Home » ಒಲಂಪಿಕ್ಸ್ ನ ಕುಸ್ತಿ ಪಂದ್ಯಾಟದಲ್ಲಿ ಕಂಚು ಗೆದ್ದ ‘ಭಜರಂಗ್’ | ಭಾರತಕ್ಕೆ ಆರನೇ ಪದಕ

ಒಲಂಪಿಕ್ಸ್ ನ ಕುಸ್ತಿ ಪಂದ್ಯಾಟದಲ್ಲಿ ಕಂಚು ಗೆದ್ದ ‘ಭಜರಂಗ್’ | ಭಾರತಕ್ಕೆ ಆರನೇ ಪದಕ

by ಹೊಸಕನ್ನಡ
0 comments

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪೂನಿಯ ದೇಶಕ್ಕೆ ಕಂಚಿನ ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಕಜಾಕಿಸ್ತಾನದ ದೌಲೆಟ್ ನಿಯಾಜ್‌ಕಾವ್ ವಿರುದ್ಧ 8-0 ಸ್ಕೋರ್ ಪಡೆದ ಪೂನಿಯ, ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 6 ಪದಕಗಳು ದೊರೆತಂತಾಗಿದೆ.

ಸೆಮಿಫೈನಲ್ಸ್‌ನಲ್ಲಿ ಇರಾನಿನ ಹಾಜಿ ಅಲಿಯೇವ್ ವಿರುದ್ಧ ಸೋತಿದ್ದ ಬಜರಂಗ್ ಪೂನಿಯಾ, ಚಿನ್ನಕ್ಕಾಗಿ ಕಾದಾಡುವ ಅವಕಾಶ ಕಳೆದುಕೊಂಡಿದ್ದರು. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಆರನೇ ಪದಕವನ್ನು ಗೆದ್ದಿದ್ದಾರೆ.

You may also like

Leave a Comment