Home » ಹಸೆಮಣೆ ಏರಲು ರೆಡಿಯಾದ ಬಾಲಿವುಡ್ ಜೋಡಿ; ಜೈಸಲ್ಮೇರ್ ಅರಮನೆಯಲ್ಲಿ ಕಿಯಾರ-ಸಿದ್ಧಾರ್ಥ್ ಮದುವೆಗೆ ಸಿದ್ದತೆ!

ಹಸೆಮಣೆ ಏರಲು ರೆಡಿಯಾದ ಬಾಲಿವುಡ್ ಜೋಡಿ; ಜೈಸಲ್ಮೇರ್ ಅರಮನೆಯಲ್ಲಿ ಕಿಯಾರ-ಸಿದ್ಧಾರ್ಥ್ ಮದುವೆಗೆ ಸಿದ್ದತೆ!

0 comments

ಬಾಲಿವುಡ್​ನ ಮತ್ತೊಂದು ಜೋಡಿ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿವೆ. ಹೌದು!!! ಹೊಸ ವರ್ಷದ ಹೊಸ್ತಿಲಲ್ಲಿ ಸಿನಿ ಇಂಡಸ್ಟ್ರಿಯ ಕ್ಯೂಟ್ ಕಪಲ್ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಶೇರ್‌ಷಾ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ.ಬಿಟೌನ್‌ನಲ್ಲಿ ಮತ್ತೊಂದು ಜೋಡಿ ಹಸೆಮಣೆ (Wedding Knot) ಏರಲು ರೆಡಿಯಾಗಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪ್ರೀತಿಸುತ್ತಿದ್ದರು. ಇದೀಗ, ಬಾಲಿವುಡ್‌ನ ಮುದ್ದಾದ ಜೋಡಿ ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani) ಮದುವೆಯ ಶುಭ ಸುದ್ದಿಗೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜೈಸಲ್ಮೇರ್ ಅರಮನೆಯಲ್ಲಿ ಈ ಜೋಡಿಯ ಅದ್ಧೂರಿ ಮದುವೆ ನಡೆಯಲಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂಬ ಮಾಹಿತಿಯನ್ನು ಉದ್ಯಮದ ಕೆಲವು ಮೂಲಗಳು ಸಿದ್-ಕಿಯಾರಾ ಮ್ಯಾರೇಜ್ ಸೀಕ್ರೆಟ್ ರಟ್ಟು ಮಾಡಿದೆ.

ಜೈಸಲ್ಮೇರ್ ಪ್ಯಾಲೇಸ್ ಹೋಟೆಲ್ ರಾಜಸ್ಥಾನದ ಹೃದಯಭಾಗದಲ್ಲಿರುವ ವಿಸ್ತಾರವಾದ ಫೋರ್ಟ್-ಸ್ಟೈಲ್ ಲಕ್ಷುರಿ ಪ್ಲೇಸ್ ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆ ಸಮಾರಂಭ ಭರ್ಜರಿಯಾಗಿ ನಡೆಯಲಿದ್ದು, ಹೀಗಾಗಿ ಪೂರ್ವ ಸಿದ್ಧತೆ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ.

ಫೆಬ್ರವರಿ ಮೊದಲ ವಾರದಲ್ಲಿ ಈ ಜೋಡಿಯ ಮದುವೆ ದಿನ ನಿಶ್ಚಯ ಮಾಡಲಾಗಿದೆ ಎಂದು ETimes ತಿಳಿಸಿದೆ. ಈ ಮೂಲಕ ಬಾಲಿವುಡ್​ನ ಮತ್ತೊಂದು ಜೋಡಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಸಿದ್ಧಾರ್ಥ್ ಮತ್ತು ಕಿಯಾರಾ ಫೆಬ್ರವರಿ 6 ರಂದು ಮದುವೆಯಾಗಲಿದ್ದು, ಇವರ ಮದುವೆಯ ಪೂರ್ವ ಕಾರ್ಯಕ್ರಮಗಳು ಫೆಬ್ರವರಿ 4 ಮತ್ತು 5 ರಂದು ನಡೆಯಲಿವೆ ಎನ್ನಲಾಗಿದೆ.

ಮದುವೆ ಫೆಬ್ರವರಿ 6 ರಂದು ಜೈಸಲ್ಮೇರ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ಇದು ಹೆಚ್ಚಿನ ಭದ್ರತೆಯೊಂದಿಗೆ ಅದ್ದೂರಿ ಕಾರ್ಯಕ್ರಮವಾಗಲಿದೆ ಎಂದು ಕೆಲವು ಬಲ್ಲ ಮೂಲಗಳು ತಿಳಿಸಿದ್ದು ಅಲ್ಲಿ ಅವರ ಅತಿಥಿಗಳು ಮತ್ತು ಕುಟುಂಬಗಳು ಸಾಂಪ್ರದಾಯಿಕ, ಮೆಹೆಂದಿ, ಹಲ್ದಿ ಮತ್ತು ಸಂಗೀತ ಸಮಾರಂಭಗಳು ಅದ್ದೂರಿಯಾಗಿ ನಡೆಯಲಿದೆ.

You may also like

Leave a Comment