Home » Silk Smitha: ಸಿಲ್ಕ್ ಸ್ಮಿತಾ ಅಂತಿಮ ದರ್ಶನಕ್ಕೆ ಹೋಗಿದ್ದು ಕನ್ನಡದ ಆ ಸ್ಟಾರ್ ನಟ ಮಾತ್ರ, ಏನಿತ್ತು ಅವರಿಬ್ಬರ ನಡುವಿನ ಬಾಂಧವ್ಯ ?!

Silk Smitha: ಸಿಲ್ಕ್ ಸ್ಮಿತಾ ಅಂತಿಮ ದರ್ಶನಕ್ಕೆ ಹೋಗಿದ್ದು ಕನ್ನಡದ ಆ ಸ್ಟಾರ್ ನಟ ಮಾತ್ರ, ಏನಿತ್ತು ಅವರಿಬ್ಬರ ನಡುವಿನ ಬಾಂಧವ್ಯ ?!

0 comments
Silk Smitha

Silk Smitha: ಒಂದು ಕಾಲದಲ್ಲಿ ಸಿಲ್ಕ್ ಇದ್ದಾಳೆ ಅಂದ್ರೆ ಪಿಕ್ಚರ್(picture) ಓಡೋ ಕಾಲ ಇತ್ತು. ಕೇವಲ ಪಡ್ಡೆ ಹುಡುಗರ ಮಾತ್ರವಲ್ಲ, ವಯಸ್ಸೇರಿದ ಅಂಕಲ್ ಅಜ್ಜಂದಿರ ತನಕ ಆಕೆಯ ಮೇಲೆ ಮೋಹ ಮೂಡಿಸಿಕೊಳ್ಳದ ಜನ ಯಾರಿದ್ದಾರೆ ಹೇಳಿ ?! ಆ ಮಾಂತ್ರಿಕ ಕಣ್ಣು, ಅರೆ ಬಿರಿದುಕೊಂಡು ಆಹ್ವಾನಿಸುವ ಕೆಂದುಟಿ, ಮೈಯ ಮಿರುಗು ಬಣ್ಣ, ಅತ್ತ ಹೆಚ್ಚು ಅನ್ನಿಸದ, ಕಮ್ಮಿ ಅಲ್ಲವೇ ಅಲ್ಲ ಅಂತನ್ನಿಸುವ ಎದೆ, ಬುಗುರಿಯ ಬಿಗುವಿನಲ್ಲಿ ಗಿರಕಿ ಆಡುವ ಸೊಂಟ – ಅವೆಲ್ಲದರ ಒಟ್ಟು ಕಾಂಬಿನೇಶನ್ ಅಂದ್ರೆ ಅದು ಸಿಲ್ಕ್, ಸಿಲ್ಕ್ ಸ್ಮಿತಾ(Silk Smitha) !

ಸಿನಿ ಜಗತ್ತನ್ನು ತನ್ನದೇ ರೀತಿಯಲ್ಲಿ ನಿಯಂತ್ರಿಸಿ ನಿದ್ದೆ ಕೆಡಿಸಿದ್ದ ನಟಿ ಸಿಲ್ಕ್‌ ಸ್ಮಿತಾ ಸಾವು(death) ಇಂದಿಗೂ ನಿಗೂಢವಾಗಿಯೇ ಇದೆ. 1996ರ ಸೆಪ್ಟೆಂಬರ್ 23ರಂದು ಆಕೆಯ ಮೃತ ದೇಹ ಚೆನ್ನೈನಲ್ಲಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆ ಆಗಿತ್ತು. ಅಂದು ಚಿತ್ರರಂಗದ ಸ್ಟಾರ್‌ ನಟ- ನಟಿಯರು ಯಾರೊಬ್ಬರು ಕೂಡ ಆಕೆಯ ಅಂತಿಮ ದರ್ಶನಕ್ಕೆ ಬರಲಿಲ್ಲವಂತೆ. ಅನಾಥ ಶವದಂತೆ ಆಕೆಯ ಅಂತ್ಯಕ್ರಿಯೆ ನಡೆದಿತ್ತು. ಆದರೆ ಅದೊಬ್ಬ ಕನ್ನಡ ನಟ ಮಾತ್ರ ಆಕೆಯ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದಾನೆ. ಆತ ಯಾರು, ಆತ ಯಾಕೆ ಹೋದ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದೆ ಅಂದುಕೊಳ್ಳುತ್ತೇನೆ.

