Home » BBK11: ಈ ವಾರ ದೊಡ್ಮನೆಯಿಂದ ಹೊರ ಹೋದ ಪ್ರಬಲ ಸ್ಪರ್ಧಿ ಇವರೇ

BBK11: ಈ ವಾರ ದೊಡ್ಮನೆಯಿಂದ ಹೊರ ಹೋದ ಪ್ರಬಲ ಸ್ಪರ್ಧಿ ಇವರೇ

0 comments

BBK11: ದೊಡ್ಮನೆಯ ಆಟ ರೋಚಕ ಘಟಕ್ಕೆ ತಲುಪಿದ್ದು, ಈ ವಾರ ಎಲಿಮಿನೇಟ್‌ ಆಗುವ ಸ್ಪರ್ಧಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು, ತನ್ನ ಮಾತಿನಲ್ಲೇ ಎಲ್ಲರನ್ನೂ ಗಪ್‌ಚುಪ್‌ ಎಂದು ಮಾಡುತ್ತಿದ್ದ ಚೈತ್ರಾ ಕುಂದಾಪುರ ಅವರು ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಹೋಗಿದ್ದಾರೆ ಎನ್ನಲಾಗಿದೆ.

ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಆಟ ಆಡಿ ಫಿನಾಲೆ ವಾರಕ್ಕೆ ಹನುಮಂತು ಅವರು ನೇರವಾಗಿ ಪ್ರವೇಶ ಪಡೆದಿದ್ದಾರೆ. ಹಾಗೂ ಮನೆಯ ಕೊನೆಯ ಕ್ಯಾಪ್ಟನ್‌ ಕೂಡಾ ಆಗಿದ್ದಾರೆ.

ಭವ್ಯಾ ಅವರು ಈ ವಾರ ಆಡಿದ ಆಟದಲ್ಲಿ ತಮ್ಮ ಅಗ್ರೆಷನ್‌ ತೋರಿಸಿ ಕೆಲವೊಂದು ತಪ್ಪನ್ನು ಮಾಡಿದ್ದರೂ, ಸುದೀಪ್‌ ಅದನ್ನು ವೀಡಿಯೋ ಮೂಲಕ ತೋರಿಸಿದರೂ ಜನ ಕೈ ಬಿಡದೇ ಅತ್ಯಂತ ಹೆಚ್ಚಿನ ವೋಟ್‌ ನೀಡಿ ಭವ್ಯಾರನ್ನು ಸೇಫ್‌ ಮಾಡಿದ್ದಾರೆ.

ಚೈತ್ರಾ ಕುಂದಾಪುರ ಅವರ ಬಿಗ್‌ಬಾಸ್‌ ಮನೆಯಲ್ಲಿ ನೂರಕ್ಕೂ ಹೆಚ್ಚು ದಿನ ಇದ್ದು ತಮ್ಮ ಆಟದಲ್ಲಿ ಏಳು ಬೀಳು ಕಂಡಿದ್ದು, ಕೆಲವೊಂದು ವಿವಾದದಲ್ಲಿ ಸಿಲುಕಿಕೊಂಡರೂ ಇದೀಗ ಮನೆಯಿಂದ ಹೊರ ಬಂದಿದ್ದಾರೆ.

ತನ್ನ ಮನೆಯ ಮಂದಿ ಬಂದು ಹೋದಮೇಲೆ ಆಟದಲ್ಲಿ ಬದಲಾವಣೆ ಮಾಡಿಕೊಂಡ ಚೈತ್ರಾ ಕುಂದಾಪುರ ಅವರ ಈ ರೀತಿಯ ಆಟ ಯಾಕೋ ಲೇಟಾಯಿತು ಎಂದೆನಿಸಿ ವೀಕ್ಷಕರು ದೊಡ್ಮನೆಯ ಬಾಗಿಲನ್ನು ತೆಗೆದಿದ್ದಾರೆ. ಕಳಪೆ ಪಟ್ಟ ಪಡೆದು ಹಲವು ಬಾರಿ ಜೈಲಿಗೆ ಹೋದ ಚೈತ್ರಾ ಈ ಬಾರಿ ಮನೆಯ ಎಲ್ಲಾ ಮಂದಿ ಉತ್ತಮ ಎಂದು ಪಟ್ಟ ನೀಡಿ ಇಮೋಷನಲ್‌ ಕೂಡಾ ಮಾಡಿಸಿದ್ದರು.

ಕಳೆದ ಒಂದು ವಾರ ಪ್ರ್ಯಾಂಕ್‌ ಎಲಿಮಿನೇಷನ್‌ ಅನುಭವವನ್ನು ಪಡೆದಿದ್ದ ಚೈತ್ರಾ ಅವರು ಈ ಬಾರಿ ನೇರವಾಗಿ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಿದ್ದಾರೆ.

You may also like