Home » Shilpa Shetty: ಕರಾವಳಿ ಆಚರಣೆ ನನ್ನ ಮಕ್ಕಳಿಗೂ ಹೇಳಿಕೊಡುತ್ತೇನೆ- ಶಿಲ್ಪಾ ಶೆಟ್ಟಿ

Shilpa Shetty: ಕರಾವಳಿ ಆಚರಣೆ ನನ್ನ ಮಕ್ಕಳಿಗೂ ಹೇಳಿಕೊಡುತ್ತೇನೆ- ಶಿಲ್ಪಾ ಶೆಟ್ಟಿ

0 comments
Shilpa Shetty

Shilpa Shetty: ಕರಾವಳಿಯ ಅದೆಷ್ಟೋ ಪ್ರತಿಭೆಗಳು ಸಿನಿಮಾ ರಂಗದಲ್ಲಿ ದೊಡ್ದ ಮಟ್ಟದ ಯಶಸ್ಸು ಗಳಿಸಿದ್ದಾರೆ. ಅವರಲ್ಲಿ ತುಳುನಾಡಿನ ಕುವರಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಬಾಲಿವುಡ್ ದುನಿಯಾದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಶಿಲ್ಪಾ ಶೆಟ್ಟಿ (Shilpa Shetty) ಕನ್ನಡದಲ್ಲಿಯೂ ಬಣ್ಣ ಹಚ್ಚಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಮ್ಮೆ ಯಶಸ್ಸು ಸಿಕ್ಕ ಬಳಿಕ ತವರಿನ ಬಗ್ಗೆ ತಾತ್ಸಾರ ನಡೆ ತೋರುವ ಮಂದಿಯ ನಡುವೆ ಶಿಲ್ಪಾ ಶೆಟ್ಟಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಪ್ರತೀ ವರ್ಷ ತನ್ನ . ದೈವ ದೇವರ ಕಾರ್ಯದಲ್ಲಿ ತಪ್ಪದೇ ಭಾಗಿಯಾಗುವುದು ಮಾತ್ರವಲ್ಲದೆ ತುಳುನಾಡಿನ ಸಂಸ್ಕೃತಿಯ ಬಗ್ಗೆ ಮಕ್ಕಳಿಗೂ ಕೂಡ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ಪ್ರಸಿದ್ದ ಧಾರ್ಮಿಕ ನಂಬಿಕೆಯುಳ್ಳ ಕಟೀಲು ಶ್ರೀ ದುರ್ಗಾಪರಮೇಶ್ವರಿ( Kateel Durgaaparameshwari Temple)ದೇಗುಲಕ್ಕೆ ಶನಿವಾರ ಏಪ್ರಿಲ್ 22ರಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಭಕ್ತೆಯಾಗಿರುವ ನಟಿ ಶಿಲ್ಪಾ ಶೆಟ್ಟಿಯವರು ಆಗಾಗ ದೇಗುಲಕ್ಕೆ ಬಂದು ದೇವಿಯ ದರ್ಶನ ಪಡೆಯುತ್ತಿರುತ್ತಾರೆ. ಕಟೀಲು ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್‌ ಕುಂದ್ರ, ಮಕ್ಕಳಾ ವಿಯಾನ್ ಮತ್ತು ಸಮಿಷಾ, ಸಹೋದರಿ ನಟಿ ಶಮಿತಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬದ ಸದಸ್ಯರ ಜೊತೆಗೆ ದೇವರ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ ಅವರಿಗೆ ದೇವಸ್ಥಾನ ಆಡಳಿತ ಮಂಡಳಿಯು ದೇವರ ಶೇಷ ವಸ್ತ್ರ ನೀಡಿ ಗೌರವ ಸಲ್ಲಿಸಿದೆ. ಬಾಲಿವುಡ್ ಮಾತ್ರವಲ್ಲ ಕನ್ನಡ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶಿಲ್ಪಾ ಶೆಟ್ಟಿ ತಮ್ಮ ಊರಿನ ಜತೆಗಿನ ಬಾಂಧವ್ಯವನ್ನು ಹಾಗೇ ಉಳಿಸಿಕೊಂಡಿರುವುದು ವಿಶೇಷ.

 

2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರ ಜೊತೆಗೆ ಸಪ್ತಪದಿ ತುಳಿದ ಶಿಲ್ಪಾ ಶೆಟ್ಟಿಯವರಿಗೆ ವಿಹಾನ್‌ ಹಾಗೂ ಸಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ದೇವಿಯ ದರ್ಶನ ಪಡೆದ ಬಳಿಕ ಪ್ರಸಾದ ಸ್ವೀಕರಿಸಿದ ಶಿಲ್ಪಾ ಶೆಟ್ಟಿಯವರು ಉತ್ತರ ಕನ್ನಡದ ಹೆಮ್ಮೆಯ ನೃತ್ಯ ಕಲೆ ಯಕ್ಷಗಾನವನ್ನು ವೀಕ್ಷಿಸಿ ತಮ್ಮ ಮಕ್ಕಳಿಗೆ ಸಂಸ್ಕೃತಿ ಆಚರಣೆಯ ಬಗ್ಗೆ ಸಣ್ಣ ಪರಿಚಯ ಮಾಡಿಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕೆಲ ಕಾಲ ಯಕ್ಷಗಾನ ವೀಕ್ಷಿಸಿದ ಶಿಲ್ಪಾ ಶೆಟ್ಟಿ ಅವರು ಕಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೇಗುಲದ ನಾಗಸ್ವರ ವಾದಕರಾದ ಲಿಂಗಪ್ಪ ಸೇರಿಗಾರರ ವಾದ್ಯವಾದನವನ್ನು ಆಲಿಸಿದ ಶಿಲ್ಪಾ ಶೆಟ್ಟಿ ಮತ್ತು ಶಮಿತಾ ಶೆಟ್ಟಿ ಅವರು ಕಟೀಲು ರಥಬೀದಿಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ಕೆಲಹೊತ್ತು ವೀಕ್ಷಿಸಿದ್ದು ಮಾತ್ರವಲ್ಲ, ವೇಷಗಳ ಫೋಟೋ ತೆಗೆದು ಖುಷಿ ಪಟ್ಟಿದ್ದಾರೆ. ಅಷ್ಟೆ ಅಲ್ಲದೇ, ಮಕ್ಕಳಿಗೂ ಇಲ್ಲಿನ ಆಚರಣೆಯ ಬಗ್ಗೆ ತಿಳಿಸಿ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

You may also like

Leave a Comment