Home » Chris Gayle: ಈ ಬಿಗ್ ಥ್ರೀ – ಮೂವರು ಕ್ರಿಕೆಟನ್ನೇ ಕೊಲ್ಲುತ್ತಿದ್ದಾರೆ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹೀಗಂದದ್ದು ಯಾರ ಬಗ್ಗೆ ?!

Chris Gayle: ಈ ಬಿಗ್ ಥ್ರೀ – ಮೂವರು ಕ್ರಿಕೆಟನ್ನೇ ಕೊಲ್ಲುತ್ತಿದ್ದಾರೆ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹೀಗಂದದ್ದು ಯಾರ ಬಗ್ಗೆ ?!

0 comments
Chris Gayle

Chris Gayle: ಮೂವರು ಕ್ರಿಕೆಟನ್ನೇ (Cricket) ಕೊಲ್ಲುತ್ತಿದ್ದಾರೆ ಎಂದು ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹೇಳಿದ್ದಾರೆ. ಅಷ್ಟಕ್ಕೂ ಗೇಲ್ ಹೇಳಿದ್ದು ಯಾರ ಬಗ್ಗೆ ಗೊತ್ತಾ? ಯಾರು ಬಿಗ್ ಥ್ರೀಗಳು ?! ಗೇಲ್ ಹೇಳಿರುವ ಬಿಗ್ ತ್ರಿ ಭಾರತ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ. ಭಾರತ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ನ್ನು ಎಡೆಬಿಡದೆ ಆಡುತ್ತಿರೋದು ಕೊನೆಗೆ ಕ್ರಿಕೆಟ್ ಆಟವನ್ನೇ ಕೊಲ್ಲುತ್ತದೆ. ಕ್ರಿಕೆಟ್ ನಲ್ಲಿ ಕೇವಲ ಬಿಗ್ ತ್ರೀಗಳ ಪ್ರಾಬಲ್ಯ ಹೆಚ್ಚಿನ ಕಾಲ ಪಂದ್ಯಗಳು ನಡೆಯುವಲ್ಲಿ ಉತ್ತಮವಾದದ್ದಲ್ಲ ಎಂದು ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್ (Chris Gayle) ಹೇಳಿದ್ದಾರೆ.

ಇಂಡಿಯನ್ ಹಿರಿಯರ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಮಾತನಾಡಿದ ಗೇಲ್, ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ವ್ಯವಹಾರವಾಗಿ ಬದಲಾಗಿದೆ. ಟಿ-20 ಲೀಗ್ ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್ ನಿಂದಲೂ ಹೆಚ್ಚಿನ ಹಣ ಬಾಚಲಾಗುತ್ತಿದೆ. ದೊಡ್ಡ ದೊಡ್ಡ ತಂಡಗಳು ಹೆಚ್ಚು ಸಂಭಾವನೆ ಪಡೆಯುತ್ತವೆ. ಆದರೆ, ಸಣ್ಣ ತಂಡಗಳಿಗೆ, ಆಟಗಾರರಿಗೆ ಕ್ರಿಕೆಟ್ ನಲ್ಲಿ ಅಭಿವೃದ್ಧಿ ಹೊಂದಲು ಉತ್ತಮ ಸಂಭಾವನೆ ನೀಡಬೇಕು ಎಂದು ಹೇಳಿದರು. ಸಣ್ಣ ತಂಡದ ಆಟಗಾರರಿಗೂ ದೊಡ್ಡ ತಂಡದವರಂತೆ ಉತ್ತಮ, ಹೆಚ್ಚಿನ ಸಂಭಾವನೆ ನೀಡಬೇಕು ಎಂದರು.

ಐಸಿಸಿ ಶ್ರೇಯಾಂಕದಲ್ಲಿನ ಕೆಳ ಕ್ರಮಾಂಕದ ತಂಡಗಳು ವರ್ಷದಲ್ಲಿ ನಿರಂತರವಾಗಿ ಮೂರು ಮಾದರಿ ಆಟಗಳನ್ನು ಆಡುವುದಿಲ್ಲ. ಹಾಗಾಗಿ ಬಿಗ್ ತ್ರೀಗಳು ಅವರನ್ನು ರಕ್ಷಿಸಬೇಕು ಎಂಬರ್ಥದಲ್ಲಿ ಗೇಲ್ ಹೇಳಿದ್ದಾರೆ. ಮೂರು ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. ಜನರು ಮುಂದೆ ಹೊಸ ತಂಡಬೇಕು, ಹೊಸ ಪ್ರತಿಭೆಗಳು ಹೊರಗೆ ಬರಬೇಕು ಎನ್ನುತ್ತಾರೆ. ಹಾಗಾಗಿ ಹೊಸ ಪ್ರತಿಭೆಗಳಿಗೆ ಆದ್ಯತೆ ನೀಡಬೇಕು. ಅವರಿಗೂ ಕ್ರಿಕೆಟ್ ನಲ್ಲಿ ಅಭಿವೃದ್ಧಿ ಹೊಂದಲು ಉತ್ತಮ ಸಂಭಾವನೆ ನೀಡಬೇಕು ಎಂದು ಹೇಳಿದರು.

You may also like

Leave a Comment