Home » Salman Khan: ಹೇ ಸಲ್ಮಾನ್, ಗೋಲ್ಡಿ ಬ್ರಾರ್‌ ಜೊತೆ ಮಾತನಾಡು, ಇಲ್ಲದಿದ್ದರೆ ಕೊಂದು ನಿನ್ನ ಅಹಂ ಇಳಿಸ್ತೇವೆ: ನಟ ಸಲ್ಮಾನ್‌ಗೆ ಮತ್ತೆ ಜೀವ ಬೆದರಿಕೆ

Salman Khan: ಹೇ ಸಲ್ಮಾನ್, ಗೋಲ್ಡಿ ಬ್ರಾರ್‌ ಜೊತೆ ಮಾತನಾಡು, ಇಲ್ಲದಿದ್ದರೆ ಕೊಂದು ನಿನ್ನ ಅಹಂ ಇಳಿಸ್ತೇವೆ: ನಟ ಸಲ್ಮಾನ್‌ಗೆ ಮತ್ತೆ ಜೀವ ಬೆದರಿಕೆ

by ಹೊಸಕನ್ನಡ
0 comments
Salman Khan

Salman Khan :ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನಿಂದ(Gangster Goldy Brar) ಜೀವ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್(Salman khan) ಖಾನ್‌ಗೆ ಹಾಗೂ ಅವರ ನಿವಾಸಕ್ಕೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಹೌದು, ಗಾಯಕ ಸಿಧು ಮೂಸೆವಾಲಾ(Sidhu Musevala) ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪಾತಕಿ ಲಾರೆನ್ಸ್‌ ಬಿಷ್ಣೊಯ್‌(Lawrence Bishnoi) ನಿಂದ ಹಾಗೂ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನಿಂದ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಸೋಮವಾರ ಬೆಳಿಗ್ಗೆಯಿಂದ ಮುಂಬೈ ಪೊಲೀಸರು ಬಾಂದ್ರಾದ ಸಲ್ಮಾನ್ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನು ಆರಂಭಿಸಿದ್ದಾರೆ.

ಕಳೆದ ಶುಕ್ರವಾರ ಸಲ್ಮಾನ್ ಖಾನ್ (Salman Khan)  ಗೆ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಸಂದೇಶ ಕಳುಹಿಸಿ ‘ನನ್ನ ಹಾಗೂ ನನ್ನ ಗುಂಪಿನ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ಸಲ್ಮಾನ್‌, ನಿನ್ನನ್ನು ಶೀಘ್ರದಲ್ಲೇ ಕೊಲ್ಲುತ್ತೇವೆ, ಇಲ್ಲವೇ ನಿನ್ನ ಅಹಂ ಇಳಿಸುತ್ತೇವೆ ಎಂದು ಹೕಳಿದ್ದ. ಆದರೀಗ ಇದೇ ರೀತಿಯಲ್ಲಿ ಮತ್ತೊಂದು ಬೆದರಿಕೆ ಬಂದಿದ್ದು, ದೂರು ಕೂಡ ದಾಖಲಾಗಿದೆ.

ಹೌದು, ಸಲ್ಮಾನ್‌ ಖಾನ್‌ ಕಚೇರಿಗೆ ಈ ಮೇಲ್ ಮೂಲಕ ಬಂದ ಬೆದರಿಕೆಯಲ್ಲಿ ‘ಸಲ್ಮಾನ್ ನೀನು ಗೋಲ್ಡಿ ಬ್ರಾರ್‌ನ್ನು ಮುಖಾಮುಖಿಯಾಗಿ ಭೇಟಿಯಾಗಬೇಕು. ಇಲ್ಲದಿದ್ದರೇ ಮುಂದಾಗುವ ಅನಾಹುತಕ್ಕೆ ನೀನೆ ಹೊಣೆ. ಮುಂದಿನ ಸಾರಿ ಖಂಡಿತ’ ಎಂದು ಹೇಳಲಾಗಿದೆ. ಈ ಪತ್ರವನ್ನು ಗೋಲ್ಡಿ ಬ್ರಾರ್‌ ಸಹಾಯಕ ಕಳಿಸಿದ್ದಾನೆ ಎಂದು ಹೇಳಲಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಕಚೇರಿಯ ಸಿಬ್ಬಂದಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಂದಹಾಗೆ ಇತ್ತೀಚೆಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೈಲಿನಿಂದ ನಡೆದ ಸಂದರ್ಶನವೊಂದರಲ್ಲಿ, ‘ಕೃಷ್ಣಮೃಗ, ಚಿಂಕಾರ ಬೇಟೆ ಪ್ರಕರಣದಲ್ಲಿ ದೋಷಮುಕ್ತವಾಗಿರುವ ನಟ ಸಲ್ಮಾನ್ ಖಾನ್ ಕ್ಷಮೆಯಾಚಿಸದಿದ್ದರೆ, ಅವನ ಅಹಂ ಛಿದ್ರವಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ಸಲ್ಮಾನ್ ನಮ್ಮ ಸಮಾಜಕ್ಕೆ ಹಾನಿ ಮಾಡಿದ್ದಾರೆ ಎಂದು ಬಿಷ್ಣೋಯ್ ಹೇಳಿದ್ದಾನೆ.

ಬಿಷ್ಣೋಯಿ(Bishnoi) ಸಮುದಾಯವನ್ನು ಚಿಂಕಾರದ ರಕ್ಷಕ ಎಂದು ಕರೆಯಲಾಗುತ್ತದೆ. ‘ಹಮ್ ಸಾಥ್ ಸಾಥ್ ಹೇ’ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣಮೃತ ಮತ್ತು ಚಿಂಕಾರವನ್ನು ಬೇಟೆಯಾಡಿದ್ದು ಬಿಷ್ಣೋಯ್ ಸಮುದಾಯವನ್ನು ಕೆರಳಿಸಿದೆ. ಹೀಗಾಗಿ ಸಲ್ಮಾನ್ ಕ್ಷಮೆಯಾಚಿಸಬೇಕೆಂದು ಬಿಷ್ಣೋಯಿ ಸಮುದಾಯದ ಈ ಪ್ರಮುಖರು ಪಟ್ಟು ಹಿಡಿದಿದ್ದಾರೆ.

You may also like

Leave a Comment