Home » Ramayan Movie Sai Pallavi: ಸೀತೆಯಾಗಿ ಸಾಯಿ ಪಲ್ಲವಿ ಎಷ್ಟು ಮುದ್ದಾಗಿ ಕಾಣ್ತಾರೆ ನೋಡಿ : ರಾಮಾಯಣ ಸೆಟ್ ನಿಂದ ಫೋಟೋಗಳು ವೈರಲ್

Ramayan Movie Sai Pallavi: ಸೀತೆಯಾಗಿ ಸಾಯಿ ಪಲ್ಲವಿ ಎಷ್ಟು ಮುದ್ದಾಗಿ ಕಾಣ್ತಾರೆ ನೋಡಿ : ರಾಮಾಯಣ ಸೆಟ್ ನಿಂದ ಫೋಟೋಗಳು ವೈರಲ್

0 comments
Ramayan Movie Sai Pallavi

Ramayan Movie Sai Pallavi: ಪ್ಯಾನ್ ಇಂಡಿಯಾದ ಬಿಗ್ ಬಜೆಟ್ ‘ರಾಮಾಯಣ’ ಶೂಟಿಂಗ್ ಶುರುವಾಗಿದೆ. ಚಿತ್ರತಂಡ ಯಾವುದೇ ಘೋಷಣೆ ಇಲ್ಲದೆ ಚಿತ್ರೀಕರಣ ಆರಂಭಿಸಿದ್ದಾರೆ. ರಾಮನ ಗೆಟಪ್‌ನಲ್ಲಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇದೀಗ ಚಿತ್ರದ ಮೇಕಿಂಗ್ ದೃಶ್ಯಗಳು ಎಲ್ಲೆಡೆ ವೈರಸ್ ಆಗುತ್ತಿವೆ. ಇದೀಗ ಚಿತ್ರದ ಪ್ರಮುಖ ಪಾತ್ರಗಳಾದ ರಾಮ ಸೀತೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವರನ್ನು ನೋಡಿ ನೆಟ್ಟಿಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಸೌಂದರ್ಯ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದೆ.

ಇದನ್ನೂ ಓದಿ:  Job Alert: ಕೆಲಸ ಹುಡುಕಿ ಹುಡುಕಿ ಸಾಕ್ ಆಯ್ತಾ? ಹಾಗಾದ್ರೆ ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್

ಪ್ರತಿಷ್ಠಿತ ರಾಮಾಯಣವನ್ನು ಆಧರಿಸಿ ಇದುವರೆಗೆ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಬಹುತೇಕ ಇವೆಲ್ಲವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಕಳೆದ ವರ್ಷ ಬಿಡುಗಡೆಯಾದ ‘ಆದಿಪುರುಷ’ ಚಿತ್ರ ತೀವ್ರ ಟ್ರೋಲಿಂಗ್‌ಗೆ ಒಳಗಾಗಿತ್ತು. ಇತ್ತೀಚೆಗೆ ಬಾಲಿವುಡ್‌ನಲ್ಲಿ ರಾಮಾಯಣ ಸಿನಿಮಾ ಆಗುತ್ತಿದೆ ಎಂದು ಈ ಹಿಂದೆಯೂ ವರದಿಗಳು ಬಂದಿದ್ದರೂ ಯಾರೂ ಇದನ್ನು ಖಚಿತಪಡಿಸಿರಲಿಲ್ಲ.

ಇದನ್ನೂ ಓದಿ:  Mumbai: ರಸ್ತೆ ಬದಿಯ ಚಿಕನ್‌ ಶೋರ್ಮಾ ತಿಂದು 12 ಮಂದಿ ಆಸ್ಪತ್ರೆಗೆ ದಾಖಲು

ಶ್ರೀರಾಮ ನವಮಿಯಲ್ಲಾದರೂ ಅಧಿಕೃತ ಘೋಷಣೆ ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಅಂಥದ್ದೇನೂ ಬರಲಿಲ್ಲ. ಆದರೆ ಈಗ ಸೆಟ್ ನಿಂದ ರಾಮ ಮತ್ತು ಸೀತೆಯ ಪಾತ್ರಗಳ ಕೆಲವು ಚಿತ್ರಗಳು ಸೋರಿಕೆಯಾಗಿವೆ. ಇವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೋಟ ಚೆನ್ನಾಗಿದೆ. ಉಳಿದಂತೆ ಈ ಸಿನಿಮಾ ಮೂರು ಭಾಗಗಳಲ್ಲಿ ತಯಾರಾಗುತ್ತಿದೆ. ‘ಕೆಜಿಎಫ್’ ಖ್ಯಾತಿಯ ಯಶ್ ಇದರಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.

You may also like

Leave a Comment