Home » Rashmika Mandanna: ಬಾಹುಬಲಿಯ ಅವಂತಿಕಾ ಥರದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ಕುದುರೆ ಏರಿ ನಡೆದಿದೆ ಭಾರೀ ತಯಾರಿ !

Rashmika Mandanna: ಬಾಹುಬಲಿಯ ಅವಂತಿಕಾ ಥರದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ಕುದುರೆ ಏರಿ ನಡೆದಿದೆ ಭಾರೀ ತಯಾರಿ !

1 comment
Rashmika Mandanna

Rashmika Mandanna new movie: ರಶ್ಮಿಕಾ ಮಂದಣ್ಣ (Rashmika Mandanna) ಕಿರಿಕ್ ಪಾರ್ಟಿ (Kirik Karty) ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು. ‘ಗೀತ ಗೋವಿಂದಂ’ (Githa Govindam) , ‘ಪುಷ್ಪಾ’ (Pushpa) ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ನ್ಯಾಷನಲ್ ಕ್ರಶ್ ಎಂದೇ ಫೇಮಸ್ ಆಗಿದ್ದಾರೆ. ಸದ್ಯ ಸಕ್ಸಸ್ಗಳ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಹೊಸ ಚಾಲೆಂಜ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಹೌದು, ಬಾಹುಬಲಿಯ ಅವಂತಿಕಾ ಥರದ ಪಾತ್ರದಲ್ಲಿ ಅಂದರೆ, ಐತಿಹಾಸಿಕ ಘಟನೆ ಆಧರಿಸಿದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಅಷ್ಟಕ್ಕೂ ಯಾವ ಸಿನಿಮಾ (Rashmika Mandanna new movie) ಗೊತ್ತಾ? ಇಲ್ಲಿದೆ ಪೂರ್ಣ ಮಾಹಿತಿ.

ರಶ್ಮಿಕಾ ಮಂದಣ್ಣ ‘ಛವಾ’ (chava) ಎಂಬ ಹೆಸರಿನ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಇವರಿಗೆ ಜೋಡಿಯಾಗಿ ವಿಕ್ಕಿ ಕೌಶಲ್ (Vickky Koushal) ಅಭಿನಯಿಸಲಿದ್ದು, ಈ ಚಿತ್ರ ಲಕ್ಷ್ಮಣ್ ಉಟೇಕರ್ ನಿರ್ದೇಶನದಲ್ಲಿ ಮೂಡಿ ಬರಲಿದೆ. ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು ಮ್ಯಾಡಾಕ್ ಫಿಲ್ಮ್ಸ್ ಇದಕ್ಕೆ ಬಂಡವಾಳ ಹೂಡುತ್ತಿದೆ.

ಇದು ಐತಿಹಾಸಿಕ ವಿಷಯಗಳನ್ನು ಆಧರಿಸಿದ ಸಿನಿಮಾವಾಗಿದ್ದು, ಛತ್ರಪತಿ ಶಿವಾಜಿ (Chathrapati Shivaji) ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜ್ (Sambaji Maharaj) ಅವರ ಕಥೆಯನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾ ಸಂಭಾಜಿ ಅವರ ಶೌರ್ಯ, ಯುದ್ಧಗಳನ್ನು ಗೆಲ್ಲುವ ತಂತ್ರ ಹಾಗೂ ಅಂತಿಮ ತ್ಯಾಗದ ಬಗ್ಗೆ ಹೇಳುತ್ತದೆ. ಅಲ್ಲದೆ, ಪತಿ-ಪತ್ನಿ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ವಿಭಿನ್ನ ರೀತಿಯಲ್ಲಿ ತೆರೆ ಮೇಲೆ ತರಲಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈವರೆಗೂ ಹಲವು ಸಿನಿಮಾ ಮಾಡಿದ್ದು, ಸೂಪರ್ ಹಿಟ್ ಕೂಡ ಆಗಿದೆ. ಸದ್ಯ ರಶ್ಮಿಕಾ ಗೆ ಪೌರಾಣಿಕವಾದ ಪಾತ್ರ ಮೊದಲ ಬಾರಿ ಆಗಿದ್ದು, ಈ ಸಿನಿಮಾ ಚಾಲೆಂಜಿಂಗ್ ಆಗಿದೆ ಎನ್ನಬಹುದು.

ಇದನ್ನೂ ಓದಿ: ಶಿವರಾಜ್ ಕುಮಾರ್-ಗೀತಾ ಮದುವೆಗೆ ಅಣ್ಣಾವ್ರು ಒಪ್ಪಿರಲಿಲ್ಲ, ಹಾಗಾದ್ರೆ ಮದ್ವೆ ಮಾಡಿದ್ದು ಯಾರು ?!

You may also like

Leave a Comment