Home » Sravanthi Chokarapu: ಕೆಳಗಡೆ ಏನೂ ಹಾಕದೆ ರಸ್ತೆಯಲ್ಲಿ ಸುತ್ತಾಡಿದ ನಿರೂಪಕಿಗೆ ನೆಟ್ಟಿಗರಿಂದ ಕ್ಲಾಸ್!

Sravanthi Chokarapu: ಕೆಳಗಡೆ ಏನೂ ಹಾಕದೆ ರಸ್ತೆಯಲ್ಲಿ ಸುತ್ತಾಡಿದ ನಿರೂಪಕಿಗೆ ನೆಟ್ಟಿಗರಿಂದ ಕ್ಲಾಸ್!

by ಹೊಸಕನ್ನಡ
1 comment
Sravanthi Chokarapu

Sravanthi Chokarapu :ಜನ ಸಾಮಾನ್ಯರಲ್ಲಿ ಹೆಚ್ಚಿನವರು ಯಾರನ್ನು ಗಮನಿಸುತ್ತಾರೋ ಗೊತ್ತಿಲ್ಲ ಆದರೆ ಈ ಸೆಲೆಬ್ರಿಟಿಗಳನ್ನು ಇಂಚಿಂಚು ಬಿಡದೆ ಗಮನಿಸುತ್ತಿರುತ್ತಾರೆ. ಅವರ ಇಷ್ಟದ ಬಣ್ಣ, ತಿಂಡಿ, ಊಟ, ಅವರು ಎಲ್ಲಿ ಹೋದ್ರು, ಯಾರೊಂದಿಗೆ ಹೋದ್ರು, ಸೋಷಿಯಲ್ ಮೀಡಿಯಾಗಳಲ್ಲಿ ಏನು ಪೋಸ್ಟ್ ಹಾಕಿದ್ದಾರೆ ಎಂದು ಒಂದೊಂದನ್ನು ಕೂಲಂಕುಷವಾಗಿ ನೋಡುತ್ತಾರೆ. ಅದರಲ್ಲೂ ಮುಖ್ಯವಾಗಿ ಅವರು ತೊಡುವ ಉಡುಗೆ ತೊಡುಗೆಯ ಮೇಲೆಯೇ ಕಣ್ಣು. ಚೂರೇನಾದರೂ ಯಾಮಾರಿ ಸ್ವಲ್ಪ ಹೆಚ್ಚಾಗೆ ಮೈ ತೋರುವ ಬಟ್ಟೆ ಹಾಕಿದರಂತೂ ಟ್ರೋಲ್ ಮಾಡಿ ಕಾಲೆಳೆದು ಬಿಡುತ್ತಾರೆ. ಅಂತೆಯೇ ಇದೀಗ ನಿರೂಪಕಿ ಶ್ರವಂತಿ ಚೋಕಾರವು (Sravanthi Chokarapu) ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತೆಲುಗು ಇಂಡಸ್ಟ್ರಿಯ ಖ್ಯಾತ ನಿರೂಪಕಿ, ಹಲವಾಲು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಮೂಲಕವೇ ಜನರ ಗಮನ ಸೆಳೆದಿರುವ ಶ್ರವಂತಿ ಚೋಕಾರವು (Sravanthi Chokarapu) ಇದೀಗ ತಾವು ಧರಿಸುವ ಬಟ್ಟೆಯಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ಪ್ಯಾಂಟ್ ಧರಿಸದೇ ರಸ್ತೆಗಳಿದ ಆ್ಯಂಕರ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂದಹಾಗೆ ನಿರೂಪಕಿ ಶ್ರವಂತಿ ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಮೇಲೊಂದು ಶರ್ಟ್ ರೀತಿಯ ಬಟ್ಟೆ ಹಾಕಿದ್ದು ಅದು ಅವರು ಹಾಕಿರೋ ಚಡ್ಡಿಯನ್ನು ಮುಚ್ಚಿದೆ. ಅದು ಅಷ್ಟು ಉದ್ದ ಇರೋದ್ರಿಂದ ಕೆಳಗಡೆ ಶ್ರವಂತಿ ಏನೂ ಹಾಕಿಲ್ಲವೇನೋ ಎಂಬಂತೆ ತೋರುತ್ತಿದ್ದು, ಇದನ್ನೇ ತಮಾಷೆ ಆಗಿ ತೆಗೆದುಕೊಂಡ ನೆಟ್ಟಿಗರು ಆಕೆಯ ಕಾಲೆಳಿದಿದ್ದಾರೆ.

ಅಂದಹಾಗೆ ಯೂಟ್ಯೂಬ್ ಚಾನೆಲ್‌ಗೆ ನಿರೂಪಕಿಯಾಗಿದ್ದ ಶ್ರವಂತಿ, ಮುಂದೆ ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣಗೆ (Rashmika Mandanna) ಸಂದರ್ಶನ ಮಾಡುವ ಮೂಲಕ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಬಳಿಕ ತೆಲುಗು ಬಿಗ್ ಬಾಸ್ ಒಟಿಟಿಗೆ ಸ್ಪರ್ಧಿಯಾಗಿ ಆಫರ್ ಪಡೆಯುತ್ತಾರೆ.

ಸಮಂತಾ ನಟನೆಯ ‘ಶಾಕುಂತಲಂ’ (Shakuntalam) ಸೇರಿದಂತೆ ಹಲವು ಸಿನಿಮಾ ಸಂಬಧಿಸಿದ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾರೆ. ಸದ್ಯ ಶ್ರವಂತಿ ತಮ್ಮ ಡ್ರೆಸ್ ಸೆನ್ಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪ್ಯಾಂಟ್ ಧರಿಸದೇ ರಸ್ತೆ ಬಂದಿದ್ದಕ್ಕೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

You may also like

Leave a Comment