Dare Devil Mustafa: ನಾಡಿನಾದ್ಯಂತ ಅಪಾರ ಓದುಗ ಅಭಿಮಾನಿಗಳನ್ನು ಹೊಂದಿರೋ ಸಾಹಿತಿ ಅಂದ್ರೆ ಅದು ಕೆ ಪಿ ಪೂರ್ಣಚಂದ್ರ ತೇಜಸ್ವಿ(K PPorrnachandra Tejaswi). ಈ ತೇಜಸ್ವಿ ಅವರ ಹಲವಾರು ಕಥೆಗಳು ಈಗಾಗಲೇ ಸಿನಿಮಾ ಆಗಿ ಜಗಮನ್ನಣೆ ಗಳಿಸಿವೆ. ಅಂತೆಯೇ ಇದೀಗ ತೇಜಸ್ವಿ ಅವರ ಡೇರ್ ಡೆವಿಲ್ ಮುಸ್ತಾಫ(Dare Devil Mustafa) ಕಥೆಯನ್ನು ಓದುಗರೇ ಹಣ ಹಾಕಿ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಸದ್ಯ ಈ ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದ್ದು, ಇದೇ ಮೇ 19ಕ್ಕೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರ ತಂಡ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ಡಾಲಿ ಧನಂಜಯ್(Dali Dhanjay) ಕೂಡ ಸಾಥ್ ನೀಡಿದ್ದಾರೆ.
ಈಗಾಗಲೇ ಟೀಸರ್(Tease), ಟ್ರೇಲರ್(Trelar) ಮೂಲಕ ಎಲ್ಲರ ಗಮನ ಸೆಳೆದು, ನಾಡಿನಾದ್ಯಂತ ಒಂದು ರೀತಿಯಲ್ಲಿ ಸುದ್ದಿಮಾಡಿದ್ದ ಸಿನಿಮಾಗೆ ಇದೀಗ ನಟ ಡಾಲಿ ಧನಂಜಯ್ ಸಹ ಈ ಸಿನಿಮಾಕ್ಕೆ ಕೈ ಜೋಡಿಸಿದ್ದು, ಇನ್ನೇನು ಇದೇ ವಾರ ಮೇ 19 ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಭರ್ಜರಿಯಾಗಿ ಹಾಗೂ ವಿಶೇಷವಾಗಿ ಪ್ರಚಾರ ಕೈಗೊಂಡಿರೋ ಚಿತ್ರತಂಡದಿಂದ ಇದೀಗ ಒಂದು ರೂಪಾಯಿಯ ಸುದ್ದಿ ಹೊರಬಿದ್ದಿದೆ!
ಹೌದು, ಭರ್ತಿ ಪ್ರಚಾರ ಕಣಕ್ಕೆ ಇಳಿದಿರುವ ಈ “ಡೇರ್ ಡೆವಿಲ್ ಮುಸ್ತಾಫಾ” ತಂಡ ‘ಕೇವಲ ಒಂದೇ ರೂಪಾಯಿ ನೀಡಿ ಸಿನಿಮಾ ನೋಡಿ’ ಎಂಬ ಆಫರ್ ನೀಡಿದೆ. ಈ ಕುರಿತು ಮಾತನಾಡಿದ ಸಿನಿಮಾ ನಿರ್ದೇಶಕ ಶಶಾಂಕ್ ಸೊಲಗ(Shashank Solaga) “ಜನ ಸಿನಿಮಾ ನೋಡಬೇಕೆಂದರೆ ಅದಕ್ಕೆ ಬೇಕಿರುವುದು ಪ್ರಚಾರ. ಆ ಪ್ರಚಾರಕ್ಕೆ ಎಷ್ಟೋ ದುಡ್ಡು ಸುರಿಯುತ್ತೇವೆ. ಆದರೆ, ನಾವಿಲ್ಲಿ ಬೇರೆಲ್ಲೋ ಅದನ್ನು ಸುರಿಯುವ ಬದಲು, ಸಿನಿಮಾ ನೋಡುವವರಿಗಾಗಿಯೇ ಸುರಿಯುತ್ತಿದ್ದೇವೆ. ಅದರಂತೆ ಕೇವಲ ಒಂದು ರೂಪಾಯಿಗೆ ಒಂದು ಟಿಕೆಟ್ ನೀಡಿದ್ದೇವೆ. ಆ ಪೈಕಿ ಶಿವಮೊಗ್ಗ(Shivmogga), ಮೈಸೂರು(Mysore) ಮತ್ತು ಬೆಂಗಳೂರಿನಲ್ಲಿ(Bangalore) ಪ್ರೀಮಿಯರ್ ಶೋ ಆಯೋಜಿಸಿದ್ದೇವೆ. ಈಗಾಗಲೇ ಶಿವಮೊಗ್ಗದಲ್ಲಿ ಪ್ರೀಮಿಯರ್ ಟಿಕೆಟ್‌ಗಳು ಓಪನ್ ಆಗುತ್ತಿದ್ದಂತೆ, ಕೆಲವೇ ಕ್ಷಣಗಳಲ್ಲಿ ಟಿಕೆಟ್ ಮುಗಿದಿವೆ. ನಿಜಕ್ಕೂ ಇದು ಖುಷಿಯ ವಿಚಾರ. ಬಿಡುಗಡೆಗೂ ಮುನ್ನ ಜನಕ್ಕೆ ರೀಚ್ ಆಗಬೇಕೆಂಬ ಉದ್ದೇಶದಿಂದ ಈ ಸಾಹಸಕ್ಕೆ ಕೈ ಹಾಕಿದ್ದೇವೆ” ಎಂದಿದ್ದಾರೆ.
