Actress Regina Cassandra: ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ಚೇತನ್ ಜೊತೆ ನಟಿಸಿದ್ದ ರೆಜಿನಾ ಕ್ಯಾಸಂಡ್ರಾ ತಮಗೆ ಅನಿಸಿದನ್ನು ಬೋಲ್ಡ್ ಆಗಿಯೇ ಹೇಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ರಿಲೇಶನ್ ಶಿಪ್, ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡಿ ಟ್ರೋಲ್ ಆಗುವುದು ಕೂಡ ಇದೆ. ಆದರೆ ಈ ಸಲ ರೆಜಿನಾ ಸಾರ್ವಜನಿಕ ಪ್ರದೇಶದಲ್ಲಿ ತಮಗಾದ ಕಿರುಕುಳದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಸಿನಿಮಾ ನಟ-ನಟಿಯರಿಗೆ ಸಾರ್ವಜನಿಕ ಪ್ರದೇಶದಲ್ಲಿ ಕಿರುಕುಳ ಆಗಾಗ ಆಗುತ್ತಿರುತ್ತದೆ. ಫ್ಯಾನ್ಸ್ ಎಂದು ಸುತ್ತುವರೆಯುವ ಮಂದಿ ಗುಂಪಿನ ಮಂದಿ ಮೈ ಮೇಲೆ ಕೈ ಹಾಕುವ,ಅಸಭ್ಯವಾಗಿ ಫೋಟೋ, ವಿಡಿಯೋ ತೆಗೆಯುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದೇ ರೀತಿ, ರೆಜಿನಾ ಕ್ಯಾಸಂಡ್ರಾ(Actress Regina Cassandra) ಪಬ್ಲಿಕ್ ಪ್ಲೇಸ್‌ನಲ್ಲಿ ತಮಗಾದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ರೆಜಿನಾ ತಾನು ಕಂಡ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದು, ‘ನಾನು ನಡೆಯುವಾಗ ಒಬ್ಬ ವ್ಯಕ್ತಿ ನನ್ನನ್ನು ಹಿಂಬಾಲಿಸಿಕೊಂಡು ಬಂದು ವೀಡಿಯೊ ಮಾಡುತ್ತಿದ್ದ. ಮೊದಲಿಗೆ, ಇದನ್ನು ನಾನು ಗಮನಿಸಿರಲಿಲ್ಲ. ಆನಂತರ, ನನ್ನ ಗಮನಕ್ಕೆ ಬಂದಾಗ ನೇರವಾಗಿ ಹೋಗಿ ಅವನ ಮೊಬೈಲ್ ಎಳೆದುಕೊಂಡೆ ಎಂದು ನಟಿ ರೆಜಿನಾ ಹೇಳಿಕೊಂಡಿದ್ದಾರೆ.
‘ಈ ಸಂದರ್ಭದಲ್ಲಿ ಆ ವ್ಯಕ್ತಿಯ ಬಳಿ ಯಾಕೆ ನೀವು ನನ್ನ ವೀಡಿಯೊಗಳನ್ನ ಮಾಡುತ್ತಿದ್ದೀರಿ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ ನಾನು ಹಾಗೆ ಮಾಡಿಲ್ಲ ಎಂದು ವಾದ ಮಾಡಿದ.ಆದರೆ, ನಾನು ಆತನ ಮೊಬೈಲ್ ತೆಗೆದು ಗ್ಯಾಲರಿ ನೋಡಿದ ಸಂದರ್ಭ ಆತ ನಾನು ನಡೆಯುವಾಗ ನನ್ನ ಅಶ್ಲೀಲ ಭಂಗಿಗಳನ್ನು ಸೆರೆಹಿಡಿದ ವಿಚಾರ ಬೆಳಕಿಗೆ ಬಂತು. ಆ ನಂತರ ವ್ಯಕ್ತಿ ನನ್ನ ಬಳಿ ಕ್ಷಮೆಯಾಚಿಸಿದ’ ಎಂದು ನಟಿ ತಿಳಿಸಿದ್ದಾರೆ.
