Home » ಅಭಿಷೇಕ್-ಅವಿವಾ ಅದ್ದೂರಿ ಬೀಗರೂಟಕ್ಕೆ ಆಹ್ವಾನಿಸಿದ ಸುಮಲತಾ

ಅಭಿಷೇಕ್-ಅವಿವಾ ಅದ್ದೂರಿ ಬೀಗರೂಟಕ್ಕೆ ಆಹ್ವಾನಿಸಿದ ಸುಮಲತಾ

0 comments

Marriage : ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್  ಹಾಗೂ ಅವಿವಾ ಬಿದಪ್ಪ ಮದುವೆ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ(Marriage)ಮಾಡಿಕೊಂಡಿದ್ದರು.

ಜೂನ್ 16ರಂದು (ನಾಳೆ) ಮಂಡ್ಯದ ಮದ್ದೂರಿನ ಗಜ್ಜಲಗೆರೆಯಲ್ಲಿ ಭರ್ಜರಿ ಔತಣಕೂಟವನ್ನು ಆಯೋಜಿಸಲಾಗಿದೆ.  ಔತಣಕೂಟಕ್ಕೆ ನೂತನ ವಧು-ವರ ಅಭಿಷೇಕ್-ಅವಿವಾ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಅಭಿಮಾನಿಗಳನ್ನು ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.

ಈಗಾಗಲೇ ಸುಮಾರು 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ಗಳನ್ನು ಹಾಕಲಾಗುತ್ತಿದ್ದು, ಎಲ್ಲರಿಗೂ ನೆರಳಿನಲ್ಲಿ ಕುಳಿತು ಆರಾಮಾಗಿ ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಿಐಪಿ ಹಾಗೂ ಸಾಮಾನ್ಯರಿಗಾಗಿ ಎರಡು ಕೌಂಟರ್​ಗಳನ್ನು ಮಾಡಲಾಗುತ್ತಿದೆ. ಬೀಗರೂಟಕ್ಕೆ ಭರ್ಜರಿ ಬಾಡೂಟದ ಮೆನು ತಯಾರಾಗಿದೆ. 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಅನ್ನು ಬಳಸಿ ಬೀಗರೂಟ ತಯಾರು ಮಾಡಲಾಗುತ್ತಿದೆ. ಜೂನ್ 16ರಂದು ಬೆಳಿಗ್ಗೆ 11ಗಂಟೆಯಿಂದಲೇ ಊಟದ ವಿತರಣೆ ಆರಂಭವಾಗಲಿದೆ.

ಇದನ್ನೂ ಓದಿ : ಎಸ್’ಬಿಐನಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ ! 70 ಸಾವಿರ ಸಂಬಳ !ಅರ್ಜಿ ಸಲ್ಲಿಸಲು ಜೂ.21 ಕೊನೆಯ ದಿನ !

You may also like

Leave a Comment