Home » Karan Johar : ಅನುಷ್ಕಾ ಶರ್ಮಾ ವೃತ್ತಿ ಜೀವನಕ್ಕೆ ಅಡ್ಡಗಾಲು ಹಾಕಿದ್ರಾ ಕರಣ್? ಎಲ್ಲಾ ಪ್ರಶ್ನೆ, ಟೀಕೆಗೆ ಕೊಟ್ಟ ಉತ್ತರ ಏನು?

Karan Johar : ಅನುಷ್ಕಾ ಶರ್ಮಾ ವೃತ್ತಿ ಜೀವನಕ್ಕೆ ಅಡ್ಡಗಾಲು ಹಾಕಿದ್ರಾ ಕರಣ್? ಎಲ್ಲಾ ಪ್ರಶ್ನೆ, ಟೀಕೆಗೆ ಕೊಟ್ಟ ಉತ್ತರ ಏನು?

0 comments
Karan Johar

Karan Johar : ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಹಿಂದಿ ಚಲನಚಿತ್ರೋದ್ಯಮದಲ್ಲಿ(Hindi film industry) ಅನೌಪಚಾರಿಕವಾಗಿ KJo ಎಂದು ಕರೆಯುತ್ತಾರೆ. ಜೋಹರ್ ನ ವಿವಾದಗಳಿರುವುದು ಹೊಸದೇನಲ್ಲ. ಇದೀಗ ಕರಣ್ ಜೋಹರ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅನುಷ್ಕಾ ಶರ್ಮಾ ಅವರ ವೃತ್ತಿಜೀವನವನ್ನು ಹಾಳುಮಾಡಲು ಬಯಸುತ್ತಿರುವುದನ್ನು ಒಳಗೊಂಡಿರುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ.

ಕಂಗನಾ ರಣಾವತ್‌ನಿಂದ (Kangana Ranaut) ಹಿಡಿದು ವಿವೇಕ್ ಅಗ್ನಿಹೋತ್ರಿಯವರೆಗೆ(Vivek Agnihotri), ಹಲವಾರು ಪ್ರಸಿದ್ಧ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ 2016 ರಲ್ಲಿ ಮಾಡಿದ ನಿರ್ದೇಶಕರ ಕಾಮೆಂಟ್‌ಗಳ ಕುರಿತು ಹಂಚಿಕೊಂಡಿದ್ದಾರೆ. (Karan Johar) ತಿರಿಗೇಟಿನ ಮೂಲಕ ಸರಿಯಾದ ಪ್ರತ್ಯುತ್ತರವನ್ನು ನೀಡಿದ್ದಾರೆ.

ನಾನು ಎಂದಿಗೂ ಇಷ್ಟರ ತನಕ ಒಬ್ಬರ ಮುಂದೆಯೂ ತಲೆ ಬಾಗಿಲ್ಲ. ನಾನು ಯಾವತ್ತಿಗೂ ಸುಳ್ಳಿನ ಗುಲಾಮನಾಗಲಾರೆ. ನೀವು ಎಷ್ಟೇ ಅಪಪ್ರಚಾರ ಮಾಡಿ ನನ್ನನ್ನು ಕೆಳಮಟ್ಟಕ್ಕೆ ದೂರಿದರು ಅಥವಾ ನನ್ನನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಿದರೂ ನನಗೇನು ಆಗುವುದಿಲ್ಲ. ಈಗ ಆ ವಿಷಯದ ಬಗ್ಗೆ ಮಾತಾಡಿ ನಾನು ಕೆಟ್ಟವನಾಗಲು ಹೋಗುವುದಿಲ್ಲ. ನನ್ನ ಒಳ್ಳೆಯತನವೇ ನನಗೆ ಗೆಲುವು. ನಿಮ್ಮ ಕತ್ತಿಯನ್ನು ನೀವು ಎತ್ತಿಕೊಳ್ಳಬಹುದು. ಆದರೆ, ನಾನು ಸಾಯುವುದಿಲ್ಲ ಎಂದು ಕರಣ್ ಜೋಹರ್ (Karan Johar) ಈ ಮೂಲಕ ಪೋಸ್ಟ್ (post) ಮಾಡಿದ್ದಾರೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಲಿವುಡ್‌ಗೆ (Hollywood) ಸ್ಥಳಾಂತರಗೊಳ್ಳುವ ಅಂದರೆ ಬಾಲಿವುಡ್ ಅನ್ನು ಬಿಟ್ಟು ಹಾಲಿವುಡ್ ಗೆ ಹೋಗುವ ನಿರ್ಧಾರವನ್ನು ತಳೆದಾಗ ಕರಣ್ ಜೋಹಾರ್ ರತ್ತ ಬೊಟ್ಟು ಮಾಡಲಾಯಿತು. ಇವರಿಂದಾಗಿಯೇ ಪಿಗ್ಗಿ (piggi) ಬಾಲಿವುಡ್ ನಿಂದ ಬಹಳ ದೂರ ಸರಿಯುವಂತಾಯಿತು ಎಂಬ ಮಾತುಗಳು ಕೇಳಿಬಂತು.

ಅಂದಹಾಗೆ, ನಟಿ ಅನುಷ್ಕಾ (Anushka) ಮತ್ತು ಕರಣ್ ಅತ್ಯುತ್ತಮ ಸ್ನೇಹಿತರು ಅವರು ಈಗಲೂ ಒಳ್ಳೆಯ ರೀತಿಯ ಸ್ನೇಹಿತರಾಗಿಯೇ ಇದ್ದಾರೆ. ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಇತ್ತೀಚೆಗೆ ನಡೆದ ಕಲ್ಚರಲ್ ಸೆಂಟರ್ ಗ್ರ್ಯಾಂಡ್ ಲಾಂಚ್ (cultural centre grand launch) ನಲ್ಲಿ ಕರಣ್ ಜೋಹರ್ ನೀತಾ ಮುಕೇಶ್ ಅಂಬಾನಿಯನ್ನು (Neeta Mukesh Ambani) ಅಪ್ಪಿಕೊಂಡು ಸಂತಸದಿಂದ ಸ್ವಾಗತಿಸಿದ್ದಾರೆ.

You may also like

Leave a Comment