ಸಿಲ್ಕ್‌ ಸ್ಮಿತಾ ನಟಿಯಾಗಿ ಮಿಂಚಿದ್ದಕ್ಕಿಂತ ಐಟಂ ಡ್ಯಾನ್ಸರ್ ಆಗಿ ಕುಣಿದಿದ್ದೇ ಹೆಚ್ಚು. ಆಕೆಯ ಮಾದಕ ಮೈಮಾಟ ತೆರೆಮೇಲೆ ಚೆಲ್ಲಾಪಿಲ್ಲಿ ಆಟವಾಡಿದೆ. ಮೋಡಿ ಮಾಡಿದ ಸಿಲ್ಕ್‌ ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದರು. ಇತ್ತೀಚೆಗೆ ಈಕೆಯ ನಿಜ ಜೀವನವನ್ನಾಧರಿಸಿ ಬಾಲಿವುಡ್‌ನಲ್ಲಿ ‘ಡರ್ಟಿ ಪಿಕ್ಚರ್’ ಸಿನಿಮಾ ಕೂಡಾ ಬಂದು ಸೂಪರ್ ಹಿಟ್ ಆಗಿತ್ತು. ಬಡ ಕುಟುಂಬದಿಂದ ಚಿತ್ರರಂಗಕ್ಕೆ ಬಂದು ಸ್ಟಾರ್ ಆಗಿ ಮೆರೆದ ದುರಂತ ಈ ನಟಿಯ ಅಂತ್ಯ ಮಾತ್ರ ದುರಂತದ ಕಥೆ.

ಆಕೆಯ ಆಪ್ತರೇ ಆಸ್ತಿಗಾಗಿ ಆಕೆಗೆ ಮೋಸ ಮಾಡಿದ್ದರು. ಅದು ಗೊತ್ತಾಗಿ ಆಕೆ ಖಿನ್ನತೆಗೆ ಒಳಗಾಗಿದ್ದರು. ಕೊನೆಗೆ 1996 ರಲ್ಲಿ ಬಣ್ಣದ ಲೋಕಕ್ಕೇ ವಿದಾಯ ಹೇಳಿ ಬಾರದ ಲೋಕಕ್ಕೆ ಹೊರಟುಬಿಟ್ಟಳು. ತೀರಾ ಇತ್ತೀಚೆಗೆ ನಟಿಯರು ಐಟಂ ಡ್ಯಾನ್ಸ್ ಗೆ ಬರುವವರೆಗೆ ಸಿಲ್ಕ್ ಇಲ್ಲದೆ ಸ್ಕ್ರೀನ್ ಸೊರಗಿತ್ತು ಅನ್ನುವಷ್ಟರ ಮಟ್ಟಿಗೆ ಆಕೆ ತನ್ನ ಪಾತ್ರಕ್ಕೆ ಸರ್ವಸ್ವವನ್ನೂ ಕೊಟ್ಟು ನಟಿಸಿದ್ದಳು.

