Samyuktha Hegde: ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸಂಯುಕ್ತಾ ಹೆಗ್ಡೆ(Samyuktha Hegde) ತಮಿಳು ಚಿತ್ರರಂಗದಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚು ವಿವಾದಗಳ ಮೂಲಕ ನಟಿ ಸಂಯುಕ್ತ ಹೆಗ್ಡೆ ಖ್ಯಾತಿ ಪಡೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ(Social Media)ಹೆಚ್ಚು ಆಕ್ಟೀವ್ ಆಗಿರುವ ನಟಿ ಸಂಯುಕ್ತ ಹೆಗ್ಡೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಳ್ಳುವ ಫೋಟೋ, ವಿಡಿಯೋ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.ಇದೀಗ ಸಂಯುಕ್ತಾ ಹೆಗ್ಡೆ ಹಂಚಿಕೊಂಡಿರುವ ವಿಡಿಯೋ ನೋಡಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಸಂಯುಕ್ತಾ ಡ್ರೆಸ್ ಸೆನ್ಸ್ ಕಂಡು ನೆಟ್ಟಿಜನ್ಸ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಾಡೆಲ್ ಆಗಿ ಗುರುತಿಸಿಕೊಂಡಿರುವ ಬಿಗ್ ಬಾಸ್ ಸೀಸನ್ 7ರ ಕಿಶನ್ ಬಿಳಗಲಿ ಡ್ಯಾನ್ಸರ್ ಆಗಿದ್ದು, ಕಿಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಹಿಂದಿಯ ಡ್ಯಾನ್ಸ್ ದಿವಾನೆ ಸೇರಿದಂತೆ ಅನೇಕ ರಿಯಾಲಿಟಿ ಶೋ ಮುಕ್ಕ ಕಿಶನ್ ಭಾಗಿಯಾಗಿ ಜನರ ಮನ ಸೆಳೆದಿದ್ದಾರೆ. ಕೂಡಾ ಗುರುತಿಸಿಕೊಂಡಿದ್ದಾರೆ. ಆಗ್ಗಾಗ್ಗೆ ಅಡುಗೆ ವಿಡಿಯೋಗಳನ್ನು ಕೂಡಾ ಕಿಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ, ಮಾಜಿ ಬಿಗ್ ಬಾಸ್ ಸ್ಪರ್ಧಿ, ಡ್ಯಾನ್ಸರ್ ಕಿಶೋರ್ ಬಿಳಿಗಲಿ ಜೊತೆ ಸಂಯುಕ್ತಾ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ನಟಿ ಧರಿಸಿರುವ ಬಟ್ಟೆ ಮಾತ್ರ ಭಾರೀ ಚರ್ಚೆಗೆ ಕಾರಣವಾಗಿದೆ.
” ಹಾಲಿವುಡ್ ಬಾಲಿವುಡ್ ತರ ಸಾಗುತ್ತಿದೆ ಈ ಸ್ಯಾಂಡಲ್ ವುಡ್ ಯುಗ ಇದಕ್ಕೆ ನಾನೇನು ಹೇಳಲಯ್ಯ, ಸಿನಿಮಾಗಳಲ್ಲದೆ ಮಂಗಗಳಾದ ನಾವು ಈ ತರ ರೀಲ್ಸ್ ಮಾಡ್ತೀವಯ್ಯ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದು, ನಿಮ್ಮ ಡ್ಯಾನ್ಸ್ ಪ್ರತಿಭೆ ತೋರಿಸಿ, ದೇಹವನ್ನಲ್ಲ ಎಂದು ಮತ್ತೊಬ್ಬರು ಬಿಟ್ಟಿ ಸಲಹೆ ನೀಡಿದ್ದಾರೆ.
“ಪ್ರತಿ ಬಾರಿಯೂ ಇಂಥದ್ದೇ ಡ್ರೆಸ್ ಧರಿಸುತ್ತೀರ. ಮೈ ತುಂಬಾ ಬಟ್ಟೆ ಹಾಕಿ ಡ್ಯಾನ್ಸ್ ಮಾಡಲು ಆಗುವುದಿಲ್ಲವೇ? ನಟಿಯಾಗಿ ನೀವು ಎಲ್ಲರಿಗೂ ಮಾದರಿಯಾಗಿರಬೇಕು. ಆದರೆ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿಲ್ಲ “ಎಂದು ನೆಟಿಜನ್ಸ್ ಕಾಮೆಂಟ್ ಮೂಲಕ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಜಂಗ್ಲಿ ಚಿತ್ರದಲ್ಲಿ ಸೋನು ನಿಗಮ್ ಹಾಡಿರುವ ನೀನೆಂದರೆ ನನ್ನೊಳಗೆ.. ಹಾಡಿಗೆ ಸಂಯುಕ್ತಾ ಹಾಗೂ ಕಿಶನ್ ರೀಲ್ಸ್ ಮಾಡಿದ್ದು, ಡ್ಯಾನ್ಸ್ ಚೆನ್ನಾಗಿದ್ದರು ಕೂಡ ಸಂಯುಕ್ತಾ ಧರಿಸಿರುವ ಬಟ್ಟೆ ಬಗ್ಗೆ ಮಾತ್ರ ಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಇದನ್ನು ಓದಿ: Pakistan Flag: ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಾಟ! ತಂದೆ ಮಗನ ಬಂಧನ
