರಿಯರೇ, ಈ ದಿನಗಳಂದು ಇಲ್ಲಿ ಮದ್ಯಮಾರಾಟ ಬಂದ್‌!!!

 

You may also like

Leave a Comment