Home » Nivedita Gowda: ಟ್ರೋಲ್ ಗೆ ರಿಯಾಕ್ಟ್ ಮಾಡಿದ ನಿವಿ! ಕುಂಬಳ ಕಾಯಿ ಕಳ್ಳಿ ಯಾರು ಅಂದಾಗ ಹೆಗಲು ಮುಟ್ಟಿಕೊಂಡ ಹಾಗಾಯ್ತು ಈಕೆ ಕಥೆ

Nivedita Gowda: ಟ್ರೋಲ್ ಗೆ ರಿಯಾಕ್ಟ್ ಮಾಡಿದ ನಿವಿ! ಕುಂಬಳ ಕಾಯಿ ಕಳ್ಳಿ ಯಾರು ಅಂದಾಗ ಹೆಗಲು ಮುಟ್ಟಿಕೊಂಡ ಹಾಗಾಯ್ತು ಈಕೆ ಕಥೆ

186 comments

Nivedita Gowda: ಬಿಗ್ ಬಾಸ್ ನಲ್ಲಿ ಖ್ಯಾತಿ ಪಡೆದ ರೀಲ್ಸ್ ರಾಣಿ ನಿವೇದಿತಾ ಗೌಡ (Niveditha gowda) ಮತ್ತು ಚಂದನ್ ಶೆಟ್ಟಿ ಈ ಜೋಡಿಯನ್ನು ಎಲ್ಲರೂ ಮೆಚ್ಚಿ ಕೊಂಡಾಡುವಷ್ಟರಲ್ಲಿ ಗಪ್ ಚುಪ್ ಆಗಿ ಅವರಿಬ್ಬರೂ ಡಿವೋರ್ಸ್ ಆಗಿರೋದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಇನ್ನು ಡಿವೋರ್ಸ್ ಆದ ನಂತರ ನಿವೇದಿತಾ ಹೆಂಗೆಂಗೋ ರೀಲ್ಸ್ ಮಾಡೋದನ್ನು ನೋಡಿ ಕೆಲವ್ರು ಸಹಿಸಲಾಗದೆ ಟ್ರೋಲ್ ಮಾಡುತ್ತಿರುವುದು ಗೊತ್ತಿರುವ ವಿಚಾರ. ಆದ್ರೆ ಕುಂಬಳ ಕಾಯಿ ಕಳ್ಳಿ ಯಾರು ಅಂದಾಗ ಹೆಗಲು ಉಜ್ಜಿಕೊಂಡ ಕಥೆ ನೀವಿಯದ್ದಾಗಿದೆ.

ಹೌದು, ನಟಿ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಅವರೊಂದಿಗಿನ ವಿಚ್ಛೇದನದ ನಂತರ ಅವರ ಮೇಲೆ ನಡೆದ ಸೈಬರ್ ದೌರ್ಜನ್ಯ ಮತ್ತು ಟ್ರೋಲಿಂಗ್ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ನಕಾರಾತ್ಮಕತೆ ಹರಡುವವರ ವಿರುದ್ಧ ಪ್ರತಿಕ್ರಿಯಿಸುವುದನ್ನು ತಪ್ಪಿಸುವುದು ಮುಖ್ಯ ಎಂದು ಹೇಳಿದ್ದಾರೆ.

‘ನಕಾರಾತ್ಮಕತೆ ಹರಡುವ ವ್ಯಕ್ತಿಗಳಿಗೆ ನೀವು ಎಷ್ಟು ಕಡಿಮೆ ಪ್ರತಿಕ್ರಿಯಿಸುತ್ತೀರೋ ನಿಮ್ಮ ಜೀವನ ಅಷ್ಟು ನಮ್ಮೆದಿಯಿಂದ ಇರುತ್ತದೆ ಎಂದು ನಂಬಿದವಳು ನಾನು. ಅದೇ ರೀತಿ ನಿಮ್ಮ ಆಲೋಚನೆಗಳು ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ನಂಬುತ್ತೇನೆ. ನಾನು ದೀರ್ಘಕಾಲದಿಂದ ಮೌನವಾಗಿದ್ದೇನೆ ಎಂದ ಮಾತ್ರಕ್ಕೆ ನಾನು ನಿಮ್ಮ ಟ್ರೋಲ್​ಗಳನ್ನು ಹಾಗೂ ಆಧಾರ ರಹಿತ ಅಭಿಪ್ರಾಯ ಒಪ್ಪುತ್ತೇನೆ ಎಂದಲ್ಲ’ ಎಂದು ಪತ್ರ ಆರಂಭಿಸಿದ್ದಾರೆ ನಿವೇದಿತಾ ಗೌಡ.

‘ನನ್ನ ಜೀವನ ಮತ್ತು ನನ್ನ ಪ್ರಯಾಣದ ಬಗ್ಗೆ ತಿಳಿಯದೆ ಅನೇಕರು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಅನೇಕ ಟ್ರೋಲ್​​ ಪೇಜ್​ಗಳು ನನಗೆ ಬೇರೆ ಬೇರೆ ಹೆಸರನ್ನು ನೀಡುತ್ತಿದ್ದಾರೆ. ಏನೆಲ್ಲ ಮಾರುತ್ತಾರೋ ಅದೆಲ್ಲವನ್ನೂ ಜನರು ಖರೀದಿ ಮಾಡುತ್ತಾರೆ ಎಂಬುದು ಬೇಸರದ ವಿಚಾರ. ಈ ರೀತಿಯ ಊಹೆಗಳು, ತೀರ್ಪುಗಳು ಮತ್ತು ವಿವರಣೆಗಳು ಒಬ್ಬರ ಜೀವನ, ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ’ ಎಂದು ನಿವೇದಿತಾ ಬೇಸರ ಹೊರಹಾಕಿದ್ದಾರೆ.

‘ನೀವು ನನ್ನ ಶೋನ ಒಂದೂವರೆ ಗಂಟೆಗಳ ನೋಡುತ್ತೀರಿ ಎಂದ ಮಾತ್ರಕ್ಕೆ ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ನೀವು ಬೇಕಾದಂತೆ ಮಾತನಾಡಬಹುದು ಎಂದರ್ಥವಲ್ಲ. ಇದರ ಬದಲು ಒಳ್ಳೆಯದನ್ನು ಮಾರಾಟ ಮಾಡಿ. ನಿಮ್ಮ ವಿಷಯಕ್ಕಾಗಿ ನಮ್ಮ ಹೆಸರುಗಳನ್ನು ಬಳಸುವುದನ್ನು ನಿಲ್ಲಿಸಿ. ಜೀವನ ದೊಡ್ಡದಾಗಿದೆ ಮತ್ತು ಉತ್ತಮವಾಗಿದೆ. ಒಬ್ಬರನ್ನೊಬ್ಬರು ಹಾಳು ಮಾಡುವುದಕ್ಕಿಂತ ಒಟ್ಟಾಗಿ ಬೆಳೆಯೋಣ. ಈ ಪ್ರಕ್ರಿಯೆಯಲ್ಲಿ ನೋವಾದವರ ಪರವಾಗಿ ನಿಲ್ಲೋಣ’ ಎಂದು ಅವರು ಬರೆದುಕೊಂಡಿದ್ದಾರೆ.

You may also like

Leave a Comment