ಆದರೆ ಆಕೆಯ ನಿಧನ ಆಗ ಚಿತ್ರರಂಗಕ್ಕೆ ಶಾಕ್ ತಂದಿತ್ತು. ಆಕೆ ಅದೆಷ್ಟು ಫೇಮಸ್ ಆಗಿದ್ದರೂ ಸಿಲ್ಕ್‌ ಸ್ಮಿತಾ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಚಿತ್ರದಿಂದ ಯಾರೂ ಹೋಗಿರಲಿಲ್ಲ. ಕೆಲವೇ ಕೆಲವರು ಮಾತ್ರ ಅಂತಿಮ ನಮನ ಸಲ್ಲಿಸಿದ್ದರು. ಅವರಲ್ಲಿ ಕನ್ನಡದ ನಟ ಅರ್ಜುನ್‌ ಸರ್ಜಾ ಕೂಡಾ ಒಬ್ಬರು. ಅಂದು ಆಕೆಯ ನಿವಾಸಕ್ಕೆ ಅಂತಿಮ ದರ್ಶನಕ್ಕೆ ಹೋಗಿದ್ದ ಸ್ಟಾರ್ ನಟ ಅವರೊಬ್ಬರೇ ಅಂತೆ. ಈ ವಿಷಯವನ್ನು ಸಿನಿ ಪತ್ರಕರ್ತ ತೋಟ ಭಾವ ನಾರಾಯಣ್‌ ಎನ್ನುವವರು ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸ್ಟಾರ್‌ ನಟ-ನಟಿಯರು ಯಾರೊಬ್ಬರು ಬರದಿದ್ರು, ಅರ್ಜುನ್ ಸರ್ಜಾ ಬಂದಿದ್ದು ಕೆಲವರಿಗೆ ಅಚ್ಚರಿ ತಂದಿತ್ತು. ಸಿಲ್ಕ್ ಸ್ಮಿತಾ ಮತ್ತು ಅರ್ಜುನ್ ಸರ್ಜಾ ನಡುವೆ ಅಂತಹ ಬಾಂಧವ್ಯ ಏನಿತ್ತು ?!

ಹೌದು, ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ ಅರ್ಜುನ್ ಸರ್ಜಾ – ಸಿಲ್ಕ್ ಸ್ಮಿತಾ ಆತ್ಮೀಯ ಸ್ನೇಹಿತರಾಗಿದ್ದರು. ಸಿಲ್ಕ್‌, ಅರ್ಜುನ್ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದರು. ಚಿತ್ರೀಕರಣದ ಸಮಯದಲ್ಲಿ ಸಿಲ್ಕಿಸ್ಮಿತಾ ಅಧ್ಯಾಕೆ ಹಾಗೆ ಹೇಳಿದಳೋ ಗೊತ್ತಿಲ್ಲ: “ಒಂದು ವೇಳೆ ನಾನು ಸತ್ತರೆ ನೋಡೊಕೆ ಬರ್ತೀಯಾ ಅಲ್ವಾ ಸರ್ಜಾ ?” ಎಂದು ಆಕೆ ಅರ್ಜುನ್ ಸರ್ಜಾರನ್ನು ಕೇಳಿದ್ದಳು. ಅದನ್ನು ತಮಾಷೆಯಾಗಿ ತೆಗೆದುಕೊಂಡು ಖಂಡಿತ ಬರ್ತೇನೆ ಅಂದಿದ್ದರು ಸರ್ಜಾ. ಆದರೆ ಶೀಘ್ರದಲ್ಲಿಯೇ ಆ ದಿನ ಬಂದಿತ್ತು. ತಾನು ಭರವಸೆ ಕೊಟ್ಟಂತೆ ಅರ್ಜುನ್ ಸರ್ಜಾ ಅವರು, ಇರುವ ಕೆಲಸ ಬಿಟ್ಟು ಚೆನ್ನೈಗೆ ಧಾವಿಸಿದ್ದರು. ಬಣ್ಣದ ಲೋಕಕ್ಕೆ ಹೊಸ ಮೆರುಗು ತಂದ ಸಿಲ್ಕ್ ಬಣ್ಣ ಮಾಸಿ ಅಲ್ಲಿ ಮಲಗಿದ್ದಳು. ಇದು ಸಿಲ್ಕ್ ಲಕ್ಷ್ಮಿ ಎಂಬ ಸದಾ ನೆನಪಾಗುವ ನಟಿಯ ಬದುಕಿನ ಒಂದು ಹೊಸ ವಿಷ್ಯ.

ಇದನ್ನೂ ಓದಿ: Actresses who got pregnant before marriage : ಮದುವೆಗೂ ಮುನ್ನ ಹೊಟ್ಟೆ ಬರಿಸಿಕೊಂಡ ಬಾಲಿವುಡ್ ಬ್ಯೂಟಿಗಳಿವರು! ಇವರ ಕಥೆಗಳೇ ಇಂಟ್ರೆಸ್ಟಿಂಗ್!

You may also like

Leave a Comment