Home » ರಕ್ಷಿತ್ ಶೆಟ್ಟಿಯಂತಹ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು !! | ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ಟಾಂಗ್ ನೀಡಿದ ಖ್ಯಾತ ನಿರ್ದೇಶಕ

ರಕ್ಷಿತ್ ಶೆಟ್ಟಿಯಂತಹ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು !! | ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ಟಾಂಗ್ ನೀಡಿದ ಖ್ಯಾತ ನಿರ್ದೇಶಕ

0 comments

ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾ ಈ ವಾರವೇ ಬಿಡುಗಡೆಯಾಗುತ್ತಿದ್ದು ರಾಜ್ಯದೆಲ್ಲೆಡೆ ಧೂಳೆಬ್ಬಿಸಲಿದೆ. ಈ ಸಿನಿಮಾ ನೋಡಿರುವ ‘ರಾಜಕುಮಾರ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್, ಈ ಸಿನಿಮಾದ ನಿರ್ದೇಶಕರಿಗೆ ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆದಿದ್ದಾರೆ. ಅದನ್ನು ನಿರ್ದೇಶಕ ಕಿರಣ್ ರಾಜ್ ಅವರ ಮನೆಗೆ ಪೋಸ್ಟ್ ಮಾಡಿರುವ ಅವರು, ರಕ್ಷಿತ್ ಶೆಟ್ಟಿ ಅವರನ್ನು ಹಾಡಿ ಹೊಗಳಿದ್ದಾರೆ.

ಐವತ್ತು ಪೈಸೆಯ ಅಂಚೆ ಕಾರ್ಡಿನಲ್ಲಿ ಬರೆದ ಸಾಲುಗಳಲ್ಲಿ ‘ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಅರ್ಥ ಮಾಡಿಸುವ ಚಿತ್ರ ಚಾರ್ಲಿ. ರಕ್ಷಿತ್ ಶೆಟ್ಟಿ ಶ್ರೇಷ್ಠವಾದ ಮಾನವೀಯತೆಯನ್ನು ಮೆರೆದಿದ್ದಾರೆ. ನೈಜ ಬದುಕಿನಲ್ಲಿ ಅಂಥ ವ್ಯಕ್ತಿಯಾಗಿದ್ದರೆ ಮಾತ್ರ ಮೂರು ವರ್ಷ ಕಾದು ಈ ಚಿತ್ರವನ್ನು ತೆರೆಯ ಮೇಲೆ ತರುವುದಕ್ಕೆ ಸಾಧ್ಯ. ಇಂತಹ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು’ ಎಂದು ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಟಾಂಗ್ ಕೊಟ್ಟ ರೀತಿಯಲ್ಲಿ ಪತ್ರ ಮುಗಿಸಿದ್ದಾರೆ ಸಂತೋಷ್ ಆನಂದ್ ರಾಮ್.

ಈ ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದಲ್ಲದೇ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಈ ಮಾತನ್ನು ನೇರವಾಗಿ ಹೇಳದೇ ಇದ್ದರೂ, ಕಾಮೆಂಟ್ ಬಾಕ್ಸ್ ನಲ್ಲಿ ಮಾತ್ರ ಆ ನಟಿಯ ಹೆಸರೇ ಕೇಳಿ ಬಂದಿದೆ.

You may also like

Leave a Comment