Home » Prakash Raj: ನಟ ಪ್ರಕಾಶ್‌ ರಾಜ್‌ರಿಂದ ಚಂದ್ರಯಾನದ ಕುರಿತು ವ್ಯಂಗ್ಯ ಟ್ವೀಟ್‌! ಚಂದ್ರನ ಮೇಲಿನ ಚಾಯ್‌ವಾಲಾ ಯಾರು?

Prakash Raj: ನಟ ಪ್ರಕಾಶ್‌ ರಾಜ್‌ರಿಂದ ಚಂದ್ರಯಾನದ ಕುರಿತು ವ್ಯಂಗ್ಯ ಟ್ವೀಟ್‌! ಚಂದ್ರನ ಮೇಲಿನ ಚಾಯ್‌ವಾಲಾ ಯಾರು?

0 comments
Prakash raj

Prakash Raj: ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರ ಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯು ಸುಧೀರ್ಘ ಪ್ರಯಾಣಕ್ಕೆ ಹೊರಟಿದ್ದು, ಇದೀಗ ಚಂದ್ರನ ಅಂಗಳದಲ್ಲಿದೆ. ಈ ಮಧ್ಯೆ ನಟ ಪ್ರಕಾಶ್‌ ರಾಜ್‌ (Prakash Raj) ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಹೇಳಿ ಚಿತ್ರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಭಾರೀ ವೈರಲ್ ಆಗಿದೆ. ಅಂದಹಾಗೆ ನಟ ಶೇರ್ ಮಾಡಿದ ಚಿತ್ರ ಯಾವುದು ಗೊತ್ತಾ?

ಈ ಹಿಂದೆ ಚಂದ್ರಯಾನ -3 (Chandrayana-3) ಸೆರೆಹಿಡಿದ ಚಂದ್ರನ ಮೊದಲ ನೋಟವನ್ನು ಬಿಡುಗಡೆ ಮಾಡಲಾಗಿದೆ. ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಒಂದು ದಿನದ ನಂತರ ಈ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ. ಈ ಕುರಿತ ವೀಡಿಯೋ ತುಣುಕನ್ನು ಚಂದ್ರಯಾನ್-3 ಮಿಷನ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಇದೀಗ ನಟ ಪ್ರಕಾಶ್ ರಾಜ್ ಶೇರ್ ಮಾಡಿರುವ ಫೋಟೋ ಭಾರೀ ವೈರಲ್ ಆಗಿದ್ದು, ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ.

ಪ್ರಕಾಶ್ ರಾಜ್, ಚಹಾ ಮಾಡುವ ವ್ಯಕ್ತಿಯೊಬ್ಬನ ವಿರೂಪಗೊಳಿಸಿದ ಫೋಟೋ ಹಂಚಿಕೊಂಡಿದ್ದು, ಅದಕ್ಕೆ ‘ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ’ ಎಂಬ ಕ್ಯಾಪ್ಷನ್ ಹಾಕಿದ್ದಾರೆ. ಈ ಪೋಸ್ಟ್ ಬಗ್ಗೆ ಸೋಷಿಯಲ್ಸ್ ಅಸಮಾಧಾನ ವ್ಯಕ್ತಪಡಿಸಿದ್ದು, ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ವಿವಿಧ ರೀತಿಯ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Crime News: ಮದುವೆ ಆಸೆ ತೋರಿಸಿ ಮೋಸ ಮಾಡಿದ 70ರ ವೃದ್ಧನ ವಿರುದ್ಧ 63ರ ಅಜ್ಜಿಯ ದೂರು!!!

 

You may also like