Home » Shruthi Haasan and Shantanu: ಪ್ರಿಯತಮನ ಜೊತೆಗಿನ ‘ಆ ತರದ’ ಬೆಡ್ ರೂಂ ಫೋಟೋ ಶೇರ್ ಮಾಡಿದ ಶೃತಿ ಹಾಸನ್!

Shruthi Haasan and Shantanu: ಪ್ರಿಯತಮನ ಜೊತೆಗಿನ ‘ಆ ತರದ’ ಬೆಡ್ ರೂಂ ಫೋಟೋ ಶೇರ್ ಮಾಡಿದ ಶೃತಿ ಹಾಸನ್!

by ಹೊಸಕನ್ನಡ
0 comments
Shruthi Haasan and Shantanu

Shruthi Haasan and Shantanu: ಭಾರತೀಯ ಚಿತ್ರರಂಗದ ಸಕಲಕಲಾ ವಲ್ಲಭ ಎಂದೇ ಖ್ಯಾತರಾದ ಕಮಲ್ ಹಾಸನ್(Kamal Haasan) ಪುತ್ರಿ ಶ್ರುತಿ ಹಾಸನ್(Shruthi Haasan) ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್(Prashanth Neel) ಸಾರಥ್ಯದಲ್ಲಿ ಮೂಡಿ ಬರ್ತಿರುವ ಸಲಾರ್(Salar) ಸಿನಿಮಾದಲ್ಲಿ ಬ್ಯುಸಿಯಾಗಿರುವ ಶ್ರುತಿ ಹಾಸನ್ ಇದೀಗ ಬಾಯ್ ಫ್ರೆಂಡ್ ಜೊತೆಗಿನ (Shruthi Haasan and Shantanu) ಖಾಸಗೀ ಫೋಟೋವೊಂದನ್ನು ಶೇರ್ ಮಾಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ಶ್ರುತಿ ಹಾಸನ್ (Shruti Haasan) ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಖಾಸಗಿ ಕ್ಷಣದ ಆ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ, ಇಂಥ ಫೋಟೊ ಹಂಚಿಕೊಳ್ಳಲು ಕಾರಣವೇನೆಂದು ನೆಟ್ಟಿಗರೂ ಪ್ರಶ್ನೆಮಾಡುತ್ತಿದ್ದಾರೆ.

ಅಂದಹಾಗೆ ಶ್ರುತಿ ಹಾಸನ್ ಹಲವು ವರ್ಷಗಳಿಂದ ಶಾಂತನು (Shantanu) ಜೊತೆ ರಿಲೇಷನ್ ಶಿಪ್ ನಲ್ಲಿ (Relationship) ಇದ್ದಾರೆ. ಮುಂಬೈನಲ್ಲಿ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ. ಶ್ರುತಿ, ಆಗಾಗ ಶಾಂತನು ಜೊತೆ ಡೇಟಿಂಗ್ ಮಾಡುತ್ತಿರುತ್ತಾ, ಇಬ್ಬರೂ ಒಟ್ಟಿಗೆ ಇರೋ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ, ಈ ಬಾರಿ ಮಾತ್ರ ಬೆಡ್ ರೂಮ್ ನಲ್ಲಿರುವ ಖಾಸಗೀ ಫೋಟೋ ಹಂಚಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ.

ಶ್ರುತಿ ಶೇರ್ ಮಾಡಿರೋ ಫೋಟೋದಲ್ಲಿ ಇಬ್ಬರೂ ಅರೆನಗ್ನರಂತೆ ಕಾಣುತ್ತಿದ್ದಾರೆ. ಅರೆಬೆತ್ತಲೆಯಾಗಿರೋ ಶ್ರುತಿ ಅವರನ್ನು ಶಾಂತನು ಹಿಂದಿನಿಂದ ತಬ್ಬಿಕೊಂಡು ಇಬ್ಬರೂ ಫೋಟೋಗೆ ಫೋಸ್ ನೀಡಿದ್ದಾರೆ. ಇದರೊಂದಿಗೆ ‘ಶಾಂತನು, ನೀನು ನನ್ನ ಲವ್, ನೀನು ನನ್ನ ವಜ್ರ, ನೀನು ನಕ್ಷತ್ರ, ಬೆಳಕು ಎಂತಹ ಸ್ಥಿತಿಯಲ್ಲೂ ನಾನು ನಿನ್ನೊಂದಿಗೆ ಇರುತ್ತೇನೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಇನ್ನು ಶಾಂತನು ಮತ್ತು ಶ್ರುತಿ ಹಾಸನ್ ಹಲವು ವರ್ಷಗಳಿಂದ ಸಹಜೀವನ ನಡೆಸುತ್ತಿರುವುದು ಗುಟ್ಟಿನ ಸಂಗತಿ ಏನೂ ಅಲ್ಲ. ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ, ಅನೇಕ ಪ್ರವಾಸಗಳನ್ನು ಒಟ್ಟಿಗೆ ಮಾಡಿದ್ದಾರೆ. ಹಾಗಾಗಿ ಈ ಫೋಟೋಗಳು ಸಹಜ ಎನ್ನುವ ಕಾಮೆಂಟ್ ಕೂಡ ಹರಿದಾಡುತ್ತಿವೆ. ಜನರು ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದಾರೆ.

You may also like

Leave a Comment