Home » Prabhudeva: ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ್ ಎಲ್ಲಿ ಹೋದ್ರೂ ಅದು ಬೇಕಂತೆ, ಏನದು ಅಂತ ಗೊತ್ತಾದ್ರೆ ನೀವೂ ನಕ್ಕು ಬಿಡ್ತೀರಾ!

Prabhudeva: ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ್ ಎಲ್ಲಿ ಹೋದ್ರೂ ಅದು ಬೇಕಂತೆ, ಏನದು ಅಂತ ಗೊತ್ತಾದ್ರೆ ನೀವೂ ನಕ್ಕು ಬಿಡ್ತೀರಾ!

by ಹೊಸಕನ್ನಡ
0 comments
Prabhudeva: ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ್ ಎಲ್ಲಿ ಹೋದ್ರೂ ಅದು ಬೇಕಂತೆ, ಏನದು ಅಂತ ಗೊತ್ತಾದ್ರೆ ನೀವೂ ನಕ್ಕು ಬಿಡ್ತೀರಾ!

Prabhudeva : ಭಾರತದ ಮೈಕಲ್ ಜಾಕ್ಸನ್(michael jackson) ಹೆಸರಾಂತ ಡ್ಯಾನ್ಸರ್ ಪ್ರಭುದೇವ(Prabhudeva) ಅವರು ಎಲ್ಲಿ ಹೋಗಲಿ ಯಾವುದೇ ಊಟದ ಸಮಾರಂಭಕ್ಕೆ ಹೋಗಲಿ ಅವರಿಗೆ ಆ ವಸ್ತು ಇರಲೇಬೇಕಂತೆ. ಆದರೆ ಆ ವಸ್ತು ಏನು ಅಂತ ನಿಮಗೆ ಗೊತ್ತಾದ್ರೆ ನೀವೂ ಒಮ್ಮೆ ನಕ್ಕುಬಿಡ್ತೀರಾ!

ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂತಹ ಭಾರತದ ಮೈಕಲ್ ಜಾಕ್ಸನ್ ಆಗಿ ಕಾಣಿಸಿಕೊಂಡಿರುವ ಪ್ರಭುದೇವ್ ಅವರು ನಮ್ಮ ಕರ್ನಾಟಕ(Karmataka)ದವರು, ಮೈಸೂರಿನ(Mysore) ಕೊಳ್ಳೇಗಾಲದವರು ಅನ್ನುವುದು ಎಲ್ಲರಿಗೂ ಹೆಮ್ಮೆಯ ವಿಚಾರ. ನಡೆದರೂ ನೃತ್ಯ ಮಾಡಿದ ಹಾಗೆ ತೋರುವಂತೆ ಮಾಡುವ ನೃತ್ಯ ಮಾಂತ್ರಿಕ ಅವರು. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ಪ್ರಭುದೇವ(Prabhudeva) ಅವರು ನಟ ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವಂತಹ ಪ್ರಭುದೇವ ಅವರ ನೆಚ್ಚಿನ ವಸ್ತು ಯಾವುದು ಎಂದು ಕೇಳಿದರೆ ನೀವು ಕೂಡ ಒಮ್ಮೆ ನಸುನಗುತ್ತೀರಾ.

ಹೌದು ಗೆಳೆಯರೇ ಕನ್ನಡ ಕಿರುತೆರೆಯ ಹೆಸರಾಂತ ಟಿವಿ ಶೋ ವೀಕೆಂಡ್ ವಿತ್ ರಮೇಶ್(Weekend with Ramesh) ಸೀಸನ್ 5ರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದ ಪ್ರಭುದೇವ್ ಅವರು ತಮ್ಮ ಹಲವಾರು ಇಷ್ಟಗಳ ಕುರಿತು ಮಾತನಾಡಿದ್ದಾರೆ. ಅವರು ಎಲ್ಲಿ ಹೋಗಲಿ ಯಾವುದೇ ಊಟದ ಸಮಾರಂಭಕ್ಕೆ ಹೋಗಲಿ ಅವರಿಗೆ ಆ ವಸ್ತು ಇರಲೇಬೇಕು ಎಂಬುದು ಬಾಲ್ಯದಿಂದಲೂ ಕೂಡ ನಡೆದುಕೊಂಡಿರುವ ಪದ್ಧತಿಯಂತೆ. ಅಷ್ಟಕ್ಕೂ ವಸ್ತು ಯಾವುದು ಗೊತ್ತಾ?

ಪ್ರಭುದೇವ್ ಅವರು ಮನಸ್ಸು ಮಾಡಿದರೆ ಕೋಟ್ಯಾಂತರ ರೂಪಾಯಿ ಬೆಲೆ ಇರುವಂತಹ ಯಾವುದೇ ವಸ್ತುಗಳನ್ನು ಕೂಡ ಅತ್ಯಂತ ಇಷ್ಟದ ವಸ್ತು ಎಂದು ಹೇಳಬಹುದು. ಆದರೆ ಅವರು ಹೇಳಿರುವ ಇಷ್ಟವಾದ ವಸ್ತು ಹಪ್ಪಳವಾಗಿದೆ. ಹೌದು ಅವರು ಎಲ್ಲಿ ಹೋಗಲಿ ಊಟದ ಸಂದರ್ಭದಲ್ಲಿ ಅವರಿಗೆ ತುಂಬಾ ಹಪ್ಪಳ ತಿನ್ನೋದಕ್ಕೆ ಬೇಕೇ ಬೇಕಂತೆ. ಹಪ್ಪಳ ಇಲ್ಲದೆ ಅವರಿಗೆ ಊಟಾನೇ ಸೇರುವುದಿಲ್ಲವಂತೆ!

ಅಂದಹಾಗೆ ವೀಕೆಂಡ್ ವಿತ್ ರಮೇಶ್(Weekend With Ramesh) ಸಂಚಿಕೆಯಲ್ಲಿ ಪ್ರಭುದೇವ್ ಅವರು ತಮ್ಮ ಈ ಇಷ್ಟದ ತಿನಿಸು ಬಗ್ಗೆ ಎಲ್ಲರೆದುರು ತೆರೆದಿಡುವ ಮೂಲಕ ಎಲ್ಲರಿಗೂ ಆಶ್ಚರ್ಯವನ್ನು ಹುಟ್ಟು ಹಾಕುವಂತೆ ಮಾಡಿದ್ದಾರೆ. ಪಿಜಾ, ಬರ್ಗರ್ ಅಂತಾ ಏನೆನೋ ಹಾಳು ಮೂಳು ತಿನ್ನುವ ಈ ಕಾಲದಲ್ಲೂ ಕೋಟ್ಯಾಂತರ ಸಂಭಾವನೆ ಪಡೆಯೋ ಪ್ರಭುದೇವ್ ಅವರಿಗೆ ದೇಸಿ ತಿನಿಸು ಹಪ್ಪಳ ಅಂದ್ರೆ ಇಷ್ಟ ಅನ್ನೋದು ಮೆಚ್ಚಲೇ ಬೇಕಾಗಿದೆ.

You may also like

Leave a Comment