Home » Roopesh shetty: ದೊಡ್ಡಪರದೆಯಲ್ಲಿ ಮಿಂಚಲು ರೂಪೇಶ್‌ ಶೆಟ್ಟಿ ರೆಡಿ! ಯಾವ ಸಿನಿಮಾ, ಪಾತ್ರವೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Roopesh shetty: ದೊಡ್ಡಪರದೆಯಲ್ಲಿ ಮಿಂಚಲು ರೂಪೇಶ್‌ ಶೆಟ್ಟಿ ರೆಡಿ! ಯಾವ ಸಿನಿಮಾ, ಪಾತ್ರವೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

0 comments
Roopesh shetty

Roopesh shetty: ಕುಡ್ಲದ ಕುವರ ರೂಪೇಶ್ ಶೆಟ್ಟಿ (Roopesh shetty) ಬಿಗ್‌ಬಾಸ್ ಸೀಸನ್ 9ರಲ್ಲಿ ಸಾಕಷ್ಟು ಮೋಜು, ಮಸ್ತಿ ಮೂಲಕ ಜನರಿಗೆ ಮನರಂಜನೆ ನೀಡುತ್ತಾ ಜನಮನಗೆದ್ದು, ಬಿಗ್ ಬಾಸ್ ಸೀಸನ್ 9ರ (bigg boss season 9) ಟ್ರೋಫಿಯನ್ನೂ ಗೆದ್ದಿದ್ದಾರೆ. ಬಿಗ್ ಬಾಸ್ ಸೀಸನ್ 9ರಲ್ಲಿ ಘಟಾನುಘಟಿ ಸ್ಪರ್ಧಿಗಳೊಡನೆ ಪೈಪೋಟಿ ನಡೆಸಿ, ವಿನ್ನರ್ ಪಟ್ಟ ಮುಡಿಗೇರಿಸಿಕೊಂಡ ರೂಪೇಶ್ ಶೆಟ್ಟಿ ‘ಒಲವಿನ ನಿಲ್ದಾಣ’ (Olavina Nildana) ಸೀರಿಯಲ್ ಮೂಲಕ ಕಿರುತೆರೆಗೆ ಮರಳಿದ್ದರು. ಇದೀಗ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಶೆಟ್ರು ಲವ್ ಮಿ OR ಹೇಟ್ ಮಿ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ (Krishna) ಹಾಗೂ ರಚಿತಾ ರಾಮ್ (Rachitha Ram) ನಟನೆಯ ಲವ್ ಮಿ OR ಹೇಟ್ ಮಿ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ (Roopesh Shetty) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್’ಬಾಸ್ ನಂತರ ಕಿರುತೆರೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಶೆಟ್ರು ಇದೀಗ ಬೆಳ್ಳಿತೆರೆಯ ಮೂಲಕ ಜನರನ್ನು ರಂಜಿಸಲು ರೆಡಿಯಾಗಿದ್ದಾರೆ.

Src: public tv


ಲವ್ ಮಿ OR ಹೇಟ್ ಮಿ (love me or hate me) ಸಿನಿಮಾ ದೀಪಕ್ ಗಂಗಾಧರ್ ನಿರ್ದೇಶಿಸಿದ್ದು, ಈ ಸಿನಿಮಾ ನವಿರಾದ ಪ್ರೇಮಕಥೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಕೃಷ್ಣ- ರಚಿತಾ ಜೋಡಿ ಮೋಡಿ ಮಾಡಲಿದೆ. ಸಿನಿಮಾ ಶೇ.90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಜೂನ್‌ನಲ್ಲಿ ಒಂದೆರಡು ಹಾಡುಗಳ ಚಿತ್ರೀಕರಣ ನಡೆಯಲಿದೆ. ಇದೇ ಸೆಪ್ಟೆಂಬರ್‌ಗೆ ಸಿನಿಮಾ ತೆರೆಗೆ ಬರಲಿದೆ.

‘ಲವ್ ಮಿ ಔರ್ ಹೇಟ್ ಮಿ’ ಸಿನಿಮಾ ಮೂಲಕ ಕೃಷ್ಣ ಮತ್ತು ರಚಿತಾ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಟ, ನಿರೂಪಕ, ನಿರ್ದೇಶಕನಾಗಿರುವ ರೂಪೇಶ್ ಶೆಟ್ಟಿ ಬಣ್ಣಹಚ್ಚಲಿದ್ದಾರೆ. ಚಿತ್ರದಲ್ಲಿ ರೂಪೇಶ್‌ ಶೆಟ್ಟಿ ಪಾತ್ರಕ್ಕೆ ಪ್ರಾಮುಖ್ಯತೆಯಿದ್ದು, ಯಾವ ಪಾತ್ರ ಮಾಡಲಿದ್ದಾರೆ?. ಚಿತ್ರ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

ಇದನ್ನು ಓದಿ: Nalin Kumar Kateel: ನಳಿನ್, ಸಂದಾನಂದ ಗೌಡರ ಚಿತ್ರಕ್ಕೆ ಚಪ್ಪಲಿ ಹಾರ ಪ್ರಕರಣ: ಕೊನೆಗೂ ಮೌನ ಮುರಿದ ಕಟೀಲ್; ಏನಂದ್ರು ಗೊತ್ತಾ? 

You may also like

Leave a Comment