Home » Samantha viral tweet : ರಾಕಿಂಗ್ ಸ್ಟಾರ್ ತರಹ ರೈಸ್ ಅಪ್ ಬೇಬಿಯಾದ ಸಮಂತಾ! ಎಲ್ಲೆಡೆ ವೈರಲ್ ಆದ ರೈಸ್ ಅಪ್ ಬೇಬಿ ಸ್ಯಾಮ್!!!

Samantha viral tweet : ರಾಕಿಂಗ್ ಸ್ಟಾರ್ ತರಹ ರೈಸ್ ಅಪ್ ಬೇಬಿಯಾದ ಸಮಂತಾ! ಎಲ್ಲೆಡೆ ವೈರಲ್ ಆದ ರೈಸ್ ಅಪ್ ಬೇಬಿ ಸ್ಯಾಮ್!!!

0 comments
Samantha viral tweet

Samantha viral tweet :ಬಹುಭಾಷಾ ನಟಿ ಸಮಂತಾ ಅವರು ಶಾಕುಂತಲಂ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಏಪ್ರಿಲ್ ನಲ್ಲಿ ಸಿನೆಮಾ ರಿಲೀಸ್ ಆಗಲಿದೆ. ಇದೀಗ ಸಮಂತಾ ಅವರು ಸಿನೆಮಾ ಪ್ರಚಾರದಲ್ಲಿ ಪಾಲ್ಗೊಂಡು ಅನೇಕ ವಾಹಿನಿಗಳಿಗೆ ಸಂದರ್ಶನಗಳನ್ನು ಕೊಡುತ್ತಿದ್ದಾರೆ. ಇದರ ನಡುವೆಯು ಸಮಂತಾ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ. ಇದೀಗ ಶೇರ್ ಮಾಡಿರುವ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಸಮಂತಾ(Samantha viral tweet) ಅವರು ಮೇಕಪ್ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ. ಅರೇ ಈ ಫೋಟೋದಲ್ಲಿ ಏನ್ ವಿಶೇಷತೆಯಿದೆ ಅಂತೀರಾ?

ಹೌದು ಫೋಟೋದಲ್ಲಿ ವಿಶೇಷತೆ ಇಲ್ಲ ಆದರೆ ಸಮಂತಾ ನೀಡಿರುವ ಕ್ಯಾಪ್ಷನ್ ನಲ್ಲಿ ಖಂಡಿತಾ ವಿಶೇಷತೆ ಇದ್ದು, ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ.

 

ಸಮಂತಾ ಅವರು ಫೋಟೊ ಗೆ ‘ ರೈಸ್ ಆಪ್ ಬೇಬಿ ‘ ಎಂದು ಕ್ಯಾಪ್ಷನ್ ನೀಡಿದ್ದಾರೆ. ಆದರೆ ಈ ಕ್ಯಾಪ್ಷನ್ ಎಲ್ಲೋ ನೋಡಿದ ಹಾಗೇ ಇದೆ ಅಲ್ವಾ?

ಹೌದೂ ರಾಕಿಂಗ್ ಸ್ಟಾರ್ ಯಶ್ ( Rocking star yash)ಅವರು ಕೆಲ ದಿನಗಳ ಹಿಂದೆ ಇದೇ ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರು ಪೆಪ್ಸಿ ಜಾಹೀರಾತಿನ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೆಪ್ಸಿ ಜಾಹೀರಾತಿನ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನಲ್ಲಿ ಪೆಪ್ಸಿ ಜಾಹೀರಾತಿನ ಕ್ಯಾಪ್ಷನ್ ‘ರೈಸ್ ಅಪ್ ಬೇಬಿ’ ಅನ್ನು ಕೂಡ ಬಳಸಿದ್ದಾರೆ.

 

ಅದೇ ಕ್ಯಾಪ್ಷನ್ ಅನ್ನು ಸಮಂತಾ ಬಳಸಿರುವುದು ನೆಟ್ಟಿಗರಿಗೆ ಆಶ್ಚರ್ಯಕರ ವಾಗಿದೆ. ಅರೇ ಇದೇನಿದು ಸಮಂತಾ ಪೆಪ್ಸಿ ಜಾಹೀರಾತಿನಲ್ಲಿ ಭಾಗವಹಿಸಿದ್ದಾರೆಯೇ ಎಂದು ಅನುಮಾನನ್ನು ಮೂಡಿಸಿದೆ. ಆದರೆ ಸಮಂತಾ ಈ ಜಾಹೀರಾತಿನಲ್ಲಿ ಪಾಲ್ಗೊಂಡಿಲ್ಲ. ಕೇವಲ ತಮ್ಮ ಸೆಲ್ಫ್ ಮೋಟಿವೇಶನ್ ಗೆ ಈ ಕ್ಯಾಪ್ಷನ್ ಅನ್ನು ಬಳಸಿದ್ದಾರೆ. ಸಮಂತಾ ಅವರು ಇತ್ತೀಚಿಗೆ ಅನಾರೋಗ್ಯದಿಂದ ಬಳಲಿದ್ದರು ಮತ್ತು ವಿಚ್ಛೇದನದಿಂದ ಸಾಕಷ್ಟು ನೋವು ಅನುಭವಿಸಿರುವುದು ನಿಮಗೆಲ್ಲ ಗೊತ್ತೇ ಇದೆ, ಇದರಿಂದ ಹೊರಬರಲು ಸಮಂತಾ ಅನೇಕ ಕಷ್ಟ ಪಟ್ಟಿದ್ದಾರೆ. ಇವೆಲ್ಲದರಿಂದ ಹೊರ ಬರಲು ಈ ರೀತಿ ಕ್ಯಾಪ್ಷನ್ ನೀಡಿರಬಹುದು. ಆದರೆ ಈ ಕ್ಯಾಪ್ಷನ್ ಅಭಿಮಾನಿಗಳಿಗೆ ಕುತೂಹಲವನ್ನು ಮೂಡಿಸಿದೆ.

You may also like

Leave a Comment