Home » Love Mocktail: ಲವ್ ಮಾಕ್ಟೇಲ್ ಸಿನಿಮಾ ಪಾರ್ಟ್ 3 ರಿಲೀಸ್‌ ದಿನಾಂಕ ಘೋಷಿಸಿದ ಡಾರ್ಲಿಂಗ್‌ ಕೃಷ್ಣ

Love Mocktail: ಲವ್ ಮಾಕ್ಟೇಲ್ ಸಿನಿಮಾ ಪಾರ್ಟ್ 3 ರಿಲೀಸ್‌ ದಿನಾಂಕ ಘೋಷಿಸಿದ ಡಾರ್ಲಿಂಗ್‌ ಕೃಷ್ಣ

0 comments

Love Mocktail 3: ನಟನಾಗಿದ್ದ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್ʼ ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು. ಅದಾದ ನಂತರ ಬಂದಿದ್ದ ಸೀಕ್ವೆಲ್‌ ಕೂಡ ಬಂದಿತ್ತು. ಸೀಕ್ವೆಲ್‌ ಗೆದ್ದ ನಂತರದಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾಕ್ಕೆ ಚಾಲನೆ ನೀಡಿದ್ದರು. ಡಾರ್ಲಿಂಗ್ ಕೃಷ್ಣ, ಇತ್ತೀಚೆಗಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದರು. ಈ ಮೂಲಕ ಮೂರನೇ ಸೀಕ್ವೆಲ್‌ ಬರೋದಾಗಿ ಹೇಳಿದ್ದರು.

ಇದೀಗ ಹೊಸ ವರ್ಷದ ಉಡುಗೊರೆ ಎಂಬಂತೆ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಡಾಲಿಂಗ್ ಕೃಷ್ಣ ಅವರು ಘೋಷಣೆ ಮಾಡಿದ್ದಾರೆ.

ಯಾವಾಗ ರಿಲೀಸ್‌ ಆಗಲಿದೆ?

ಏಪ್ರಿಲ್ 10ರಂದು ಲವ್ ಮಾಕ್ಟೇಲ್ 3 ಸಿನಿಮಾವು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. 2020ರಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ್ದ ಲವ್ ಮಾಕ್ಟೇಲ್ ಸಿನಿಮಾವು ತೆರೆಗಂಡಿತ್ತು. ನಂತರ, ಲವ್ ಮಾಕ್ಟೇಲ್ 2 ಸಿನಿಮಾವನ್ನು ಕೃಷ್ಣ ರೂಪಿಸಿದ್ದರು.

ತಾರಾಗಣದಲ್ಲಿ ಯಾರಿದ್ದಾರೆ?

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ, ಮುಂತಾದವರು ಈ ಸಿನಿಮಾದಲ್ಲಿದ್ದಾರೆ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ, ಬೇಸಿಗೆ ರಜೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 10ರಂದು ರಿಲೀಸ್‌ ಆಗಲಿದೆ.ಚಿತ್ರವನ್ನು ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರು ಕ್ರಿಸ್‌ಮಿ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

You may also like