Home » Sonu Shrinivas Gowda : ಮಾಜಿ ಸಿಎಂ ಜೊತೆ ಸೋನು ಶ್ರೀನಿವಾಸ್ ಗೌಡ ಫೋಟೋ ವೈರಲ್!!

Sonu Shrinivas Gowda : ಮಾಜಿ ಸಿಎಂ ಜೊತೆ ಸೋನು ಶ್ರೀನಿವಾಸ್ ಗೌಡ ಫೋಟೋ ವೈರಲ್!!

407 comments

Sonu Shrinavas Gowda: ಟಿಕ್ ಟಾಕ್ ಸ್ಟಾರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಎಲ್ಲರಿಗೂ ಪರಿಚಿತ. ಯಾಕೆ ಏನು ಮಾಡಿದರೂ ಕೂಡ ಇಂದು ಟ್ರೆಂಡ್ ಆಗುತ್ತದೆ. ಒಂದು ಫೋಟೋ ಹಾಕಲಿ, ವಿಡಿಯೋ ಅಪ್ಲೋಡ್ ಮಾಡಲಿ ಎಲ್ಲವೂ ವೈರಲ್ ಆಗುತ್ತದೆ. ಅಂತೆಯೇ ಇದೀಗ ಆಕೆ ಮಾಜಿ ಸಿಎಂ ಒಬ್ಬರ ಜೊತೆ ಇರುವ ಫೋಟೋ ವೈರಲ್ ಆಗುತ್ತಿದೆ.

ಸೋನು ಗೌಡ(Sonu Shrinivas Gowda )ಅವರು ಇತ್ತೀಚಿಗಷ್ಟೇ ಹೊಸ ಮನೆ ಖರೀದಿ ಮಾಡಿ, ಅದರ ಗೃಹಪ್ರವೇಶ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದರು. ಈ ಬೆನ್ನಲ್ಲೇ ಇದೀಗ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(B S Yadiyurappa )ಅವರೊಡನೆ ಇರುವಂತಹ ಫೋಟೋ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು, ಸೋನು ಶ್ರೀನಿವಾಸ್ ಗೌಡ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪಕ್ಕ ಕುಳಿತು ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಅವರ ಜೊತೆಯಲ್ಲಿಯೇ ವಿಮಾನ ನಿಲ್ಧಾಣದಲ್ಲಿ ಬಸ್ ನಲ್ಲಿ ಪ್ರಯಾಣವನ್ನು ಮಾಡಿದ್ದಾರೆ. ಸದ್ಯಕ್ಕೆ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊಗೆ ಸೋನು ಗೌಡ ನನ್ನ ಜೀವನದಲ್ಲಿ ಕಂಡಂತ ಮೊದಲ ಮುಗ್ಧ ಮನಸಿನ ಮನುಷ್ಯ ಇವರೆ ಎಂದು ಕ್ಯಾಪ್ಷನ್ ನೀಡಿದ್ದು, ಫೋಟೊ ಕಂಡು ಎಲ್ಲಿಂದ ಎಲ್ಲಿಗೆ ಲಿಂಕ್ ಆಗಿದೆ ಗುರು ಇದು ಎಂದು ಒಬ್ಬರು ಹುಬ್ಬೇರಿಸಿದ್ದಾರೆ. ನೆಟ್ಟಿಗರು ಬಗೆ ಬಗೆಯ ಕಮೆಂಟ್ ಮಾಡಿದ್ದಾರೆ.

 

You may also like

Leave a Comment