Home » Mammootty mother passes away : ಮಲಯಾಳಂ ನಟ ಮಮ್ಮುಟ್ಟಿ ತಾಯಿ ವಿಧಿವಶ!

Mammootty mother passes away : ಮಲಯಾಳಂ ನಟ ಮಮ್ಮುಟ್ಟಿ ತಾಯಿ ವಿಧಿವಶ!

1 comment
Mammootty mother passes away

Mammootty mother passes away : ಸೌತ್ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ನಿಧನ ಹೊಂದಿದ್ದಾರೆ (Mammootty mother passes away) . ಫಾತಿಮಾ ಇಸ್ಮಾಯಿಲ್ ಅವರಿಗೆ 93 ವರ್ಷವಾಗಿದ್ದು, ಕಳೆದ ಕೆಲ ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಇಸ್ಮಾಯಿಲ್ ಅವರು ಕೊಚ್ಚಿಯ ಚೆಂಪುವಿನ ಮೂಲದವರಾಗಿದ್ದು, ಅವರಿಗೆ ಮಮ್ಮುಟ್ಟಿ,ಇಬ್ರಾಹಿಂ ಕುಟ್ಟಿ , ಶಫೀನಾ, ಅಮೀನಾ, ಸೌದಾ ಮತ್ತು ಜಕರಿಯಾ ಎನ್ನುವ ಮಕ್ಕಳಿದ್ದಾರೆ. ಮಮ್ಮುಟ್ಟಿ ಹಿರಿಯ ಮಗನಾಗಿದ್ದಾರೆ.

ಸದ್ಯ ಫಾತಿಮಾ ಇಸ್ಮಾಯಿಲ್ ನಿಧನ ಬಗ್ಗೆ ಶಶಿ ತರೂರ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, ಮಮ್ಮುಟ್ಟಿ ತಾಯಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸದ್ಯ ಚಿತ್ರರಂಗ ಸೇರಿದಂತೆ ಹಲವು ರಾಜಕೀಯ ಗಣ್ಯ ವ್ಯಕ್ತಿಗಳು ನಿಧನ ಹಿನ್ನೆಲೆ ಸಂತಾಪ ಸೂಚಿಸುತ್ತಿದ್ದಾರೆ.

ಇಂದು ಸಂಜೆ 4:00 ಗಂಟೆಗೆ ಚೆಂಪು ಜುಮಾ ಮಸೀದಿ ಕಬ್ರಿಸ್ತಾನ್‌ನಲ್ಲಿ ಫಾತಿಮಾ ಇಸ್ಮಾಯಿಲ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ಇದೆ.

ಇದನ್ನೂ ಓದಿ: Indian Railways : ಈ ರೈಲು ನಿಲ್ದಾಣ ನಿಮ್ಮನ್ನು ಡೈರೆಕ್ಟಾಗಿ ವಿದೇಶಕ್ಕೆ ಕೊಂಡೊಯ್ಯುತ್ತೆ!

You may also like

Leave a Comment