Home » ರೇಣುಕಾಸ್ವಾಮಿ ಕೊಲೆ ಪ್ರಕರಣ: ಡಿ.17 ರಿಂದ ಟ್ರಯಲ್‌ ಆರಂಭ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಡಿ.17 ರಿಂದ ಟ್ರಯಲ್‌ ಆರಂಭ

0 comments

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಮತ್ತು ಗ್ಯಾಂಗ್‌ ವಿರುದ್ಧ ಡಿ.17 ರಂದು ಟ್ರಯಲ್‌ ಆರಂಭ ಆಗಲಿದೆ. ಡಿ.16 (ಇಂದು) ಸ್ಥಳ ಪರಿಶೀಲನೆ ನಡೆಸಿದೆ. ಇದರ ಸಲುವಾಗಿ ಮೊದಲ ಸಾಕ್ಷಿಗಳಾಗಿ ರೇಣುಕಾಸ್ವಾಮಿ ತಂದೆ, ತಾಯಿಗೆ ಸಮನ್ಸ್‌ ಜಾರಿಯಾಗಿದೆ. ಬುಧವಾರ ವಿಚಾರಣೆ ನಡೆಯಲಿದೆ.

ರೇಣುಕಾಸ್ವಾಮಿ ಹಿನ್ನೆಲೆ, ಕೊನೆಯ ಭೇಟಿ, ಅಪಹರಣ, ಶವ ಪತ್ತೆ ಕುರಿತು ತಂದೆ ತಾಯಿ ವಿವರಿಸಲಿದ್ದಾರೆ. ಆರೋಪಿಗಳ ಪರ ವಕೀಲರು ಸಮಯ ಕೋರಲಿದ್ದಾರೆ. ಇವರ ಹೇಳಿಕೆ ಮುಕ್ತಾಯಗೊಂಡರೆ ಕೆಲವು ಸಾಕ್ಷಿಗಳಿಗೆ ಸಮನ್ಸ್‌ ನೀಡಲಾಗುವುದು.

272 ಸಾಕ್ಷಿಗಳಲ್ಲಿ ಮುಖ್ಯ ಸಾಕ್ಷಿಗಳ ವಿಚಾರಣೆಯನ್ನು ಎಸ್‌ಪಿಪಿ ಮಾಡಲಿದ್ದಾರೆ. ಆರೋಪಿಗಳ ಪರ ವಕೀಲರು ಎಲ್ಲಾ ಸಾಕ್ಷಿಗಳನ್ನೂ ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ಸಾಕ್ಷ್ಯದ ಕುರಿತು ಆರೋಪಿಗಳ ಹೇಳಿಕೆ ದಾಖಲು ಮಾಡಲಾಗುವುದು. ನಂತರ ಸಾಕ್ಷ್ಯ ಒದಗಿಸಲು ಆರೋಪಿಗಳಿಗೆ ಅವಕಾಶ ನೀಡಲಾಗುತ್ತದೆ. ನಂತರ ಕೊನೆಯದಾಗಿ ವಾದ ಮಂಡನೆ ನಡೆದು ಕೋರ್ಟ್‌ ತೀರ್ಪು ಪ್ರಕಟಿಸಲಿದೆ.

You may also like