ಅಂದಹಾಗೆ ಆರಂಭದಲ್ಲಿ ನಾನಾ ಬಗೆಯಲ್ಲಿ ಸಿನಿರಸಿಕರನ್ನು ಗಮನಸೆಳೆಯುತ್ತಿರುವ ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ನಿನ್ನಂಥೋರ್ ಯಾರೂ ಇಲ್ವಲ್ಲೋ ಎಂಬ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿದೆ. ಅಣ್ಣಾವ್ರ ಅನಿಮೇಷನ್ ಮೂಲಕ ಗಮನಸೆಳೆದಿರುವ ಈ ಗಾನಲಹರಿಗೆ ವಾಸುಕಿ ವೈಭವ್ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದಾರೆ. ವಿಭಿನ್ನವಾಗಿ ಮೂಡಿಬಂದಿರುವ ನಿನ್ನಂಥೋರ್ ಯಾರೂ ಇಲ್ವಲ್ಲೋ ಹಾಡು ಸಿನಿಮಾದಲ್ಲಿ ಹೇಗಿರಲಿ ಎಂಬ ನಿರೀಕ್ಷೆ ಹೆಚ್ಚಿಸಿದೆ.
ಅಲ್ಲದೆ ಆನಿಮೇಷನ್(Animation) ಹಾಡಿನ ಮೂಲಕ ಗಮನಸೆಳೆದಿರುವ ಡೇರ್ ಡೆವಿಲ್ ಮುಸ್ತಫಾ ಟ್ರೇಲರ್ ಬಿಡುಗಡೆಯಾದಾಗ ಹೊಸ ಟ್ರೆಂಡ್ ಕ್ರಿಯೆಟ್ ಆಗಿತ್ತು. ಯೂಟ್ಯೂಬ್ ಸೆನ್ಸೇಷನ್ ಸ್ಟಾರ್ ಡಾ.ಬ್ರೋ ವಾಯ್ಸ್ ನಿಂದ ಪೂಚಂತೇ ಪ್ರಪಂಚ ಪರಿಚಯ ಮಾಡಿಕೊಡುತ್ತಾ, ಬಾಲ್ಯದ ಆಟ ಪಾಠ ತುಂಟಾಟದ ಡೇರ್ ಡೆವಿಲ್ ಮುಸ್ತಫಾ (Dare Devil Mustafa) ಮೊದಲ ನೋಟ ನೋಡುಗರಿಗೆ ಇಂಪ್ರೆಸ್ ಮಾಡಿತ್ತು.
ಇನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಿಂದಲೇ ತಯಾರಾಗಿರುವ ಸಿನಿಮಾಗೆ ನಟರಾಕ್ಷಸ ಡಾಲಿ ಧನಂಜಯ್ ಬೆಂಬಲವಾಗಿ ನಿಂತಿದ್ದಾರೆ. ಹೇಳಿಕೇಳಿ ಸಾಹಿತ್ಯ ಪ್ರೇಮಿಯಾಗಿರುವ ಧನಂಜಯ್ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಸಿನಿಮಾಮರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರೋ “ಡೇರ್ ಡೆವಿಲ್ ಮುಸ್ತಾಫಾ” ಚಿತ್ರಕ್ಕೆ ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೊಗಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ.
ಇದನ್ನು ಓದಿ: Sleeping hours: ಯಾವ ವಯಸ್ಸಿನವರು ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡಬೇಕು? ವೈದ್ಯರ ಸಲಹೆ ಹೀಗಿದೆ
