Home » Rishab Shetty: ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಶೆಟ್ರು ಕೊಟ್ರು ಸ್ಪಷ್ಟನೆ! ಕಾಂತಾರ – 2ಬಗ್ಗೆಯೂ ನೀಡಿದ್ರು ಬಿಗ್ ಅಪ್ಡೇಟ್!

Rishab Shetty: ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಶೆಟ್ರು ಕೊಟ್ರು ಸ್ಪಷ್ಟನೆ! ಕಾಂತಾರ – 2ಬಗ್ಗೆಯೂ ನೀಡಿದ್ರು ಬಿಗ್ ಅಪ್ಡೇಟ್!

0 comments
Rishab Shetty

Rishab Shetty: ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ(Kantara Cinema) ದಕ್ಕಲೆಬೇಕು. ಇಷ್ಟೇ ಅಲ್ಲದೆ ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ(Rishab Shetty) ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದ್ದಂತು ಸುಳ್ಳಲ್ಲ.

‘ಕಾಂತಾರ’ ಸಿನಿಮಾ (Kantara Cinema) ರಿಷಬ್ ಶೆಟ್ಟಿ ವೃತ್ತಿ ಜೀವನದಲ್ಲಿ ದೊಡ್ದ ಮೈಲಿಗಲ್ಲು ಸೃಷ್ಟಿ ಮಾಡಿದ್ದು, ರಾತ್ರೋ ರಾತ್ರಿ ದೊಡ್ದ ಮಟ್ಟದ ನೇಮ್ ಫೇಮ್ ತಂದುಕೊಟ್ಟಿದೆ. ಡಿವೈನ್ ಸ್ಟಾರ್ ಎಂಬ ಬಿರುದು ಕೂಡ ಒಲಿದುಬಂದಿದೆ. ಇಡೀ ಭಾರತೀಯ ಚಿತ್ರರಂಗವು ತಿರುಗಿ ನೋಡುವಂತೆ ಮಾಡಿದ ಖ್ಯಾತಿ, ಕೆಜಿಎಫ್ ಮತ್ತು ಕಾಂತಾರ ಸಿನಿಮಾಗೆ ದಕ್ಕಬೇಕು. ಬೇರೆ ಭಾಷೆಯ ರಿಷಬ್ ಶೆಟ್ಟಿ (Rishab Shetty) ಮುಂದಿನ ಚಿತ್ರದ ಬಗ್ಗೆ ವಿಶೇಷ ಕುತೂಹಲ ಮೂಡಿಸಿಕೊಂಡಿದ್ದಾರೆ. ಸದ್ಯ , ಶೆಟ್ರು, ‘ಕಾಂತಾರ 2’ ಸಿನಿಮಾ (Kantara 2 Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಈ ಸಿನಿಮಾ ಸಿದ್ಧತೆಯ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ. ಸದ್ಯ, ರಾಜಕೀಯಕ್ಕೆ ಶೆಟ್ರು ಎಂಟ್ರಿ ಕೊಡುತ್ತಾರಾ ಎಂಬ ಅನುಮಾನ ಅಭಿಮಾನೀ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಊಹಾಪೋಹಗಳಿಗೆ ತೆರೆ ಎಳೆಯುವ ಸಲುವಾಗಿ ರಿಷಬ್ ಶೆಟ್ಟಿ ಯವರು ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಶೆಟ್ರು ಬಿಜೆಪಿ ಪಾಳಯದತ್ತ ಮುಖ ಮಾಡುತ್ತಾರಾ ಎಂಬ ಸಣ್ಣ ಗೊಂದಲ ಜನರಲ್ಲಿ ಮನೆ ಮಾಡಿತ್ತು. ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ರಿಷಬ್ ಶೆಟ್ಟಿ ತೆರಳಿದ್ದು, ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavararaj Bommayi)ಕೂಡ ದೇವಾಲಯಕ್ಕೆ ಬಂದಿದ್ದರು. ಇಬ್ಬರು ಒಟ್ಟಾಗಿ ಫೋಟೋ ತೆಗೆಸಿಕೊಂಡಿದ್ದರಿಂದ ಇದಕ್ಕೆ ರೆಕ್ಕೆ ಪುಕ್ಕ ಸೇರಿಸಿ, ರಾಜಕೀಯಕ್ಕೆ (Politics) ಎಂಟ್ರಿ ಕೊಡೋದು ಪಕ್ಕಾ ಎನ್ನುವಂತೆ ಬಿಂಬಿಸಲಾಗಿತ್ತು. ‘ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಹೋದಾಗ ಮುಖ್ಯಮಂತ್ರಿಗಳ ಭೇಟಿಯಾಯಿತು. ಆದರೆ, ರಾಜಕೀಯಕ್ಕೆ ಹೋಗುವ ಯಾವ ಆಲೋಚನೆ ಕೂಡ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ರಾಜಕೀಯದ ಬಣ್ಣ ಬೇಡ. ಕಾಂತಾರದ ಬರವಣಿಗೆಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದು, ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ’ ಎಂದು ರಿಷಬ್ ಶೆಟ್ಟಿ ಕೇಳಿಕೊಂಡಿದ್ದಾರೆ. ಇದರ ಜೊತೆಗೆ, ರಾಜಕೀಯಕ್ಕೆ ಎಂಟ್ರಿ ಕೊಡುವ ಆಲೋಚನೆ ಇಲ್ಲ ಎಂದು ಹೇಳಿ ಶೆಟ್ರು ಸ್ಪಷ್ಟನೆ ನೀಡಿದ್ದಾರೆ.

https://twitter.com/shetty_rishab/status/1646534778731241473/photo/1

You may also like

Leave a Comment