Shah Rukh Khan Viral Video: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಪಠಾಣ್ (pathaan) ಸಕ್ಸಸ್ ಖುಷಿಯಲ್ಲಿದ್ದಾರೆ. ಸಾಲು ಸಾಲು ಸೋಲಿನ ನಂತರ ಶಾರುಖ್ ಅವರಿಗೆ ಪಠಾಣ್ ಮೂಲಕ ದೊಡ್ಡ ಸಕ್ಸಸ್ ಸಿಕ್ಕಿದೆ. ಪಠಾಣ್ ಸಿನಿಮಾ (Pathaan Movie) ಬಾಲಿವುಡ್ ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡಿದೆ. ನಟ ಇದೀಗ ಮತ್ತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಶಾರುಖ್ ಖಾನ್ ಇತ್ತೀಚೆಗಷ್ಟೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಆದರೆ, ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಶಾರುಖ್ ಖಾನ್ ದೂರ ತಳ್ಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ (Shah Rukh Khan Viral Video) ಆಗಿದ್ದು, ಶಾರುಖ್ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
‘ಡಂಕಿ’ ಸಿನಿಮಾದ ಶೂಟಿಂಗ್ ಸಲುವಾಗಿ ಕಾಶ್ಮೀರಕ್ಕೆ ತೆರಳಿದ್ದ ಶಾರುಖ್ ಖಾನ್ ಅವರು ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ಮುಂಬೈಗೆ ವಾಪಸ್ ಆಗಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.
ಇದರಿಂದ ಸಿಟ್ಟುಗೊಂಡ ಶಾರುಖ್ ಅಭಿಮಾನಿಯೊಬ್ಬರನ್ನು ದೂರ ತಳ್ಳಿದ್ದಾರೆ. ಸದ್ಯ ನಟನ ಈ ವರ್ತನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ, ಪರ-ವಿರೋಧ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು “ಸಿನಿಮಾ ಗೆಲ್ಲೋವರೆಗೂ ಮಾತ್ರ ಅಭಿಮಾನಿಗಳು ಬೇಕು ಸೆಲ್ಫಿ ಕೇಳಿದ್ದಕ್ಕೆ ಹೀಗ್ ಮಾಡಿದ್ದು ಸರಿನಾ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ನೆಚ್ಚಿನ ನಟನ ಪರವಹಿಸಿದ್ದಾರೆ.
ಶಾರುಖ್ ಏರ್ಪೋರ್ಟ್‌ನಿಂದ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಹೊರ ಬಂದಿದ್ದು, ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಶಾರುಖ್ ಖಾನ್ ‘ಡಂಕಿ’ ಮತ್ತು ‘ಜವಾನ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಡಂಕಿ’ ಚಿತ್ರ ರಾಜ್ಕುಮಾರ್ ಹಿರಾನಿ ಅವರು ನಿರ್ದೇಶನದಲ್ಲಿ ಮೂಡಿಬರಲಿದೆ. ‘ಜವಾನ್’ ಸಿನಿಮಾ ಅಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: Weekend with Ramesh : ಈ ಬಾರಿ ಸಾಧಕರ ಕುರ್ಚಿಯನ್ನು ಯಾರು ಅಲಂಕರಿಸಲಿದ್ದಾರೆ? ಇವರೇ ನೋಡಿ!
