Home » Samanta Temple: ಸಮಂತಾ ದೇವೋ ಭವ ಎನ್ನುತ್ತ ಆಕೆಗೆ ಗುಡಿ ಕಟ್ಟಿದ ಅಭಿಮಾನಿ, ಅದ್ಕೆ ಆತ ಖರ್ಚು ಮಾಡಿದ್ದೆಷ್ಟು ಲಕ್ಷ ಗೊತ್ತಾ ?!

Samanta Temple: ಸಮಂತಾ ದೇವೋ ಭವ ಎನ್ನುತ್ತ ಆಕೆಗೆ ಗುಡಿ ಕಟ್ಟಿದ ಅಭಿಮಾನಿ, ಅದ್ಕೆ ಆತ ಖರ್ಚು ಮಾಡಿದ್ದೆಷ್ಟು ಲಕ್ಷ ಗೊತ್ತಾ ?!

by Mallika
3 comments
Samanta Temple

Samantha Temple: ತಮಿಳುನಾಡಿನಲ್ಲಿ ಅಭಿಮಾನಿಗಳು ಕೆಲ ನಟಿಯರಿಗೆ ದೇವಸ್ಥಾನ ಕಟ್ಟಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಖುಷ್ಬೂ, ನಿಧಿ ಅಗರ್ವಾಲ್‌, ನಯನತಾರಾ ಹಾಗೂ ನಮಿತಾಗೆ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ನಟ ನಟಿಯರಿಗೆ ಫ್ಯಾನ್ಸ್‌ ಜೊತೆಗೆ ನಟ ನಟಿಯರನ್ನು ದೇವರ ತರ ಪೂಜಿಸುವವರೂ ಇದ್ದಾರೆ. ಹಾಗೆಯೇ ಇತ್ತೀಚೆಗೆ ಅಭಿಮಾನಿಯೊಬ್ಬ ಸಮಂತಾಗೆ ದೇವಸ್ಥಾನ (Samantha Temple) ಕಟ್ಟಿ ಅಭಿಮಾನ ಮೆರೆದಿದ್ದಾನೆ.

ಹೌದು, ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ಸಮಂತಾಗೆ ಅಭಿಮಾನಿಯೊಬ್ಬ ದೇವಸ್ಥಾನ ಕಟ್ಟಿರುವ ವಿಚಾರ ಎಲ್ಲೆಡೆ ಸುದ್ದಿ ಆಗಿದ್ದು, ಈಗ ದೇಗುಲ ನಿರ್ಮಾಣಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎಂಬ ವಿಷಯ ಭಾರೀ ಚರ್ಚೆ ಆಗುತ್ತಿದೆ.

ಹೌದು, ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಚುಂಡೂರು ಮಂಡಲದ ಆಲಪಾಡುವಿನ ತೆನಾಲಿ ಸಂದೀಪ್ ಎಂಬ ಯುವಕ ಸಮಂತಾ ಅವರ ದೊಡ್ಡ ಅಭಿಮಾನಿ. ಈತ ತನ್ನ ಮನೆಯ ಆವರಣದಲ್ಲೇ ನಟಿಗೆ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ.

ಈ ದೇವಸ್ಥಾನ ನಿರ್ಮಿಸಲು ಸಂದೀಪ್ 5 ಲಕ್ಷ ಖರ್ಚು ಮಾಡಿದ್ದಾರಂತೆ. ಇವರು ತಮ್ಮ ಮನೆಯ ಆವರಣದಲ್ಲಿ ದೇವಸ್ಥಾನಕ್ಕೆ ಜಾಗ ಮೀಸಲಿಟ್ಟು ಆಕೆಯ ಮೂರ್ತಿ ತಯಾರಿಸಿದ್ದರು. ಏಪ್ರಿಲ್ 28 ರಂದು ಸಮಂತಾ ಅವರ ಹುಟ್ಟುಹಬ್ಬದ ವೇಳೆ ಮೂರ್ತಿ ಇಟ್ಟು ದೇಗುಲ ತೆರೆದಿದ್ದಾರೆ.
ಆದರೆ ಸಮಂತಾ ಮೇಲಿನ ಪ್ರೀತಿಗೆ ಹೋಲಿಸಿದರೆ ಇದೇನು ದೊಡ್ಡ ವಿಷ್ಯವಲ್ಲ ಎಂದು ಸಂದೀಪ್ ಹೇಳಿದ್ದಾರೆ.

ಒಟ್ಟಿನಲ್ಲಿ ದೇವಸ್ಥಾನದಲ್ಲಿ ಸಮಂತಾ ಮೂರ್ತಿ ನೋಡಿ “ದೇವಸ್ಥಾನ ಇದೆ ಆದರೆ ಸಮಂತಾ ಎಲ್ಲಿ?” ಎಂದು ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ.

 

ಇದನ್ನೂ ಓದಿ: ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಗಲಿದೆ ಭರ್ಜರಿ ಸಬ್ಸಿಡಿ!

You may also like

Leave a Comment