Home » ಬಾಹುಬಲಿಗೆ ಅನಾರೋಗ್ಯ?!ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೆಜ್ಜೆ ಹಾಕಿದ್ರ?

ಬಾಹುಬಲಿಗೆ ಅನಾರೋಗ್ಯ?!ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೆಜ್ಜೆ ಹಾಕಿದ್ರ?

0 comments

Prabhas :ತೆಲುಗು ಚಿತ್ರ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಡಾರ್ಲಿಂಗ್ ಎಂದೇ ಪ್ರಕ್ಯತರಾದ ಪ್ರಭಾಸ್(prabhas) ಅನಾರೋಗ್ಯದ ಕಾರಣದಿಂದ ಚಿಕಿತ್ಸೆಗಾಗಿ ವಿದೇಶಕ್ಕೆ (out of country)ತೆರಳಿದ್ದಾರೆ. ಸಲಾರ್, (Salar) ಆಧಿಪುರುಷ (Aadhi purusha) ಚಿತ್ರೀಕರಣದ ವೇಳೆಯಲ್ಲಿ ಇವರಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿದ್ದು ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ.

ಹೆಚ್ಚಿನ ಬಿಸಿಲು ಇರೋ ಕಾರಣ ಪ್ರಭಾಸ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ ಹಾಗಾಗಿ ಹೆಚ್ಚಿನ ಚಿಕಿತ್ಸೆಗೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಟಾಲಿವುಡ್ (Tollywood) ರೆಬೆಲ್ ಸ್ಟಾರ್ ಎಂದೇ ಪ್ರಖ್ಯಾತರಾದ ಪ್ರಭಾಸ್ ನ ಅನಾರೋಗ್ಯದ ಸಮಸ್ಯೆಯನ್ನು ಕೇಳಿ ಜನರು ಒಂದು ಮಟ್ಟಿಗೆ ದಿಗಿಲಾಗಿದ್ದಾರೆ.

ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಬಾಹುಬಲಿ ಕಳೆದ ಸ್ವಲ್ಪ ದಿನಗಳಿಂದ ಚೇತರಿಸಿಕೊಂಡು ಚಿತ್ರೀಕರಣಕ್ಕೆ ಮುಂದಾಗಿದ್ದರು. ಆದ್ರೆ ಇದೀಗ ಪುನಃ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ಪ್ರಭಾಸ್ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ(out of country) ಹೊರಟಿದ್ದಾರೆ. ಪ್ರಭಾಸನ್ನು ಪರೀಕ್ಷಿಸಿದ ತಜ್ಞರು ವಿಶ್ರಾಂತಿಯ (Rest) ಅಗತ್ಯತೆ ತುಂಬಾ ಇದೆ ಹಾಗಾಗಿ ಹೆಚ್ಚಿನ ವಿಶ್ರಾಂತಿಯನ್ನು ತೆಗೆದುಕೊಳ್ಳಿ ಆದಷ್ಟು ಬೇಗ ಗುಣಮುಖರಾಗುತ್ತಿರಾ ಎಂದು ತಿಳಿಸಿದ್ದಾರೆ. ಈ ಮಾತನ್ನು ಕೇಳಿದ ಅಭಿಮಾನಿಗಳ ಮನಸ್ಸು ಸ್ವಲ್ಪ ಮಟ್ಟಿಗೆ ನಿರಾಳವೆನಿಸಿದೆ.

ಬಾಹುಬಲಿಯ ಅನೇಕ ಚಲನಚಿತ್ರದ ಚಿತ್ರೀಕರಣ ಬಾಕಿ ಇದ್ದು ಸದ್ಯದಲ್ಲಿ ಎಲ್ಲಾ ಸಿನಿಮಾ ಶೂಟಿಂಗ್ (shooting) ಗೆ ಕಡಿವಾಣ ಹಾಕಿ ಆರೋಗ್ಯ(health)ಸಂಪೂರ್ಣ ಚೇತರಿಸಿಕೊಂಡ ನಂತರ ಚಿತ್ರೀಕರಣದ (shooting)ಕೆಲಸವನ್ನು ಮುಂದುವರಿಸಲಿದ್ದಾರಂತೆ.

ಪ್ರಭಾಸ್ ಅವರ ಮುಂದಿನ ಚಿತ್ರಕ್ಕೆ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಗುಣಮುಖರಾಗಿ ಆದಷ್ಟು ಬೇಗ ಸಿನಿಮಾ ತೆರೆಯ ಮೇಲೆ ಕಾಣಿಸಿಕೊಳ್ಳಿ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ತಿಳಿಸಿದ್ದಾರೆ.ಆದರೆ ಯಾವುದೇ ರೀತಿಯ ಪ್ರಭಾಸ್ ಅವರ ಆರೋಗ್ಯದ ಮಾಹಿತಿಯೂ ತಿಳಿದು ಬಂದಿಲ್ಲ.

You may also like

Leave a Comment