Home » Meena : ‘ ನನ್ನ ತಾಯಿ ನಟಿ ಮಾತ್ರವಲ್ಲ, ನಿಮ್ಮಥರ ಮನುಷ್ಯಳು ‘ ಸುಳ್ಳು ಸುದ್ದಿ ಬಗ್ಗೆ ಮೀನಾ ಮಗಳ ವಿಡಿಯೋ ನೋಡಿ ರಜನಿ ಕಣ್ಣೀರು !

Meena : ‘ ನನ್ನ ತಾಯಿ ನಟಿ ಮಾತ್ರವಲ್ಲ, ನಿಮ್ಮಥರ ಮನುಷ್ಯಳು ‘ ಸುಳ್ಳು ಸುದ್ದಿ ಬಗ್ಗೆ ಮೀನಾ ಮಗಳ ವಿಡಿಯೋ ನೋಡಿ ರಜನಿ ಕಣ್ಣೀರು !

1 comment
Actress Meena

Actress Meena : ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಪ್ರವೇಶಿಸಿ ಸ್ಟಾರ್ ಹಿರೋಯಿನ್ ಆಗಿ ಮೆರೆದ ನಟಿ ಮೀನಾ (Actress Meena) ಇವರು ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿರುವಾಗಲೇ 2009 ಜುಲೈ 12 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರನ್ನು ಮದುವೆಯಾದರು. ಆದರೆ 2022 ಜೂನ್ 28 ರಂದು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ವಿದ್ಯಾಸಾಗರ್ ಸಾವನ್ನಪ್ಪಿದರು.

ವಿದ್ಯಾಸಾಗರ್ – ಮೀನಾ ದಂಪತಿಗೆ ನೈನಿಕಾ ಎಂಬ ಪುತ್ರಿಯಿದ್ದು, ಸದ್ಯ ಮೀನಾ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಪತಿಯ ಅಗಲಿಕೆಯ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ.

ನಟಿ ಮೀನಾ ಅವರು ಸುಮಾರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದು, ಇವರು ಕಮಲ್ ಹಾಸನ್, ರವಿಚಂದ್ರನ್, ರಜಿನಿಕಾಂತ್ , ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ, ಸೇರಿದಂತೆ ಅನೇಕ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ.

ಕಳೆದ ತಿಂಗಳು ಚೆನ್ನೈನಲ್ಲಿ ಮೀನಾ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಮಿಳು ಚಿತ್ರರಂಗದ ಎಲ್ಲ ನಟ ನಟಿಯರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಹುಭಾಷಾ ತಾರೆಯಾಗಿ ಮಿಂಚಿದ ಮೀನಾ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ರಜನಿಕಾಂತ್, ಬೋನಿ ಕಪೂರ್, ರಾಧಿಕಾ, ರೋಜಾ, ಸಾಂಘವಿ, ಸ್ನೇಹಾ, ಪ್ರಭುದೇವ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಎಲ್ಲರೂ ವೇದಿಕೆಯ
ಮೇಲೆ ಮೀನಾ ಜೊತೆಗಿನ ಒಡನಾಟದ ಸುಂದರ ನೆನಪನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನೈನಿಕಾ ತಾಯಿ ಬಗ್ಗೆ ಮಾತನಾಡಿದ ವಿಡಿಯೋವನ್ನು ಮೀನಾಗೆ ಸರ್ಪ್ರೈಸ್ ಆಗಿ ತೋರಿಸಲಾಯಿತು.

“ಅಮ್ಮಾ, ನೀನು ಈ ಮಟ್ಟಕ್ಕೆ ಬಂದಿದ್ದಕ್ಕೆ ನಿಜಕ್ಕೂ ಹೆಮ್ಮೆಯಾಗುತ್ತದೆ. ನನ್ನ ತಂದೆಯ ಮರಣದ ನಂತರ ನೀವು ಖಿನ್ನತೆಗೆ ಒಳಗಾಗಿದ್ದೀರಿ. ನೀವು ಮಾನಸಿಕವಾಗಿ ಕುಗ್ಗಿದ್ದೀರಿ. ಇನ್ನು ಮುಂದೆ ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ. ಇತ್ತೀಚೆಗೆ ಸುದ್ದಿ ವಾಹಿನಿಗಳು ನಿಮ್ಮ ಬಗ್ಗೆ ಸುಳ್ಳು
ಸುದ್ದಿಗಳನ್ನು ಬರೆಯುತ್ತಿವೆ. ನನ್ನ ತಾಯಿಯೂ ಎಲ್ಲರಂತೆ ಮನುಷ್ಯಳು , ಅವಳಲ್ಲಿ ಭಾವನೆಗಳಿವೆ. ದಯವಿಟ್ಟು ಇಂತಹ ಸುದ್ದಿಗಳನ್ನು ಬರೆಯಬೇಡಿ’ ನನ್ನ ಜಾಗದಲ್ಲಿ ಅಥವಾ ನನ್ನ ತಾಯಿಯ ಜಾಗದಲ್ಲಿ ನೀವು ಇರುತ್ತಿದ್ದರೆ ನಿಮಗೂ ನೋವು ಆಗುವುದು ತಾನೇ ‘ಎಂದು ನೈನಿಕಾ ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.

ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಮ್ಮನ ಬಗೆಗಿನ ಮಗಳ ಮಾತು ಕೇಳಿ ಅಭಿಮಾನಿಗಳ ಮೆಚ್ಚುಗೆ ಮಳೆ ಸುರಿದು ಬಂದಿದೆ.

ಈ ವಿಡಿಯೋ ನೋಡಿದ ಸೂಪರ್ ಸ್ಟಾರ್ ರಜಿನಿಕಾಂತ್ ಕಣ್ಣೀರು ಹಾಕಿದ್ದು, ಇತರ ಸೆಲೆಬ್ರಿಟಿಗಳು ಕೂಡ ಭಾವುಕರಾಗಿದ್ದಾರೆ.

 

https://twitter.com/MeenaNavy/status/1649597298232680448?ref_src=twsrc%5Etfw%7Ctwcamp%5Etweetembed%7Ctwterm%5E1649597298232680448%7Ctwgr%5E093e946d8d4e28244dd078c2e067951941a938e9%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fetvbhar9348944527258-epaper-dhe46362e26f294ed08ae8553c01d72a73%2Ftaayiyumanushyalesullusuddiharadabediminamagalubhaavukarajinikanniru-newsid-n492597010

 

 

ಇದನ್ನು ಓದಿ: Rahul Gandhi: ನಾಳೆ ಮತ್ತೊಮ್ಮೆ ರಾಜ್ಯಕ್ಕೆ ಕೇಂದ್ರ ನಾಯಕ ರಾಹುಲ್‌ ಗಾಂಧಿ ಆಗಮನ; ಬಾಗಲಕೋಟೆ, ವಿಜಯಪುರ ಜಿಲ್ಲೆ ಪ್ರವಾಸ

You may also like

Leave a Comment