Home » Rachita Ram: ಯುವ ನಟನ ಜೊತೆ ಶುರುವಾಯ್ತಾ ಡಿಂಪಲ್ ಕ್ವೀನ್ ನ ಲವ್ವಿ ಡವ್ವಿ? ಅಂದು ರಚಿತಾ ರಾಮ್ ಹೇಳಿದ ಹುಡುಗನೂ, ಈ ನಟನೂ ಒಬ್ಬನೆನಾ?

Rachita Ram: ಯುವ ನಟನ ಜೊತೆ ಶುರುವಾಯ್ತಾ ಡಿಂಪಲ್ ಕ್ವೀನ್ ನ ಲವ್ವಿ ಡವ್ವಿ? ಅಂದು ರಚಿತಾ ರಾಮ್ ಹೇಳಿದ ಹುಡುಗನೂ, ಈ ನಟನೂ ಒಬ್ಬನೆನಾ?

by ಹೊಸಕನ್ನಡ
0 comments
Rachita Ram

Rachita Ram :ಕೆಲವು ವರ್ಷಗಳ ಹಿಂದಷ್ಟೇ ಸಿನಿರಂಗಕ್ಕೆ ಕಾಲಿಟ್ಟು, ಅತೀ ಶೀಘ್ರದಲ್ಲಿ ಕನ್ನಡಿಗರ ಮನ ಗೆದ್ದು, ಎಲ್ಲರ ಮನೆಮಾತಾಗಿ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಅತ್ಯಂತ ಬಹು ಬೇಡಿಕೆಯ ನಾಯಕ ನಟಿಯಾಗಿ ಮಿಂಚುತ್ತಿರುವ ನಟಿಯೆಂದರೆ ಅದು ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram). ಏನೇ ಕಾರ್ಯಕ್ರಮವಾಗಲಿ, ಯಾವುದೇ ಸಿನಿಮಾಗಳಾಗಲಿ ಅವರ ಹೆಸರು ಸದಾ ಮುಂಚೂಣಿಯಲ್ಲಿ ಕೇಳಿ ಬರುತ್ತದೆ. ಆದರೆ ಈ ರಚ್ಚು ಬಗ್ಗೆ ಸದ್ಯ ಸ್ಯಾಂಡಲ್ ವುಡ್ನಲ್ಲಿ(Sandalwood) ಒಂದು ಗುಸು ಗುಸು ಶುರುವಾಗಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ನಟಿ ರಚಿತಾ ರಾಮ್(Rachita Ram) ಅವರ ಹೆಸರು ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟರೊಬ್ಬರ ಜೊತೆಗೆ ಕೇಳಿಬರುತ್ತಿದೆ. ಅಷ್ಟಕ್ಕೂ ಆ ನಟ ಯಾರು ಹಾಗೂ ರಚಿತಾ ರಾಮ್ ಅವರ ಹೆಸರು ಆ ಯುವ ನಟನ ಜೊತೆಗೆ ಕೇಳಿ ಬರುತ್ತಿರುವುದು ಯಾಕೆ ಎಂದು ಯೋಚಿಸ್ತಿದ್ದೀರಾ? ಅಂದಹಾಗೆ ಆ ನಟ ಮತ್ಯಾರು ಅಲ್ಲ ಸದ್ಯ ಕನ್ನಡ ಚಿತ್ರರಂಗದಲ್ಲಿ ಯುವ ಮಾಸ್ ನಟ ಆಗಿ ಮಿಂಚುತ್ತಿರುವ ಧನ್ವಿರ್ ಗೌಡ(Dhanveerah).

ನಿಜ ಗೆಳೆಯರೆ. ಧನ್ವೀರ(Dhanveerah) ಅವರು ರಚಿತಾ ರಾಮ್(Rachita Ram) ಅವರ ಜೊತೆಗೆ ತೆಗೆಸಿಕೊಂಡಿರುವ ಪೋಟೋವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಈ ಫೋಟೋವನ್ನು ಪೋಸ್ಟ್ ಮಾಡುವ ಮೂಲ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿಗಳು ಪ್ರಾರಂಭವಾಗಿವೆ. ಈ ಪೋಟೋವನ್ನು‌ ನೋಡಿದ ಅಭಿಮಾನಿಗಳು
ರಚ್ಚು ಹಾಗೂ ಧನ್ವೀರ್ ಗೌಡ ಮದುವೆಯಾಗುತ್ತಾರೆ ಎಂಬ ಮಾತನ್ನು ಹೇಳುತ್ತಿದ್ದಾರೆ.

ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ರಚಿತಾ ರಾಮ್ ಈ ಹಿಂದೆ ಸಂದರ್ಶನದಲ್ಲಿ ಹೇಳಿದ ಮಾತೊಂದು ಮುನ್ನಲೆಗೆ ಬಂದಿತ್ತು. ಅದೇನೆಂದರೆ ನಾನು ಮದುವೆಯಾಗುವುದಿದ್ರೆ ಅದು ಗೌಡರ ಹುಡುಗನನ್ನೇ ಎಂದಿದ್ದರು. ಧನ್ವೀರ್ ಜೊತೆಗಿನ ಫೋಟೋ ನೋಡಿದ ಒಂದಷ್ಟು ಮಂದಿ ಆ ಹುಡುಗ ಇತನೇ ಎಂದು ಷರಾ ಬರೆದು ಬಿಟ್ಟಿದ್ದಾರೆ. ಆದರೆ ಇದೊಂದು ಗಾಳಿ ಸುದ್ದಿ ಎನ್ನುವುದನ್ನು ನಾವೆಲ್ಲರೂ ಮೊದಲಿಗೆ ನೆನಪಿಸಿಕೊಳ್ಳಬೇಕು. ಯಾಕೆಂದರೆ ಸಿನಿಮಾ ನಟ ನಟಿಯರು ತಾವುಗಳೇ ಫೋಟೋ ತೆಗೆದುಕೊಳ್ಳುವುದು ಕಾಮನ್. ಅಂತಯೇ ಈ ಫೋಟೋ ಕೂಡ.

ಅಂದಹಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಅಲ್ಲಿಂದ ಮತ್ತೆ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ರವರು ತಮ್ಮ ಸಿನಿಮಾ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ.

ಇದನ್ನೂ ಓದಿ: Kirik Keerthi: ಹೆಂಡತಿ ಬಿಟ್ಟು ಹೋದಮೇಲೆ ಅಂತೂ ಒಂದು ನಿರ್ಧಾರಕ್ಕೆ ಬಂದ ಕಿರಿಕ್ ಕೀರ್ತಿ! ಏನು ಗೊತ್ತಾ ಆ ಮಹತ್ವದ ನಿರ್ಧಾರ?

You may also like

Leave a Comment