Shubman gill: ಟೀಂ ಇಂಡಿಯಾ(Team india)ಹಾಗೂ ಗುಜರಾತ್ ಟೈಟಾನ್ಸ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್(Shubman gill) ಕ್ರಿಕೆಟ್ ಆಟದಿಂದ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ಧಿಯಲ್ಲಿರೋ ಟೀಮ್ ಇಂಡಿಯಾ ಆಟಗಾರ. ಅದರಲ್ಲೂ ಲವ್ ಮ್ಯಾಟರಂತೂ(Love matter) ಶುಭ್ಮನ್ ವಿಚಾರದಲ್ಲಿ ಹಾಟ್ ಟಾಪಿಕ್ ಆಗಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್(Sachin thendulkhar) ಪುತ್ರಿ ಸಾರಾ ತೆಂಡುಲ್ಕರ್(Sara thendulkar) ಜತೆಯಲ್ಲದೆ, ಬಾಲಿವುಡ್ ನಟಿ ಸಾರಾ ಅಲಿ ಖಾನ್(Sara Ali khan) ಜತೆಗೂ ಶುಭ್‌ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವಂತಹ ಮಾತುಗಳು ಇತ್ತೀಚೆಗೆ ಸಖತ್ ಸುದ್ಧಿ ಮಾಡಿದ್ವು. ಆದರೆ ಇದೆಲ್ಲದರ ನಡುವೆ ಸೋಷಿಯಲ್ ಮೀಡಿಯಾ ಇನ್‌ಪ್ಲ್ಯೂಯೆನ್ಸರ್ ನಿಹಾರಿಕಾ ಎನ್‌ಎಂ ಜತೆ ಶುಭ್‌ಮನ್ ಗಿಲ್ ರೊಮ್ಯಾಂಟಿಕ್ ಡೇಟ್ ಮಾಡಿದ್ದಾರೆ ಅನ್ನೋ ವಿಚಾರ ಹರಿದಾಡುತ್ತಿದೆ.
ಹೌದು, ಇತ್ತೀಚೆಗಷ್ಟೇ ಅಚ್ಚರಿಯ ಬೆಳವಣಿಗೆ ಎಂಬಂತೆ ಸಾರಾ ಅಲಿ ಖಾನ್ ಹಾಗೂ ಶುಭ್‌ಮನ್ ಗಿಲ್ ಒಬ್ಬರನ್ನೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದರು. ಶುಭ್ಮನ್ ಗಿಲ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ಅನಿಮೇಟೆಡ್ ಸಿನಿಮಾವೊಂದಕ್ಕೆ ಧ್ವನಿ ನೀಡಿದ್ದಾರೆ. ಈ ಬಗ್ಗೆ ಸ್ವತಃ 23 ವರ್ಷದ ಗಿಲ್ ಸಾಮಾಜಿಕ ತಾಣಗಳಲ್ಲಿ ಮಾಹಿತಿ ನೀಡಿದ್ದು, ‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್ ವರ್ಸ್’ ಸಿನಿಮಾಕ್ಕೆ ಧ್ವನಿ ನೀಡಿದ್ದೇನೆ ಎಂದಿದ್ದರು.
ಇದೀಗ ಭಾರತೀಯ ಅವತರಣಿಕೆಯ ‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್ ವರ್ಸ್’ ಸಿನಿಮಾ ಪ್ರೊಮೋಷನ್‌ನಲ್ಲಿ ಸೋಷಿಯಲ್ ಮೀಡಿಯಾ ಇನ್‌ಪ್ಲ್ಯೂಯೆನ್ಸರ್ ನಿಹಾರಿಕಾ(Niharika) ಎನ್‌ಎಂ ಜತೆ ಶುಭ್‌ಮನ್ ಗಿಲ್ ರೊಮ್ಯಾಂಟಿಕ್ ಡೇಟ್ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ನಿಹಾರಿಕಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಶುಭ್‌ಮನ್ ಗಿಲ್ ಹಾಗೂ ನಿಹಾರಿಕಾ ಅವರ ಜತೆಗಿನ ಮಾತುಕತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, 39 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. ನಿಹಾರಿಕಾಗಾಗಿ ಶುಭ್‌ಮನ್ ಗಿಲ್ ಸ್ವತಃ ಸ್ಪೈಡರ್ ಮನ್ ಆಗಿ ಬದಲಾಗಿದ್ದಾರೆ. ಆದರೆ ಈ ವಿಡಿಯೋ ನೋಡುತ್ತಿದ್ದಂತೆ ಬಗೆ ಬಗೆಯಾಗಿ ಕಮೆಂಟಿಸಿರೋ ನೆಟ್ಟಿಗರು, ಸಾರಾ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.
