Kannada movie: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಸಿನಿಮಾ ಥಿಯೇಟರ್ ಗಳಲ್ಲಿ ನ. 1ರಿಂದ ಒಂದು ವಾರಗಳ ಕಾಲ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಯ ಎಲ್ಲಾ ಖಾಯಂ, ಅರೆ ಖಾಯಂ, ತಾತ್ಕಾಲಿಕ ಚಿತ್ರಮಂದಿರಗಳಲ್ಲಿ ಮತ್ತು ವಿಡೀಯೋ ಚಿತ್ರಮಂದಿರಗಳಿಗೆ ಅನ್ವಯ ಆಗುವಂತೆ, ಕನ್ನಡ ಚಲನಚಿತ್ರಗಳನ್ನು (Kannada movie) ಜಿಲ್ಲೆಯ ಎಲ್ಲಾ ಚಲನಚಿತ್ರ ಮಂದಿರಗಳು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ತಿಳಿಸಿದ್ದಾರೆ.
ಒಂದು ವೇಳೆ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸದೇ ಇದ್ದಲ್ಲಿ ಚಲನಚಿತ್ರ ಮಂದಿರಗಳ ಪರವಾನಿಗೆಯನ್ನು ನವೀಕರಿಸುವುದಿಲ್ಲ. ಅ. 31 ಮತ್ತು ನ. 01ರಂದು ಚಿತ್ರಮಂದಿರಗಳ ಮೇಲೆ ಕಡ್ಡಾಯವಾಗಿ ದೀಪಾಂಲಕಾರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
