Rakshak Bullet BiggBoss: ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಸಹ ಇದೀಗ ಬಿಗ್ ಬಾಸ್ (Rakshak Bullet BiggBoss) ಕನ್ನಡ ಸೀಸನ್ 10 ರ ದೊಡ್ಮನೆ ಸೇರಿಕೊಂಡಿದ್ದಾರೆ. ಈ ಹಿಂದೆ ರಕ್ಷಕ್ ಮೇಲೆ ಸಾಕಷ್ಟು ಟ್ರೋಲ್‌ಗಳಾಗಿದ್ದವು. ಎಷ್ಟೇ ಟ್ರೋಲ್ ಮಾಡಿದ್ರೂ ರೋಸ್ಟ್ ಮಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ ಅಂತ ಬಿಗ್ ಬಾಸ್ ವೇದಿಕೆ ಮೇಲೆ ರಕ್ಷಕ್ ಹೇಳಿದ್ದಾರೆ.
ಅದಲ್ಲದೆ ಕಲಾಸಿಪಾಳ್ಯದ ಹಲ್ವಾ ಕೊಡೊಕೆ ನಾನು ಬರ್ತಿದಿನಿ ಎಂಬುದಾಗಿ ಪ್ರೋಮೋದಲ್ಲಿ ಹೇಳಿದ್ದಾರೆ. ತುಂಬಾ ಆಸಕ್ತಿ ಮೊದಲಿಂದಲೂ ಬಿಗ್ ಬಾಸ್ ಮನೆಗೆ ಬರೋದಕ್ಕೆ ಇತ್ತು ಅದು ಇಂದು ನನ್ನ ಮನೆ ಬಾಗಿಲು ತಟ್ಟಿದೆ ಎಂದು ಹೇಳಿದ್ದಾರೆ. ಈ ಸಂದರ್ಭವನ್ನು ಖುಷಿಯಿಂದ ಸ್ವಾಗತ ಮಾಡ್ತೇನೆ ಎಂದು ಹೇಳಿದ್ದಾರೆ.
ನನಗೆ ನಾನ್ವೆಜ್ ಅಂದ್ರೆ ತುಂಬ ಇಷ್ಟ ದಿನಕ್ಕೆ 3 ಬಾರಿ ಅದನ್ನೇ ಕೊಟ್ಟರು ನಾನು ತಿಂತಿನಿ ಎಂದು ಹೇಳಿದ್ದಾರೆ. ಆದರೆ ಈ ಬಾರಿ ಬಿಗ್ ಬಾಸ್ ಮನೆಗೆ ಹೋದ್ರೆ ಅಲ್ಲಿ ಅಷ್ಟಾಗಿ ನಾನ್ವೆಜ್ ಸಿಗೋದಿಲ್ಲ ಎಂಬ ಭಯ ನಂಗೆ ಈಗಲೇ ಆರಂಭವಾಗಿದೆ ಎಂದಿದ್ದಾರೆ.
ನಾನು ಅಪ್ಪನ ಆಸೇನ ಈಡೇರಿಸಬೇಕು. ನಂಗೆ ಅಪ್ಪ ತುಂಬಾ ಇಷ್ಟ ಅವರಿಗೆ ನಾನು ಇಂಡಸ್ಟ್ರಿಯಲ್ಲಿರಬೇಕು ಎಂದಾಗಿತ್ತು.ನನ್ನ ಮೊದಲನೇ ಸಿನಿಮಾ ಗುರು ಶಿಷ್ಯರು ಅದನ್ನು ನಾನು ಇನ್ನು ಈ ಅವಕಾಶವನ್ನೂ ಸಹ ಒಳ್ಳೆ ರೀತಿಯಲ್ಲಿ ಬಳಸಿಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡ್ಬೇಕು ಅನ್ಕೊಂಡಿದಿನಿ ಅಂದಿದಾರೆ.
ಹೌದು, ಮೊದಲಿಗೆ ಹೋಲ್ಡ್‌ನಲ್ಲಿದ್ದ ರಕ್ಷಕ್ ನಂತರ ದೊಡ್ಡ ಮನೆ ಸೇರಿಕೊಂಡಿದ್ದಾರೆ. ರಕ್ಷಕ್ ಸೇರಿದಂತೆ ಆರು ಮಂದಿಯನ್ನು ಬಿಗ್ ಬಾಸ್ ಅಸಮರ್ಥರು ಅಂತ ಗುರುತಿಸಿದೆ. ಈ ವಾರ ಸಮರ್ಥರಾಗೋಕೆ ಕೆಲ ಟಾಸ್ಕ್‌ಗಳನ್ನು ನೀಡಿದೆ. ಇದೀಗ ಬಿಗ್ ಬಾಸ್ ಮನೆ ಸೇರಿರುವವರ ಸಂಭಾವನೆ ಎಷ್ಟಿರಬಹುದು ಅನ್ನೋ ಚರ್ಚೆ ಶುರುವಾಗಿದೆ.
ಮೊದಲಿಗೆ ರಕ್ಷಕ್ ಬುಲೆಟ್ ಅವರ ಸಂಭಾವನೆ ಎಷ್ಟು ಅಂತ ಹೆಚ್ಚು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಒಂದು ದಿನಕ್ಕೆ ಎಷ್ಟು ದುಡ್ಡು ಮಾಡ್ತಾರೆ ಅಂತ ಕೇಳ್ತಿದ್ದಾರೆ. ಮಾಹಿತಿ ಪ್ರಕಾರ ರಕ್ಷಕ್ ಬುಲೆಟ್ ಒಂದು ದಿನಕ್ಕೆ 15 ರಿಂದ 20 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಹೌದು, ಪ್ರತಿ ಸ್ಪರ್ಧಿಯೂ ಇಂತಿಷ್ಟು ಅಂತ ಸಂಭಾವನೆ ಪಡೆಯುತ್ತಾರೆ. ಆದರೆ ಸ್ಪಷ್ಟ ಮಾಹಿತಿ ಇರೋದಿಲ್ಲ. ಎಲ್ಲವೂ ಅಷ್ಟಂತೆ, ಇಷ್ಟಂತೆ ಎಂದು ಹೇಳಿರುವುದನ್ನೇ ಕೇಳಿದ್ದೇವೆ.
ಇದನ್ನು ಓದಿ: Gruha Lakshmi Scheme: ಗೃಹಲಕ್ಷ್ಮೀ ಹಣ ಕೈ ಸೇರದ ಯಜಮಾನಿಯರೇ, ಕೂಡಲೇ ಅರ್ಜಿಯಲ್ಲಿ ಇದೊಂದನ್ನು ಸರಿಪಡಿಸಿಬಿಡಿ!
