Home » Bigg boss Ranjith: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ರಂಜಿತ್!

Bigg boss Ranjith: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ರಂಜಿತ್!

0 comments

Bigg boss Ranjith: ಕನ್ನಡದ ಬಿಗ್‌ಬಾಸ್ ಸೀಸನ್ 11ರ ಖ್ಯಾತಿಯ ರಂಜಿತ್ ಕುಮಾರ್ (Bigg boss Ranjith) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರೀತಿಸಿದ ಹುಡುಗಿ ಮಾನಸ ಜತೆಗೆ ರಂಜಿತ್ ಕುಮಾರ್‌ ಸಪ್ತಪದಿ ತುಳಿದಿದ್ದು, ದೊಡ್ಡಬಳ್ಳಾಪುರ ಸಿಂಗನಾಯಕನಹಳ್ಳಿನಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಶನಿವಾರ ಏ. 10 ರಂದು ಅದ್ಧೂರಿಯಾಗಿ ವಿವಾಹ ನಡೆಯಿತು.

ರಂಜಿತ್‌ ಮದುವೆಗೆ ಬಿಗ್‌ಬಾಸ್ ಸಹಸ್ಪರ್ಧಿಗಳು ಹಾಗೂ ಕನ್ನಡ ಚಿತ್ರರಂಗದ ಹಲವು ಕಲಾವಿದರು ಆಗಮಿಸಿ ಶುಭ ಹಾರೈಸಿದರು.ಬಿಗ್ ಬಾಸ್‌ ಮಾಜಿ ಸ್ಪರ್ಧಿಗಳಾದ ತುಕಾಲಿ ಸಂತೋಷ್ ಹಾಗೂ ಮಾನಸಾ ಸಂತೋಷ್ ದಂಪತಿ, ಲಾಯರ್ ಜಗದೀಶ್, ಗೋಲ್ಡ್ ಸುರೇಶ್, ಅನುಷಾ ರೈ, ಯಮುನಾ ಶ್ರೀನಿಧಿ, ನಟ ರಂಗಾಯಣ ರಘು ಹಾಗೂ ಶೋಭರಾಜ್ ಸೇರಿದಂತೆ ಹಲವರು ಆಗಮಿಸಿ ನವ ವಧು ವರರಿಗೆ ಶುಭ ಹಾರೈಸಿದರು.

You may also like