Home » Junior Upendra: ‘ಮಂಡ್ಯದ ಉಪೇಂದ್ರ’ ಗೆ ಕೂಡಾ ಗಾದೆ ಏಟು, ಜ್ಯೂನಿಯರ್ ಉಪೇಂದ್ರನಿಗೆ ಸಂಕಷ್ಟ ಶಿಫ್ಟ್ !

Junior Upendra: ‘ಮಂಡ್ಯದ ಉಪೇಂದ್ರ’ ಗೆ ಕೂಡಾ ಗಾದೆ ಏಟು, ಜ್ಯೂನಿಯರ್ ಉಪೇಂದ್ರನಿಗೆ ಸಂಕಷ್ಟ ಶಿಫ್ಟ್ !

0 comments
Junior Upendra

Junior Upendra: ಸ್ಯಾಂಡಲ್ ವುಡ್‌ ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ‘ಊರು ಅಂದ್ಮೇಲೆ ಹೋಲಗೇರಿ ಇರುತ್ತೆ’ ಎಂದು ಗಾದೆ ಮಾತೊಂದನ್ನು ಉಲ್ಲೇಖಿಸಿ ದಲಿತ ಸಮುದಾಯಕ್ಕೆ ಅವಮಾನ ಮಾಡಿ ಇದೀಗ ಜನರ ಆಕ್ರೋಶಕ್ಕೆ ಗುರಿಯಾಗಿದ್ದು ಅಲ್ಲದೇ, ಅವರ ಮೇಲೆ ಜನರು ದೂರು ನೀಡಿದ್ದಾರೆ. ಈ ಪರಿಣಾಮ ಉಪೇಂದ್ರ ಅವರು ತಲೆಮರೆಸಿಕೊಂಡಿದ್ದಾರೆ.

ವಿಶೇಷ ಏನಪ್ಪಾ ಅಂದ್ರೆ ನಟ ಉಪೇಂದ್ರ ಗಾದೆಮಾತು ಪ್ರಕರಣದಿಂದ ಮಂಡ್ಯದ ಜ್ಯೂನಿಯರ್ ಉಪೇಂದ್ರ (Junior Upendra) ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು, ಮಂಡ್ಯದ ಶ್ರೀರಂಗಪಟ್ಟಣದ ಪಾಲಹಳ್ಳಿ ಗ್ರಾಮದ ಮಹೇಶ್ ಎಂಬಾತ ಈ ಮೊದಲೇ ಜೂನಿಯರ್ ಉಪೇಂದ್ರ ಎಂದು ಖ್ಯಾತರಾಗಿದ್ದವರು. ನೋಡೋದಕ್ಕೆ ಅಪ್ಪಟ ಉಪೇಂದ್ರರಂತೆ ಕಾಣುವ ಮಹೇಶ್ ಅವರನ್ನು ಜ್ಯೂನಿಯರ್ ಉಪೇಂದ್ರ ಎಂದೇ ಕರೆಯಲಾಗುತ್ತದೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ಗಾದೆಮಾತಿನ ಪ್ರಕರಣದಿಂದ ಮಹೇಶ್ ಅವರು ಹೋದ ಕಡೆಯಲ್ಲಿ ಪ್ರಶ್ನೆಗಳ ಸುರಿಮಳೆ ಎದುರಾಗುತ್ತಿದೆ ಎಂದಿದ್ದಾರೆ.

ಅಲ್ಲದೇ ಮಹೇಶ್ ಕಾರು ಅಡ್ಡಗಟ್ಟಿ ಕೆಲವರು ನೀನೇನು ಉಪೇಂದ್ರನಾ? ಉಪೇಂದ್ರ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ, ಇನ್ನು ಕೆಲವರು ಮಹೇಶ್ ಕಾರು ಫಾಲೋ ಮಾಡಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ.

‘ಅಪರಿಚಿತ ವ್ಯಕ್ತಿಗಳು ಎರಡು ದಿನಗಳಿಂದ ಮೂರು ಬಾರಿ ನನ್ನ ಕಾರು ತಡೆದು ಪ್ರಶ್ನಿಸಿದ್ದಾರೆ. ಅವರನ್ನು ಎಲ್ಲಿಯೂ ನೋಡಿಲ್ಲ. ನನಗೆ ಭಯ ಶುರುವಾಗಿದೆ. ಮತ್ತೆ ಇಂತಹ ಪ್ರಸಂಗ ಎದುರಾದರೆ ಪೊಲೀಸರಿಗೆ ದೂರು ನೀಡುತ್ತೇನೆ’ ಎಂದು ಮಹೇಶ್‌ ತಿಳಿಸಿದ್ದಾರೆ.

ಹೀಗಾಗಿ ಮನೆಯಿಂದ ಹೊರ ಹೋದ್ರೆ ಇಲ್ಲಸಲ್ಲದ ಪ್ರಶ್ನೆ ಮಾಡ್ತಾರೆ ಎಂದು ಮಹೇಶ್ ಅವರು ಮನೆ ಬಿಟ್ಟು ಹೋಗದೇ ಮನೆಯಲ್ಲೇ ಉಳಿದಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪತ್ನಿಯ ಕಾರಣದಿಂದ ಅಜಿತ್ ರೈಗೆ ಸಿಗ್ತು ಜಾಮೀನು, ಇಲ್ಲಿದೆ ಉಳಿದ ವಿವರ !

You may also like