Home » Rani Mukerji :ನನ್ನ ಪತಿ ಸಹಜವಾಗಿ ಎಲ್ಲಾ ನಟಿಯರೊಂದಿಗೆ ಮಾಡ್ತಾರೆ, ಆದ್ರೆ ನಾನ್ಯಾಕೆ ನಿರ್ಮಾಪಕರೊಂದಿಗೆ ಹೀಗೆ ಮಾಡ್ಬಾರ್ದು?: ರಾಣಿ ಮುಖರ್ಜಿ

Rani Mukerji :ನನ್ನ ಪತಿ ಸಹಜವಾಗಿ ಎಲ್ಲಾ ನಟಿಯರೊಂದಿಗೆ ಮಾಡ್ತಾರೆ, ಆದ್ರೆ ನಾನ್ಯಾಕೆ ನಿರ್ಮಾಪಕರೊಂದಿಗೆ ಹೀಗೆ ಮಾಡ್ಬಾರ್ದು?: ರಾಣಿ ಮುಖರ್ಜಿ

by ಹೊಸಕನ್ನಡ
0 comments
Rani Mukerji

Rani Mukerji : ಖ್ಯಾತ ಬಾಲಿವುಡ್‌ ನಟಿ ರಾಣಿ ಮುಖರ್ಜಿ(Rani Mukerji) ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಕಳೆದ 25 ವರ್ಷಗಳಿಂದ ನಿರಂತರವಾಗಿ ಅವರು ಸಿನಿರಂಗದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ರಾಣಿಯವರು ತಮ್ಮ ಬ್ಲ್ಯಾಕ್, ಹಮ್ ತುಮ್, ಸಾಥಿಯಾ, ನೋ ಒನ್ ಕಿಲ್ಡ್ ಜೆಸ್ಸಿಕಾ, ಬಂಟಿ ಔರ್ ಬಬ್ಲಿ, ಮರ್ದಾನಿ ಫ್ರಾಂಚೈಸ್, ಹಿಚ್ಕಿ ಎಂದು ಹೀಗೆ ಅನೇಕ ಚಲನಚಿತ್ರಗಳಲ್ಲಿನ ಅದ್ಭುತ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಇನ್ನು ಇವರನ್ನು ಮುಖ್ಯವಾಗಿ YRF ನಾಯಕಿ ಎಂದು ಕರೆಯುತ್ತಾರೆ ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಅವರು ತಮ್ಮ ಪತಿ ಒಡೆತನದ ನಿರ್ಮಾಣ ಸಂಸ್ಥೆಯೊಂದಿಗೆ ಮಾತ್ರ ಕೆಲಸ ಮಾಡುತ್ತಿದ್ದಾರೆ.

ಹೌದು, ರಾಣಿ ಮುಖರ್ಜಿ ಅವರು ಮದುವೆಯಾದ ಮೇಲೆ ಕೇವಲ ತಮ್ಮ ಹೋಮ್ ಪ್ರೊಡಕ್ಷನ್ ಯಶ್ ರಾಜ್ ಫಿಲಂ (YRF) ನಲ್ಲಿ ಮಾತ್ರ ಕೆಲಸ ಮಾಡಲು ಮುಂದಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಎಲ್ಲಾ ಗಾಳಿ ಸುದ್ದಿಗೆ ರಾಣಿ ಫುಲ್ ಸ್ಟಾಪ್ ಇಡುವಂತೆ ಉತ್ತರ ಕೊಟ್ಟಿದ್ದಾರೆ.

