Home » Tori Bowie: ಒಲಂಪಿಕ್‌ ಚಿನ್ನದ ಪದಕ ವಿಜೇತೆ, ಅಮೇರಿಕನ್‌ ಓಟಗಾರ್ತಿ ಟೋರಿ ಬೋವಿ ಶವವಾಗಿ ಪತ್ತೆ!

Tori Bowie: ಒಲಂಪಿಕ್‌ ಚಿನ್ನದ ಪದಕ ವಿಜೇತೆ, ಅಮೇರಿಕನ್‌ ಓಟಗಾರ್ತಿ ಟೋರಿ ಬೋವಿ ಶವವಾಗಿ ಪತ್ತೆ!

1 comment
Tori Bowie

Tori Bowie: ಮೂರು ಬಾರಿ ಪದಕ ವಿಜೇತ, ಟ್ರಾಕ್ಟ್ ಮತ್ತು ಫೀಲ್ಡ್‌ನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಅಮೇರಿಕನ್ ಸ್ಪ್ರಿಂಟರ್ ಟೋರಿ ಬೋವೀ ಅವರು 32 ನೇ ವಯಸ್ಸಿನಲ್ಲಿ ನಿಧನರಾದರು ಎಂದು USA ಟ್ರಾಕ್ಟ್, ಫೀಲ್ಡ್ ಮತ್ತು ಅವರ ನಿರ್ವಹಣಾ ಕಂಪನಿ ಮಾಹಿತಿ ನೀಡಿದೆ.

ಟೋರಿ ಬೋವೀ(Tori Bowie) ಅಮೇರಿಕನ್ ಓಟಗಾರ್ತಿ ಮತ್ತು ಲಾಂಗ್ ಜಂಪರ್ ಆಗಿದ್ದು, ಕ್ರೀಡೆಯಲ್ಲಿ ಮೂರು ಪದಕಗಳು ಮತ್ತು ಎರಡು ವಿಶ್ವ ಪ್ರಶಸ್ತಿ ಗೆದ್ದಿದ್ದಾರೆ. ಟೋರಿ 2016 ರ ಒಲಂಪಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಈ ಆಟಗಳಲ್ಲಿ, ಅವರು 200 ಮೀಟರ್‌ಗಳಲ್ಲಿ ಕಂಚು ಮತ್ತು 4×100 ರಿಲೇಯಲ್ಲಿ ಚಿನ್ನದ ಪದಕವನ್ನು ಗೆದ್ದರು. ಇನ್ನೂ, 2017 ರಲ್ಲಿ ಅವರು 100 ಮೀಟರ್ಸ್ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.

ಸದ್ಯ ಟೋರಿ ಬೋವೀ ನಿಧನಕ್ಕೆ ಹಲವು ಸ್ಟಾರ್ ಆಟಗಾರರು ಕೂಡ ಸಂತಾಪ ಸೂಚಿಸಿದ್ದಾರೆ. ಟೋರಿ ಅವರ ಮೃತದೇಹ ಅವರ ಮನೆಯಲ್ಲಿ ದೊರೆತಿದ್ದು, ಸದ್ಯ ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ: ‘ರಾಧಿಕಾ ಯಾರೆಂದು ನನಗೆ ಗೊತ್ತಿಲ್ಲ, ಆಕೆಗೂ ನನಗೂ ಯಾವುದೇ ಸಂಬಂಧ ಇಲ್ಲ’ ; ಹೀಗ್ಯಾಕಂದ್ರು ಎಚ್‌.ಡಿ. ಕುಮಾರಸ್ವಾಮಿ?

You may also like

Leave a Comment