ಮುಂಬಯಿ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಅವರ ವಿರುದ್ದ 60 ಕೋಟಿ ರೂ. ವಂಚಿಸಿದ ಪ್ರಕರಣ ದಾಖಲಾಗಿದೆ. ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ದಂಪತಿಗಳಿಂದ ವಂಚಿತನಾಗಿದ್ದೇನೆ ಎಂದು ಉದ್ಯಮಿ ದೀಪಕ್ ಕೊಠಾರಿ ನೀಡಿದ ದೂರಿನ ಆಧಾರದ ಮೇಲೆ ಮುಂಬಯಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಎಫ್‌ಐಆರ್ ದಾಖಲಿಸಿದೆ.
ದೂರುದಾರರು ಕಾನೂನಿನ ಅಡಿಯಲ್ಲಿ ಆಪಾದಿತ ಅಪರಾಧದಲ್ಲಿ ಭಾಗಿಯಾಗಿರುವ ಹಣವನ್ನು ಗುರುತಿ ಸಲು, ಪತ್ತೆಹಚ್ಚಲು ಮತ್ತು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯವನ್ನು ವಿನಂತಿಸುವ ಸಾಧ್ಯತೆ ಹೆಚ್ಚಿದೆ. ಹಾಗಾದಲ್ಲಿ ಹಣ ಅಕ್ರಮ ವರ್ಗಾವಣೆ ಕಾಯಿದೆ ನಿಬಂಧನೆಗಳ ಪ್ರಕಾರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳು ವಂತೆಯೂ ಕೋರಲು ಸಿದ್ಧತೆ ನಡೆದಿದೆ.
ದಂಪತಿ 2015 ಮತ್ತು 2023 ರ ನಡುವೆ ಬೆಸ್ಟ್ ಡೀಲ್ ಟಿವಿ ಪೈ. ಹೂಡಿಕೆ ಮಾಡಲು ಪ್ರೇರೇಪಿಸಿದರು. ಆದರೆ ಆ ಲಿಮಿಟೆಡ್‌ನಲ್ಲಿ 60 ಕೋಟಿ ರೂ.ಳನ್ನು ಮೊತ್ತವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂದು ಕೊಠಾರಿ ಆರೋಪಿಸಿದ್ದಾರೆ. ತನಿಖೆಯ ಸಮಯದಲ್ಲಿ, 60 ಕೋಟಿ ರೂ.ಗಳಲ್ಲಿ ಒಂದು ಭಾಗವನ್ನು ನಟಿಯರಾದ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಅವರಿಗೆ ಶುಲ್ಕವಾಗಿ ಪಾವತಿಸಲಾಗಿದೆ ಎಂದು ಕುಂದ್ರಾ ಹೇಳಿಕೊಂಡಿದ್ದಾರೆ
