Home » Sadhu Kokila: ಐಷಾರಾಮಿ ಜೀವನ ಕೊಟ್ಟ ಕಾಂಗ್ರೆಸ್ ಎಲ್ಲರಿಗೂ ತಂದೆ-ತಾಯಿ! ಸಿದ್ದು-ಡಿಕೆಶಿಯೇ ಇಲ್ಲಿ ಹುಲಿ-ಸಿಂಹ :ನಟ ಸಾಧುಕೋಕಿಲ!

Sadhu Kokila: ಐಷಾರಾಮಿ ಜೀವನ ಕೊಟ್ಟ ಕಾಂಗ್ರೆಸ್ ಎಲ್ಲರಿಗೂ ತಂದೆ-ತಾಯಿ! ಸಿದ್ದು-ಡಿಕೆಶಿಯೇ ಇಲ್ಲಿ ಹುಲಿ-ಸಿಂಹ :ನಟ ಸಾಧುಕೋಕಿಲ!

by ಹೊಸಕನ್ನಡ
0 comments

Sadhu Kokila: ಕಾಂಗ್ರೆಸ್ ಗೆ ಸಿದ್ದರಾಮಯ್ಯ(Siddharamayha) ಹುಲಿ ಇದ್ದಂತೆ ಡಿ.ಕೆ.ಶಿವಕುಮಾರ್(DK Shivkumar) ಸಿಂಹ ಇದ್ದಂತೆ ಇವರಿಬ್ಬರು ಇದ್ದ ಮೇಲೆ ಬೇರೆಯವರು ಏತಕ್ಕೆ, ಕಾಂಗ್ರೆಸ್ ನವರಿಗೆ ಓಟ್ ಹಾಕಿ ಎಂದು ಬೇಡಬೇಕಾ..?? ಕಾಂಗ್ರೆಸ್ ಗೆ ಮತ ಹಾಕುವುದು ನಮ್ಮ ಕರ್ತವ್ಯ, ಕಾಂಗ್ರೆಸ್ ಗೆ ಮತ ಹಾಕದಿದ್ದರೇ ತಂದೆ-ತಾಯಿಗೆ ಮೋಸ ಮಾಡಿದಂತೆ! ಹೀಗೆ ಹೇಳಿದವರು ಯಾವ ರಾಜಕೀಯ ವ್ಯಕ್ತಿ ಅಲ್ಲ. ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ, ಸದ್ಯ ರಾಜಕೀಯದತ್ತ ವಾಲುತ್ತಿರುವ ಸಾದು ಕೋಕಿಲ(Sadhu kokila) ಅವರು.

ಹೌದು, ಗುಂಡ್ಲುಪೇಟೆ(Gundlupete)ಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ನಟ‌ ಸಾಧು‌ಕೋಕಿಲ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ತಂದು ನಿಲ್ಲಿಸಿದೆ. ಹಾಗಾಗಿ ನಾವೆಲ್ಲರೂ ಕಾಂಗ್ರೆಸ್ ಗೆ ಓಟ್ ಹಾಕಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಅವರು ಈಗ ನಾವು ದೊಡ್ಡ-ದೊಡ್ಡ ಬಿಲ್ಡಿಂಗ್, ಐಷರಾಮಿ ಜೀವನ, ಫ್ಲೈ ಓವರ್ ನೋಡುತ್ತಿದ್ದೇವೆ, ಆದರೆ ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ದಿನ ನಮ್ಮನ್ನು ಕರೆತಂದಿದ್ದು ಕಾಂಗ್ರೆಸ್. ಅಂತಹ ಬದುಕು ಕೊಟ್ಟ ಕಾಂಗ್ರೆಸ್ ಗೆ ಮೋಸ ಮಾಡಿದರೇ ತಂದೆತಾಯಿಗೆ ಮೋಸ ಮಾಡಿದಂತೆ, ಕಾಂಗ್ರೆಸ್ಸಿಗೂ ಮತ್ತು ಜನರಿಗೂ ಇರುವ ಸಂಬಂಧ ಕೇವಲ ರಾಜಕೀಯದ್ದಲ್ಲ, ಹೃದಯದ ಸಂಬಂಧ ಎಂದರು.

ಅಲ್ಲದೆ ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ತಿಳಿಸಲಾಯಿತು. ಅಭ್ಯರ್ಥಿಯಾಗಿ ಎಚ್.ಎಂ.ಗಣೇಶ್ ಪ್ರಸಾದ್ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಗಣೇಶ್ ಪ್ರಸಾದ್(Ganesh Prasad) ಅವರ ಕೈಯನ್ನು ಈ ಬಾರಿ ಬಲಪಡಿಸಿ, ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿ ಎನ್ನುವ ಮೂಲಕ ಅಭ್ಯರ್ಥಿ ಹೆಸರನ್ನು ಫೈನಲ್ ಮಾಡಿದರು.

ಹಾಗೂ ಹಾಲಿ ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ನಿರಂಜನಕುಮಾರ್(Niranjan Kumar) ಯಾವುದೇ‌ ಶಾಶ್ವತ ಯೋಜನೆ ತಂದಿಲ್ಲ. ಒಂದು ಉದ್ಯೋಗ ನೀಡಿಲ್ಲ. ಆಕ್ಸಿಜನ್ ದುರಂತದಲ್ಲಿ ಯಾರಿಗೂ ಸಹಾಯ ಮಾಡಲಿಲ್ಲ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಗಣೇಶ್ ಪ್ರಸಾದ್ ಗೆಲ್ಲಿಸಬೇಕು ಎಂದು ಕರೆಕೊಟ್ಟರು.

You may also like

Leave a Comment