Home » Actress Janhvi Kapoor : ತನ್ನ ಪ್ರಿಯಕರನ ಜೊತೆ ಕಂಡು ಬಂದ ಶ್ರೀದೇವಿ ಮಗಳು ಜಾನ್ವಿ ಕಪೂರ್‌!

Actress Janhvi Kapoor : ತನ್ನ ಪ್ರಿಯಕರನ ಜೊತೆ ಕಂಡು ಬಂದ ಶ್ರೀದೇವಿ ಮಗಳು ಜಾನ್ವಿ ಕಪೂರ್‌!

5 comments
Actress Janhvi Kapoor

Actress Janhvi Kapoor : ಬಾಲಿವುಡ್ ನಲ್ಲಿ ಪ್ರೀತಿ, ಡೇಟಿಂಗ್, ಲಿವಿಂಗ್ ರಿಲೇಷನ್ ಶಿಪ್ ಕಾಮನ್ ಆಗಿ ಹೋಗಿದೆ. ಇತ್ತೀಚೆಗೆ ಬಾಲಿವುಡ್‌ ನಟ ನಟಿಯರು ರಿಲೇಶನ್ ಶಿಪ್ ಬಗ್ಗೆ ಏನೂ ಹೇಳದೆ ಜನರಿಗೆ ಕನ್ಫ್ಯೂಸ್ ಮಾಡಿ ಬಿಡುತ್ತಾರೆ. ಇದೀಗ ಬಾಲಿವುಡ್ ನಟಿ ಜಾನ್ವಿ ಕಪೂರ್ ( Actress Janhvi Kapoor)ಅವರು ಬಾಯ್ ಫ್ರೆಂಡ್ ನ ಜೊತೆ ಕಾಣಿಸಿಕೊಂಡಿರುವ ವೀಡಿಯೋ ಸಕತ್ ವೈರಲ್ ಆಗಿದೆ.

ಮುಂಬೈ ನ ಏರ್ಪೋರ್ಟ್ ನಲ್ಲಿ ತಮ್ಮ ಬಾಯ್ ಫ್ರೆಂಡ್ ಆದ ಶಿಖರ್ ಪಹಾರಿಯಾ ಜೊತೆ ಹೊರ ಬಂದಿದ್ದಾರೆ. ಜಾನ್ವಿ ಕಪೂರ್ ಅವರು ನೀತಾ ಅಂಬಾನಿ ಈವೆಂಟ್ ಗೆ ಶಿಖರ್ ಜೊತೆ ತೆರಳಿದ್ದು, ಇಬ್ಬರು ಕೂಡ ಟ್ವಿನ್ನಿಂಗ್ ಆಗಿ ವೈಟ್ ಡ್ರೆಸ್ ತೊಟ್ಟು ಈವೆಂಟ್ ಗೆ ಹಾಜರಾಗಿದ್ದಾರೆ. ಆದರೆ ಇಬ್ಬರೂ ಈವೆಂಟ್ ಮುಗಿಸಿ ಏರ್ ಪೋರ್ಟ್ ಗೆ ಬಂದ ತಕ್ಷಣ ಬೇರೆ ಬೇರೆ ಕಾರ್ ನಿಂದ ಹೊರಟಿದ್ದಾರೆ.

ಜಾನ್ವಿ ಹಾಗೂ ಶಿಖರ್ ಇಬ್ಬರು ಕೂಡ ಬಳಹ ದಿನದಿಂದ ಡೇಟಿಂಗ್ ನಲ್ಲಿ ಇದ್ದಾರೆ. ಹಾಗೆಯೇ ಸಾಕಷ್ಟು ಬಾರಿಯು ಪಬ್ಲಿಕ್ ನಲ್ಲಿ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ದಲ್ಲಿ ಇಬ್ಬರ ಮೇಲೆ ಬಾರಿ ಗಾಸಿಪ್ ಕೇಳಿ ಬರುತ್ತಿದ್ದರು, ಇಬ್ಬರು ಕೂಡ ಈ ವಿಷಯಕ್ಕೆ ತಲೆ ಕೊಡದೆ ಸುಮ್ಮನೆ ಇದ್ದಾರೆ. ಶಿಖರ್ ಅವರು ಪೊಲಿಟಿಕಲ್ ಫ್ಯಾಮಿಲಿ ಅವರು. ಶಿಖರ್ ಅವರು ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ.
ಶಿಖರ್ ಮತ್ತು ಜಾನ್ವಿ ರಿಲೇಶನ್ ಶಿಪ್ ಬಗ್ಗೆ ಬ್ರೇಕ್ ಅಪ್ ಅಗಿದೆ ಎಂದು ಹಲವಾರು ಗಾಸಿಫ್ ಕೇಳಿ ಬಂದಿತ್ತು ಆದರೆ ಇದೀಗ ಅದು ಸುಳ್ಳು ಎಂದು ಗೊತ್ತಾಗುತ್ತಿದೆ. ನೀತಾ ಅಂಬಾನಿ ಈವೆಂಟ್ ಗೆ ಹೋಗಿದ್ದ ಶಿಖರ್ ಬೋನಿ ಕಪೂರ್ ಅವರ ಜೊತೆ ಕೂಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಕೂಡ ಸಕತ್ ವೈರಲ್ ಆಗಿದೆ.
ಇಷ್ಟಲ್ಲಾದೆ ಕಾಫಿ ವಿತ್ ಕರಣ್ ರಿಯಾಲಿಟಿ ಶೋ ನಲ್ಲಿ ಜಾನ್ವಿ – ಶಿಖರ್ ಇಬ್ಬರ ಲವ್ವಿ ಡವ್ವಿ ಮಾತು ಕೇಳಿ ಬರುತ್ತಿದೆ.

ಜಾನ್ವಿ ಕಪೂರ್ ಅವರು ಇದಕ್ಕೂ ಮೊದಲು ತನ್ನ ಬಾಲ್ಯದ ಗೆಳೆಯ ಅಕ್ಷತ್ ಜೊತೆ ಡೇಟಿಂಗ್ ನೆಡೆಸಿದ್ದರು, ಆದರೆ ಬ್ರೇಕ್ ಅಪ್ ಆಗಿದೆ. ನಂತರ ಇಬ್ಬರೂ ಒಂದೊಳ್ಳೆ ಸ್ನೇಹಿತರಾಗಿ ಇದ್ದಾರೆ. ಇದೀಗ ಜಾನ್ವಿ ಶಿಖರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮುಂದೆ ಇಬ್ಬರು ಮದುವೆ ಆಗುತ್ತಾರಾ ಎಂದು ಕಾದು ನೋಡಬೇಕಷ್ಟೆ.

You may also like

Leave a Comment