Actress Nayanthara net worth: ಸ್ಯಾಂಡಲ್ವುಡ್ ಹೈ-ಪ್ರೊಫೈಲ್ ಸೆಲೆಬ್ರಿಟಿಗಳು (Sandalwood Celebrities) ಪ್ರತಿ ಚಿತ್ರಕ್ಕೂ ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ.ಅದೇ ರೀತಿ, ಭಾರತೀಯ ಚಿತ್ರರಂಗದಲ್ಲಿ ಕೋಟಿಗಳಲ್ಲಿ ಸಂಭಾವನೆ ಪಡೆಯುವವರಲ್ಲಿ ದಕ್ಷಿಣ ಭಾರತದ ಈ ನಟಿ ಕೂಡ ಒಬ್ಬರು. ಈ ನಟಿ ಜಾಹೀರಾತು ಒಂದಕ್ಕೆ ಪಡೆದ ಸಂಭಾವನೆ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರಂಟೀ!!ಈ ನಟಿ, 50 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 5 ಕೋಟಿ ರೂ. ಪಡೆಯುತ್ತಾರಂತೆ. 100 ಕೋಟಿಯ ಫ್ಲ್ಯಾಟ್ಸ್, ಐಷಾರಾಮಿ ಕಾರುಗಳನ್ನು ಹೊಂದಿರುವ ಈ ನಟಿ ಯಾರು ಗೊತ್ತಾ??
ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದ ಸೌತ್ ನಟಿ ನಯನತಾರ (Actress Nayanthara)ಕೂಡ ಒಬ್ಬರಾಗಿದ್ದು,ಚಿತ್ರರಂಗದಲ್ಲಿ ಶ್ರೀಮಂತ ನಟಿಯರ ಲಿಸ್ಟ್ ನಲ್ಲಿ(Nayanthara net worth) ನಯನತಾರ ಅವರ ಹೆಸರು ಅಗ್ರ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಹಲವಾರು ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ನಯನತಾರಾ ಹೆಚ್ಚು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ.

ಕೆಲ ವರ್ಷಗಳ ಹಿಂದೆ ಕೇವಲ ಬಾಲಿವುಡ್ ನಟಿಯರಷ್ಟೇ ಸಿನಿಮಾ ರಂಗದಲ್ಲಿ ಕೋಟಿಗಳಲ್ಲಿ ಸಂಭಾವನೆ ಗಳಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಸೌತ್ ನಟಿಯರು ಬಾಲಿವುಡ್ ನಟಿಯರನ್ನೂ ಮೀರಿಸಿ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ. ಒಂದು ಸಿನಿಮಾಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುವ ಜೊತೆಗೆ ಕೋಟಿ ಬೆಲೆಬಾಳುವ ಮನೆ, ಕಾರುಗಳನ್ನು ಕೂಡ ಹೊಂದಿದ್ದಾರೆ.
ಇದೀಗ, ನಟಿ ನಯನತಾರಾ 50 ಸೆಕೆಂಡ್‌ಗಳ ಜಾಹೀರಾತಿಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಇದರ ಜೊತೆಗೆ ನಟಿ ಇನ್ನೂ ಕೆಲವು ಜಾಹೀರಾತುಗಳಿಗೆ 4ರಿಂದ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.ನಯನತಾರಾ 100 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದು,ಇದು ತಮಿಳುನಾಡಿನಿಂದ ಮುಂಬೈವರೆಗೆ ವಿಸ್ತರಿಸಿರುವ ಅವರ ನಾಲ್ಕು ಐಷಾರಾಮಿ ಆಸ್ತಿಯಾಗಿದೆ.ಖಾಸಗಿ ಜೆಟ್‌ಗಳನ್ನು ಹೊಂದಿರುವ ಭಾರತೀಯ ನಟಿಯರ ಲಿಸ್ಟ್‌ನಲ್ಲಿ ನಯನತಾರಾ ಒಬ್ಬರಾಗಿದ್ದು, ನಯನತಾರಾ ಅವರ ಖಾಸಗಿ ಜೆಟ್ ಸುಮಾರು 50 ಕೋಟಿ ರೂಪಾಯಿ ಮೌಲ್ಯ ಹೊಂದಿದೆಯಂತೆ. ಇದರ ಜೊತೆಗೆ 1.76 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು BMW 7, 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ GLS350D ಒಳಗೊಂಡಿರುವ ನಟಿ ನಯನತಾರಾ BMW 5 ಕಾರ್ ಕಲೆಕ್ಷನ್ ಅನ್ನು ಕೂಡ ಹೊಂದಿದ್ದಾರಂತೆ.
ಇದನ್ನೂ ಓದಿ: Mangalore:ಪ್ರಯಾಣಿಕ ತಿಳಿಸಿದ ಸ್ಥಳದಲ್ಲಿ ಬಸ್ ನಿಲ್ಲಿಸದ ಕಾರಣಕ್ಕೆ ನಿರ್ವಾಹಕನಿಗೆ ಹಲ್ಲೆ ನಡೆಸಿದ ಪ್ರಯಾಣಿಕ !
