Actor Prabhas: ಹೆಚ್ಚು ಲೇಡಿ ಫ್ಯಾನ್ ಫಾಲೋಯಿಂಗ್ ಹೊಂದಿರುವ ಡಾರ್ಲಿಂಗ್ ಪ್ರಭಾಸ್ (Actor Prabhas) ಸದ್ಯ ಸಲಾರ್ ಚಿತ್ರದ ಮೂಲಕ ಅಬ್ಬರಿಸಲು ರೆಡಿಯಾಗಿದ್ದಾರೆ. ಅಭಿಮಾನಿಗಳು ಸಹ ಈ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಹುಡುಗಿಯೋರ್ವಳು ಏಕಾಏಕಿ ಬಂದು ನಟ ಪ್ರಭಾಸ್ ಕಪಾಳಕ್ಕೆ ಹೊಡೆದು ಓಡಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ ಮಹಿಳಾ ಅಭಿಮಾನಿ ಪ್ರಭಾಸ್ (Prabhas) ಅವರ ಕೆನ್ನೆಗೆ ಹೊಡೆದು ಓಡಿ ಹೋಗಿರುವುದು ನೋಡಬಹುದು. ಪ್ರಭಾಸ್ ಆಗತಾನೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ನೋಡಿದ ಯುವತಿ ಎಗ್ಸೈಟ್ ಆಗಿ ಪ್ರಭಾಸ್ ಜೊತೆ ಫೋಟೋ ಮತ್ತು ಸೆಲ್ಫಿ ತೆಗೆದುಕೊಂಡಿದ್ದಾರೆ. ನಂತರ ಪ್ರಭಾಸ್ ಕೆನ್ನೆಗೆ ಬಾರಿಸಿ ಓಡಿ ಹೋಗಿದ್ದಾರೆ. ಇದೆಲ್ಲವನ್ನೂ ಅವರು ಮಾಡಿದ್ದು ಪ್ರಭಾಸ್ ಮೇಲಿನ ಪ್ರೀತಿಗಾಗಿ ಅಷ್ಟೇ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಈ ಘಟನೆ 2019ರಲ್ಲಿ ನಡೆದಿರುವುದು. ಇದೀಗ ಪ್ರಭಾಸ್ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಅಭಿಮಾನಿಗಳು ವಿಡಿಯೋಗೆ ವಿವಿಧ ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಆ ಹುಡುಗಿ ಲಕ್ಕಿ ಎಂದು ಅನೇಕರು ಕರೆದಿದ್ದಾರೆ. ಪ್ರಭಾಸ್ ಅವರು ಎಷ್ಟು ಕೂಲ್ ಎಂದು ಹಲವರು ಹೊಗಳಿದ್ದಾರೆ.