ಯಾಕೆಂದರೆ ಯಶ್ ರಾಜ್ ಫಿಲಂ ನಿರ್ಮಾಣವಲ್ಲದ, ನಿಖಿಲ್ ಅಡ್ವಾಣಿ(Nikhil Advani)ಯವರ ಎಮ್ಮೆ ಎಂಟರ್‌ಟೈನ್‌ಮೆಂಟ್‌ ನಿಂದ ನಿರ್ಮಿಸಲಾದ ‘ಮಿಸೆಸ್ ಚಟರ್ಜಿ Vs ನಾರ್ವೆ'(Misses Chatrji vs Narve) ಸಿನಿಮಾದಲ್ಲಿ ರಾಣಿ ನಟಿಸಿದ್ದಾರೆ. ಅಶಿಮಾ ಚಿಬ್ಬರ್(Ashima Chibbar) ನಿರ್ದೇಶಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಸಿನಿಮಾದ ಬಗ್ಗೆ ಕರಣ್ ಜೋಹರ್ ಮತ್ತು ನಿರ್ಮಾಪಕ ನಿಖಿಲ್ ಅಡ್ವಾಣಿ ಅವರೊಂದಿಗೆ ಮಾತನಾಡುತ್ತಿದ್ದಾಗ ಇಂತಹ ಹೇಳಿಕೆ ನೀಡಿದ್ದಾರೆ.

“ನಾನು ಈಗ ತಾಯಿಯಾಗಿದ್ದೇನೆ. ನನ್ನ ಮಗಳು ನನ್ನ ಆದ್ಯತೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಎಲ್ಲಿ ಬೇಕಾದರೂ ಕೆಲಸ ಮಾಡುತ್ತೇನೆ. ನನ್ನ ಪತಿ ಅನೇಕ ನಟರೊಂದಿಗೆ ಕೆಲಸ ಮಾಡುತ್ತಾರೆ, ನಾನು ಹೊರಗೆ ಏಕೆ ಕೆಲಸ ಮಾಡಬಾರದು?” ಎಂದು ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ ಆದಿತ್ಯ ಚೋಪ್ರಾ( ರಾಣಿ ಅವರ ಪತಿ) ನನ್ನನ್ನು ಹೊಗಳಿದ್ದಾರೆ. ಅವರು ಕೂಡ ಈ ಸಿನಿಮಾ ನೋಡಿ ಭಾವುಕರಾದರು. ಅಷ್ಟೇ ಅಲ್ಲ, ಇದರಲ್ಲಿ ಚೆನ್ನಾಗಿ ಅಭಿನಯಿಸಿದ್ದೀಯಾ ಎನ್ನುತ್ತಾ ಮಗುವಿನಂತೆ ಅಪ್ಪಿಕೊಂಡರು’ ಎಂದು ಹೇಳಿದ್ದಾರೆ ರಾಣಿ.

ಇನ್ನು ತಮ್ಮ ಈ ಹೊಸ ಸಿನಿಮಾದ ಬಗ್ಗೆ ಮಾತನಾಡಿದ ರಾಣಿ ಅವರು ‘ನನ್ನ ತಾಯಿ ಕೃಷ್ಣ ಮುಖರ್ಜಿಯೇ ಇಂತಹ ಪಾತ್ರ ಮಾಡಲು ಸ್ಪೂರ್ತಿ. ಇನ್ನು ಕೂಡ ನಾನು ಸಾಗರಿಕಾ ಅವರನ್ನು ಭೇಟಿ ಮಾಡಿಲ್ಲ, ಅವರೊಂದಿಗೆ ಮಾತನಾಡಿಲ್ಲ. ಆದರೆ ನಿರ್ದೇಶಕಿ ಅಶಿಮಾ ಚಿಬ್ಬರ್ ಅವರೊಂದಿಗೆ ಮಾತನಾಡುವ ಟೇಪ್‌’ಗಳನ್ನು ನಾನು ನೋಡಿದೆ. ಅದರಲ್ಲಿ ಕೋಪ, ಹತಾಶೆ, ಒಂಟಿತನ ಎಲ್ಲವೂ ಕಣ್ಣಿಗೆ ಕಟ್ಟಿದಂತಿತ್ತು’ ಎಂದು ಹೇಳಿದ್ದಾರೆ.

You may also like

Leave a Comment