Rahul Gandhi- Sherlyn Chopra: ನಟನೆ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಶೆರ್ಲಿನ್ ಚೋಪ್ರಾ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ನ (Bollywood) ಬೋಲ್ಡ್ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ಶೆರ್ಲಿನ್ ಚೋಪ್ರಾ (Actress Sherlyn Chopra) ಇದೀಗ ಮತ್ತೊಂದು ವಿಚಾರವಾಗಿ ಸಖತ್ ಸುದ್ದಿಯಾಗಿದ್ದಾರೆ.
ಹೌದು, ನಟಿ ಶೆರ್ಲಿನ್ ಚೋಪ್ರಾ (Rahul Gandhi- Sherlyn Chopra) ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Congress leader Rahul Gandhi ) ಬಗ್ಗೆ ಮಾತನಾಡಿದ್ದು, ಬಿಸಿ ಬಿಸಿ ಸುದ್ದಿ ನೀಡಿದ್ದಾರೆ. ಏನಪ್ಪಾ ಅಂತಾ ಸುದ್ಧಿ ಅಂತೀರಾ?? ಶೆರ್ಲಿನ್ ರಾಹುಲ್ ಗಾಂಧಿ (Rahul Gandhi) ಅವರನ್ನು ಮದುವೆಯಾಗಲು ಸಿದ್ಧಳಿರುವುದಾಗಿ ಹೇಳಿದ್ದಾರೆ. ಆದರೆ, ಒಂದು ಕಂಡೀಷನ್ ನಡೆಸಿ ಕೊಟ್ರೆ ಮಾತ್ರ ಎಂದಿದ್ದಾರೆ. ಏನಪ್ಪಾ ಆ ಕಂಡೀಷನ್?!
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶೆರ್ಲಿನ್, ರಾಹುಲ್ ಗಾಂಧಿಯನ್ನು ಮದುವೆಯಾಗಲು ಸಿದ್ಧನಿದ್ದೇನೆ. ಆದರೆ, ಮದುವೆಯಾದ ನಂತರ ತನ್ನ ಉಪನಾಮವನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಶೆರ್ಲಿನ್ ಭಾರೀ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಗ್ಗೆ ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ಸದ್ಯ ಶೆರ್ಲಿನ್ ನಟನೆಯ ʼಪೌರಾಶ್‌ಪುರ 2ʼ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶೆರ್ಲಿನ್ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೆರ್ಲಿನ್ ಏಕ್ತಾ ಕಪೂರ್ ಅವರ ವೆಬ್ ಸರಣಿ ಪೌರಶ್ರು 2′ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಕಾರ್ಯಕ್ರಮವು ಜುಲೈ 28 ರಂದು ಒಟಿಟಿ ಪ್ಲಾಟ್ಟಾರ್ಮ್ನಲ್ಲಿ ಬಿಡುಗಡೆಯಾಯಿತು. ಶೆರ್ಲಿನ್ ಚೋಪ್ರಾ ಕಾಮಸೂತ್ರ: ದಿ ರಿವೆಂಜ್, ಟೈಮ್ ಪಾಸ್, ವಾಜಾ ತುಮ್ ಹೋ, ದಿಲ್ ಬೋಲೆ ಹಡಿಪ್ಪಾ, ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಮಾಡಿದ್ದಾರೆ.
ಇದನ್ನೂ ಓದಿ: Gruha lakshmi Scheme: ವಾಟ್ಸಪ್ ಮೂಲಕ ಈಗ ಗೃಹಲಕ್ಷ್ಮೀ ದುಡ್ಡು ಪಡೆಯೋ ಅವಕಾಶ: ಹೇಗೆ ಗೊತ್ತಾ? ಈ ಲೇಖನ ಓದಿ !
