Home » Actress Samanta: ಹಿರೋಯಿನ್ ಆಗಿದ್ದ ಸಮಂತಾ ತಾಯಿಯ ಪಾತ್ರಕ್ಕೆ ಎಂಟ್ರಿ ; ಪ್ರಿಯಾಂಕಾ ಚೋಪ್ರಾಗೆ ತಾಯಿಯಾಗಿ ಸಮಂತಾ ನಟನೆ!

Actress Samanta: ಹಿರೋಯಿನ್ ಆಗಿದ್ದ ಸಮಂತಾ ತಾಯಿಯ ಪಾತ್ರಕ್ಕೆ ಎಂಟ್ರಿ ; ಪ್ರಿಯಾಂಕಾ ಚೋಪ್ರಾಗೆ ತಾಯಿಯಾಗಿ ಸಮಂತಾ ನಟನೆ!

0 comments
Actress Samantha

Actress Samantha: ತೆಲುಗಿನ ಸ್ಟಾರ್ ನಾಯಕಿಯರಲ್ಲಿ ಸಮಂತಾ (Actress Samantha) ಕೂಡ ಒಬ್ಬರು. ಹಲವು ವರ್ಷಗಳಿಂದ ಸಮಂತಾ ತನ್ನ ಸಿನಿಮಾಗಳಿಗೆ ಪ್ರತ್ಯೇಕ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದು ಮಾತ್ರವಲ್ಲದೆ ತನಗಾಗಿಯೇ ಪ್ರತ್ಯೇಕ ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿದ್ದಾರೆ. ಸ್ಟಾರ್ ನಟಿ ಸಮಂತಾ ಶಾಕುಂತಲಂ ಸಿನಿಮಾ ನಂತರ ಇದೀಗ ವೆಬ್ ಸಿರೀಸ್ ನಲ್ಲಿ (web series) ನಟಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಸುದ್ಧಿಯೊಂದು ಸದ್ದು ಮಾಡುತ್ತಿದ್ದು, ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ಸಮಂತಾ ಪ್ರಿಯಾಂಕಾ ಚೋಪ್ರಾಗೆ (Priyanka Chopra) ತಾಯಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಸಿಟಾಡೆಲ್‌ನ (Citadel) ಭಾರತೀಯ ಆವೃತ್ತಿಯಲ್ಲಿ ನಟಿ ಸಮಂತಾ ರುತ್ ಪ್ರಭು ( Samantha Ruth Prabhu) ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

ರಾಜ್-ಡಿಕೆ ನಿರ್ದೇಶನದ ಸಿಡಾಟೆಲ್ (Citadel) ಇಂಡಿಯಾದ ಚಿತ್ರೀಕರಣ ನಡೆಯುತ್ತಿದೆ. ಸಿಟಾಡೆಲ್ ಇಂಡಿಯಾದಲ್ಲಿ ಸಮಂತಾ ರುತ್ ಪ್ರಭು ಮತ್ತು ವರುಣ್ ಧವನ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅವರ ಹಾಲಿವುಡ್‌ ವೆಬ್‌ ಸರಣಿ ‘ಸಿಟಾಡೆಲ್’ ಭಾರೀ ಸದ್ದು ಮಾಡಿತ್ತು. ಪ್ರಿಯಾಂಕಾ ಚೋಪ್ರಾ ವೆಬ್‌ ಸರಣಿಯ ಅಡಿಪಾಯ ಆವೃತ್ತಿಯನ್ನು ಮುನ್ನಡೆಸುತ್ತಿದ್ದರೆ, ನಟಿ ಸಮಂತಾ ಭಾರತೀಯ ಕೌಂಟರ್‌ಪಾರ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಮಂತಾ ನಟನೆಯ ಶಾಕುಂತಲಂ ಚಿತ್ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆಗೆ ಬಂದಿದೆ. ಈ ಸಿನಿಮಾ ತೆಲುಗು (Telugu), ತಮಿಳು (thamil), ಕನ್ನಡ (kannada) ಮತ್ತು ಹಿಂದಿ (Hindi) ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಆದರೆ, ನಿರೀಕ್ಷಿಸಿದ ಗೆಲುವನ್ನು ಕಂಡಿಲ್ಲ. ಹೆಚ್ಚಿನ ಗಳಿಕೆ ಆಗಿಲ್ಲ. ಆನಂತರ ಸಮಂತಾ ಇದೀಗ ನಟ ವಿಜಯ್ ದೇವರಕೊಂಡ (Vijaya devarakonda) ಜೊತೆಗೆ ಖುಷಿ ಚಿತ್ರ (Kushi film) ಮಾಡುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದ ಮೇಲೆ ಸಮಂತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 

ಇದನ್ನು ಓದಿ: Sexual Harrasment: ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಯುವಕನ ಪರ ನಿಂತ ಪುರುಷರ ಸಂಘ ; ಹಾಗಿದ್ದರೆ ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪ ಸುಳ್ಳಾ? 

You may also like

Leave a Comment